ಮನೆ ಅಪರಾಧ ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಅಯೂಬ್ ಖಾನ್ ಬಂಧನ

ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಅಯೂಬ್ ಖಾನ್ ಬಂಧನ

0

ಮೈಸೂರು: ಭಗವಾನ್ ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನ್ಯೂ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ರನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 25ರವರೆಗೆ ಅಯೂಬ್ ಖಾನ್ ​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೈಸೂರಿನ ಉದಯಗಿರಿ ಠಾಣೆ ಪೊಲೀಸರಿಂದ ಅಯೂಬ್ ವಶಕ್ಕೆ ಪಡೆದಿದ್ದಾರೆ. ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಅಯೂಬ್ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಅಯೂಬ್ ಖಾನ್ ರನ್ನು ಮೈಸೂರಿನ 2ನೇ ಜೆಎಂಎಫ್​ಸಿ ಕೋರ್ಟ್​ ಜಡ್ಜ್​​ ಶ್ರೀಶೈಲಾ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ, ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಹಿಜಾಬ್ ಕುರಿತ ವಿವಾದದ ವಿಚಾರವಾಗಿ ಮಾತನಾಡುತ್ತಾ ಅಯೂಬ್ ಖಾನ್ ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ಪರಿಣಾಮ ಜೈನ ಸಮುದಾಯವು ಅಯೂಬ್ ಖಾನ್ ವಿರುದ್ಧ ಸಿಡಿದೆದ್ದಿತ್ತು. ರಾಜ್ಯದ ನಾನಾ ಕಡೆ ಅಯೂಬ್ ಮೇಲೆ ದೂರು ದಾಖಲಾಗಿತ್ತು.

ಕ್ರಿಮಿನಲ್ ಕೇಸ್‌ ದಾಖಲಿಸಿ ಬಂಧಿಸುವಂತೆ ಜೈನ ಸಮುದಾಯದ ಸಂಘಟನೆಗಳು ಒತ್ತಾಯಿಸಿದ್ದ ಪರಿಣಾಮ ಅಯೂಬ್ ಖಾನ್ ನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಹಿಂದಿನ ಲೇಖನಕೋರ್ಟ್ ಆದೇಶ ಪಾಲನೆಯಲ್ಲಿ ಆಗುವ ವಿಳಂಬಕ್ಕೆ ಇಲಾಖೆ ಮುಖ್ಯಸ್ಥರೆ ಹೊಣೆ: ರಾಜ್ಯ ಸರ್ಕಾರ ಆದೇಶ
ಮುಂದಿನ ಲೇಖನಪತಿಗೆ ಪತ್ನಿಯೇ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ