ಮನೆ ಮನರಂಜನೆ ಫೆ.25ಕ್ಕೆ ‘ಗಂಗೂಬಾಯಿ ಕಾಠಿಯಾವಾಡಿ’ ತೆರೆಗೆ

ಫೆ.25ಕ್ಕೆ ‘ಗಂಗೂಬಾಯಿ ಕಾಠಿಯಾವಾಡಿ’ ತೆರೆಗೆ

0

ಮುಂಬೈ: ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದ ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಫೆಬ್ರುವರಿ 25ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಪೆನ್‌ ಮೂವಿಸ್‌ ಪ್ರಕಟಿಸಿದೆ.

ಮುಂಬೈನ ಕಮಾಠಿಪುರದ ಗಂಗೂಬಾಯಿ ಕೋಠೆವಾಲಿ ಎಂಬ ಮಹಿಳೆಯ ಜೀವನದ ಕಥೆಯನ್ನು ಒಳಗೊಂಡಿರುವ ಹುಸೈನ್‌ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್‌ ಆಫ್‌ ಮುಂಬೈ’ ಆಧರಿಸಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನಿರ್ಮಿಸಲಾಗಿದೆ.

ಪ್ರತಿಷ್ಠಿತ ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಮೊಟ್ಟ ಮೊದಲ ಪ್ರದರ್ಶನ ನೀಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ವೇಶ್ಯಾವಾಟಿಕೆ, ಅಲ್ಲಿನ ಪರಿಸರ ಮತ್ತು ಇಡೀ ಕಮಾಠಿಪುರವನ್ನು ತನ್ನ ಹಿಡಿತದಲ್ಲಿ ಇಟ್ಟು ಕೊಂಡಿರುವ ಮಹಿಳೆಯೇ ಗಂಗೂಬಾಯಿ. ಪೊಲೀಸ್‌, ಶಾಸಕ, ಸಂಸದ,…ಯಾರ ಮುಲಾಜಿಗೂ ಒಳಗಾಗದೆ ಗಟ್ಟಿಯಾಗಿ ನಿಂತು ತಾನು ನಂಬಿದ ವೃತ್ತಿಯಲ್ಲಿ ಮುಂದುವರಿಯುವ ಗಂಗೂಬಾಯಿಯೇ ಆಗಿದ್ದಾರೆ ಆಲಿಯಾ ಭಟ್‌. ಸಿನಿಮಾದಲ್ಲಿ ಅಜಯ್‌ ದೇವಗನ್‌ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್‌ ಲೀಲಾ ಬನ್ಸಾಲಿ ಮತ್ತು ಡಾ.ಜಯಂತಿಲಾಲ್‌ ಗಾಡಾ ಚಿತ್ರವನ್ನು ನಿರ್ಮಿಸಿದ್ದಾರೆ.

ಹಿಂದಿನ ಲೇಖನಏರ್ ಟೆಲ್ ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವ ಗೂಗಲ್
ಮುಂದಿನ ಲೇಖನಚನಲಚಿತ್ರ, ಕಿರುತೆರೆ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನ