‘ಮಂಡಲ’ವೆಂದರೆ ಚಕ್ರ.ಗುಂಡು, ಸುತ್ತು ಉಂಗುರ, ಬಿಂಬ, ವರ್ತುಳ, ಕಕ್ಷೆ ಇಲ್ಲವೆ ಚಲನಪಥ. ಇದರಲ್ಲಿ ತಲೆ ಕೈಗಳನ್ನು ಸಾಲಂಬಸನದಲ್ಲಿಶೀರ್ಷಾಸನದಲ್ಲಿರುವಂತಿಟ್ಟು, ತಲೆಯ ಸುತ್ತ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ತಿರುಗುವುದು.ಪಾದಗಳ ಈ ಚಲನೆಗಳು ವರ್ತುಳಾಕಾರವಾಗಿ ರುವವು ತಲೆಯನ್ನು ಒಂದೆಡೆಯಲ್ಲಿಟ್ಟು ಮಂಡಲಾಕಾರವಾಗಿ ಪಾದಗಳನ್ನು ಅದರ ಸುತ್ತ ತಿರುಗುಸುವುದೇ ಈ ಆಸನಭಂಗಿಯ ವೈಶಿಷ್ಟ್ಯ.
ಅಭ್ಯಾಸ ಕ್ರಮ:
1.ಮೊದಲು ದ್ವೀಪಾದ ವಿಪರೀತಡದಂಡಾಸನವನ್ನು ಮಾಡಬೇಕು.
2. ಬಳಿಕ ತಲೆಯನ್ನು ಸ್ಥಾನವನ್ನು ಬದಲಿಸದೆ ಹೆಗಲು ಮತ್ತು ಎದೆಯನ್ನು ಸಾಧ್ಯವಾದಷ್ಟು ಮೇಲೆತ್ತಬೇಕು.
3. ಆಮೇಲೆ,ಕಾಲುಗಳನ್ನು ಪಕ್ಕಗಳಿಗೆ ಗಡಿಯಾರದ ಮುಳ್ಳಿನ ಚಲನೆಯ ಬಗೆಯಲ್ಲಿ ಒಂದಾದ ಮೇಲೊಂದರಂತೆ ತಲೆಯ ಸುತ್ತಲೂ ಸುತ್ತಿಸಬೇಕು.ಕಾಲುಗಳು, ಗಡಿಯಾದರಲ್ಲಿಯ ಮೂರು ಗಂಟೆಯ ಸ್ಥಾನಕ್ಕೂ 9 ಗಂಟೆಯ ಸ್ಥಾನಕ್ಕೂ ಬಂದಾಗ, ಈ ಸ್ಥಾನಕ್ಕೆ ವಿರುದ್ಧವಾದ ಭುಜವನ್ನು ಸ್ವಲ್ಪ ಮೇಲೆತ್ತಿ, ಹಾಗೆಯೇ ಎದೆಯನ್ನು ಮೇಲೆತ್ತಿ ಮುಂದೂಡಿ ಮುಂಡವನ್ನು ಗುಂಡಗೆ ಸೂಚಿಸಬೇಕು. ಇದರಿಂದ ಬೆನ್ನೆಲುಬುವಿಗೆ ಡಿಗ್ರಿ 360 ಡಿಗ್ರಿ ಗಳ ವರ್ತುಳದ ಚಲನ ದೊರಕುತ್ತದೆ.
4. ಈ ಬಗೆಯಲ್ಲಿ ಕಾಲುಗಳ ಚಲನೆಯನ್ನು ಗಡಿಯಾರದ ಮುಳ್ಳುಗಳ ಚಲನೆಯಂತೆ ಒಂದು ವರ್ತುಳ ಪೂರ್ಣವಾಗುವವರೆಗೂ ನಡೆಸಿದ ಮೇಲೆ, ಸ್ವಲ್ಪ ಹೊತ್ತು ಸುಮತ್ತನಿದ್ದು ಬಳಿಕ ಕಾಲುಗಳ ಚಲನೆಯನ್ನು ವಿರುದ್ಧ ದಿಕ್ಕಿನಲ್ಲಿ ನಡೆಸಬೇಕು.
5. ಈ ಚಲನೆಗಳಿಗೆ ಬೇಕಾದ ಸ್ಥಿತಿಸ್ಥಾಪಕತ್ವವನ್ನು ಗಳಿಸಲು ‘ಧನುರಾಸನ’ವನ್ನೂ ಮತ್ತು ‘ವಿಪರೀತ ಚಕ್ರಾಸನ’ವನ್ನೂ ಅಭ್ಯಸುವುದರ ಮೂಲಕ ಬೆನ್ನೆಲುಬುನ್ನು ಸುಲಭವಾಗಿ ಮಣಿಯುವ ಸ್ಥಿತಿಗೆ ತರುವುದು ಅತ್ಯಾವಶ್ಯಕ. ಮೊದಮೊದಲು ಕತ್ತು, ಹೆಗಲುಗಳು ನೆಲದಡೆಗೆ ಜಗ್ಗುತ್ತವೆ. ಅವು ಸಾಕಷ್ಟೂ ಶಕ್ತಿಯನ್ನು ಪಡೆದ ಬಳಿಕ ಮತ್ತು ಬೆನ್ನು ಸ್ಥಿತಿ ಸ್ಥಾಪಕವನ್ನು ಗಳಿಸಿದಮೇಲೆ ಈ ಆಸನವನ್ನು ಅಭ್ಯಸಿಸುವುದು ಸುಲಭವೆನಿಸುತ್ತದೆ.
ಪರಿಣಾಮಗಳು :
ಈ ಆಸನದ ಭಂಗಿಯಲ್ಲಾ ಗುವ ವರ್ತುಳಾಕಾರದ ಚಲನೆಗಳಿಂದಾಗಿ, ಮುಂಡ ಮತ್ತು ಕಿಬ್ಬೊಟ್ಟೆಗಳು ಒಂದು ಪಕ್ಕಕ್ಕೆ ಕುಗ್ಗುವ ಸ್ಥಿತಿಯನ್ನೂ, ಇನ್ನೊಂದು ಕಡೆಯಲ್ಲಿ ಹಿಗ್ಗುವಿಕೆಯನ್ನೂ ಅನುಭವಿಸುತ್ತವೆ. ಈಹೀಗಾಗುವುದರಿಂದ ಬೆನ್ನೆಲುಬು ಮತ್ತು ಕಿಬ್ಬಟ್ಟೆಯೊಳಗಿನ ಅಂಗಗಳು ಸರಿಯಾದ ಸ್ಥಿತಿಯಲ್ಲಿರುವಂತಾಗಿ ಆ ಮೂಲಕ ಆರೋಗ್ಯದ ಹೆಚ್ಚಳ ಮತ್ತು ಆಯುರ್ವೃದ್ಧಿ ಆಗುತ್ತದೆ.