ಮನೆ ಅಪರಾಧ ತುಂಬೆ ವಳವೂರಿನ ಮದುವೆ ಸಭಾಂಗಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ತುಂಬೆ ವಳವೂರಿನ ಮದುವೆ ಸಭಾಂಗಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

0

ಬಂಟ್ವಾಳ: ತುಂಬೆ ವಳವೂರಿನಲ್ಲಿರುವ ಮದುವೆ ಸಭಾಂಗಣವೊಂದರ ಅವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

Join Our Whatsapp Group

ಮೃತ ವ್ಯಕ್ತಿಯನ್ನು ಉಪ್ಪಿನಂಗಡಿ ವಳಾಲು ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಭವನದ ಕಂಪೌಂಡ್  ನ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿದ್ದು, ಹೊರಗಡೆಯಲ್ಲಿ ಆತನ ಬೈಕ್ ಪತ್ತೆಯಾಗಿದೆ.

ಸಾವಿಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಪೋಲೀಸ್ ಮೂಲಗಳ ಪ್ರಕಾರ ಈತ ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತುಕೊಂಡಿದ್ದು, ಆ ವೇಳೆ ನಿಯಂತ್ರಣ ಕಳೆದು ಕೆಳಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.

ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್  ಇನ್ಪೆಕ್ಟರ್ ಶಿವಕುಮಾರ್, ಪಿಎಸ್ಐ ಹರೀಶ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನರಾಜ್ಯದಲ್ಲಿ 25 ರಿಂದ 26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು: ಬಿ.ಎಸ್. ಯಡಿಯೂರಪ್ಪ ವಿಶ್ವಾಸ
ಮುಂದಿನ ಲೇಖನದಾಖಲೆ ಇಲ್ಲದ 32 ಕೋಟಿ ರೂ. ಪತ್ತೆ: ಜಾರ್ಖಂಡ್ ಸಚಿವರ ಕಾರ್ಯದರ್ಶಿ, ಮನೆಯ ಸಹಾಯಕ ಬಂಧನ