ಮನೆ ಅಪರಾಧ ತುಂಬೆ ವಳವೂರಿನ ಮದುವೆ ಸಭಾಂಗಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ತುಂಬೆ ವಳವೂರಿನ ಮದುವೆ ಸಭಾಂಗಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

0

ಬಂಟ್ವಾಳ: ತುಂಬೆ ವಳವೂರಿನಲ್ಲಿರುವ ಮದುವೆ ಸಭಾಂಗಣವೊಂದರ ಅವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

Join Our Whatsapp Group

ಮೃತ ವ್ಯಕ್ತಿಯನ್ನು ಉಪ್ಪಿನಂಗಡಿ ವಳಾಲು ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಭವನದ ಕಂಪೌಂಡ್  ನ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿದ್ದು, ಹೊರಗಡೆಯಲ್ಲಿ ಆತನ ಬೈಕ್ ಪತ್ತೆಯಾಗಿದೆ.

ಸಾವಿಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಪೋಲೀಸ್ ಮೂಲಗಳ ಪ್ರಕಾರ ಈತ ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತುಕೊಂಡಿದ್ದು, ಆ ವೇಳೆ ನಿಯಂತ್ರಣ ಕಳೆದು ಕೆಳಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.

ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್  ಇನ್ಪೆಕ್ಟರ್ ಶಿವಕುಮಾರ್, ಪಿಎಸ್ಐ ಹರೀಶ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.