ಮನೆ ರಾಷ್ಟ್ರೀಯ 3ನೇ ದಿನವು ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ ಗಾಂಧಿಗೆ ಇಡಿ ಸಮನ್ಸ್‌

3ನೇ ದಿನವು ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ ಗಾಂಧಿಗೆ ಇಡಿ ಸಮನ್ಸ್‌

0

ನವದೆಹಲಿ (New Delhi): ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಇಂದು ಸಹ ವಿಚಾರಣೆಗೆ ಒಳಪಡಿಸಲಿದೆ.

ಜೂ.15 ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ ಗಾಂಧಿ ಅವರಿಗೆ ಸಮನ್ಸ್‌ ನೀಡಿದೆ. ಈಗಾಗಲೇ ಸತತ ಎರಡು ದಿನ ವಿಚಾರಣೆಗೆ ಹಾಜರಾಗಿದ್ದ ರಾಹುಲ್‌ ಗಾಂಧಿ ಇಂದು ಸಹ ವಿಚಾರಣೆಗೆ ಒಳಪಡಲಿದ್ದಾರೆ.

ದಿನಕ್ಕೆ 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ರಾಹುಲ್‌ ಒಳಗಾಗಿದ್ದಾರೆ. ಮಂಗಳವಾರ ಸೆಂಟ್ರಲ್ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಡಿ ಪ್ರಧಾನ ಕಚೇರಿಗೆ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಆಗಮಿಸಿ ಬೆಳಿಗ್ಗೆ 11.30ಕ್ಕೆ ವಿಚಾರಣೆಗೆ ಹಾಜರಾಗಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಸುಮಾರು ಒಂದು ಗಂಟೆ ವಿರಾಮ ತೆಗೆದುಕೊಂಡು ಮನೆಗೆ ತೆರಳಿದರು. ಮತ್ತೆ ರಾತ್ರಿ 9ಕ್ಕೆ ಇಡಿ ಕಚೇರಿಗೆ ಆಗಮಿಸಿದ್ದರು.

ಇದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ದೆಹಲಿ ಮತ್ತು ಬೆಂಗಳೂರಿನಲ್ಲಿ ತನ್ನ ಪ್ರತಿಭಟನೆಯನ್ನು ಮುಂದುವರೆಸಿದ್ದು, ‘ಸುಳ್ಳು’ ಪ್ರಕರಣದ ಮೂಲಕ ಗಾಂಧಿ ಕುಟುಂಬದ ಮಾನಹಾನಿ ಮಾಡಲು ಸಂಚು ನಡೆಸುತ್ತಿದೆ ಎಂದು ಆರೋಪಿಸಿದೆ.

ಹಿಂದಿನ ಲೇಖನಜೂ.15ರ ಹವಾಮಾನ ವರದಿಯ ವಿವರ
ಮುಂದಿನ ಲೇಖನವಿಧಾನಪರಿಷತ್‌ ಚುನಾವಣೆ: ಮತ ಎಣಿಕೆ ಆರಂಭ