ಮನೆ ದಾಂಪತ್ಯ ಸುಧಾರಣೆ ಮದುವೆ ನಂತರ ಸ್ವಲ್ಪ ದಿನ ಚೆನ್ನಾಗಿರುತ್ತೆ, ಬಳಿಕ ಪ್ರತಿ ದಿನ ಇದೇ ಗೋಳು!

ಮದುವೆ ನಂತರ ಸ್ವಲ್ಪ ದಿನ ಚೆನ್ನಾಗಿರುತ್ತೆ, ಬಳಿಕ ಪ್ರತಿ ದಿನ ಇದೇ ಗೋಳು!

0

“ನೀನು ಮದುವೆಯಾಗಿ ನೋಡು, ನಿನಗೂ ಗೊತ್ತಾಗುತ್ತೆ”. ಮದುವೆಯಾಗಿರುವವರು ಮದುವೆ ಆಗದೆ ಇರುವವರಿಗೆ ಹೇಳುವ ಕಾಮನ್ ಡೈಲಾಗ್ ಇದು. ಎಲ್ಲೋ ಲಕ್ಷದಲ್ಲಿ ಒಬ್ಬರು ಮಾತ್ರ ಮದುವೆಯಾದ ನಂತರದಲ್ಲಿ ಖುಷಿ ಯಾಗಿರಲು ಸಾಧ್ಯ ಎನ್ನುವಂತಿದೆ ಈಗಿನ ನಮ್ಮ ಸಮಾಜ.

 ಏಕೆಂದರೆ ಇಲ್ಲಿ ಭಿನ್ನಾಭಿಪ್ರಾಯಗಳು ಜಾಸ್ತಿ, ಪ್ರೀತಿ, ವಿಶ್ವಾಸ, ನಂಬಿಕೆ ಕಡಿಮೆ. ಆದರೂ ಕೂಡ ಜೀವನ ಸಾಗುತ್ತದೆ. ಮದುವೆ ಆಗದೆ ಇರುವವರು ಮದುವೆ ಆಗಿರುವವರ ಜೀವನದಲ್ಲಿ ಏನೇನೆಲ್ಲ ಆಗುತ್ತಿದೆ ಎಂಬುದನ್ನು ತಿಳಿದು ಕೊಳ್ಳುವ ಕುತೂಹಲ ಹೊಂದಿರುತ್ತಾರೆ.

ಅತ್ತೆ ಮಾವನ ಕಾಟ

• ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಮದುವೆ ಆದ ನಂತರದಲ್ಲಿ ಆರಂಭದಲ್ಲಿ ಚೆನ್ನಾಗಿದ್ದ ಹಾಗೆ ಆನಂತರದಲ್ಲಿ ಅತ್ತೆ ಮಾವನ ಬಳಿ ಚೆನ್ನಾಗಿರಲು ಆಗಲ್ಲ.

• ಕೆಲವು ಮನೆಗಳಲ್ಲಿ ಅತ್ತೆ, ಸೊಸೆ ಅಮ್ಮ ಮಗಳ ತರಹ ಇರುತ್ತಾರೆ. ಅವರು ನಿಜಕ್ಕೂ ಪುಣ್ಯವಂತರು. ಆದರೆ ಬಹುತೇಕ ಕಡೆ ಇದು ಸಾಧ್ಯವಿರುವುದಿಲ್ಲ.

• ಅತ್ತೆ ಮಾತು ಸೊಸೆಗೆ ಆಗುವುದಿಲ್ಲ, ಅಳಿಯನ ಮಾತು ಅತ್ತೆಗೆ ಇಷ್ಟವಾಗುವುದಿಲ್ಲ. ಒಂದು ವೇಳೆ ಇವರು ಮನೆಗೆ ಬಂದರೆ ಯಾಕಾದರೂ ಬಂದರು ಎನ್ನುವ ಭಾವನೆ ಮನಸ್ಸಿನಲ್ಲಿ ಇರುತ್ತದೆ.

ಕೆಲಸದ ಒತ್ತಡ

• ಮದುವೆಯ ನಂತರದಲ್ಲಿ ಆಫೀಸ್ ಕೆಲಸವನ್ನು ಅಥವಾ ಆಫೀಸ್ ಒತ್ತಡವನ್ನು ಮನೆಗೆ ತಂದು ಇರುವವರ ನೆಮ್ಮದಿ ಹಾಳು ಮಾಡಬೇಡಿ ಎಂದು ಹೆಂಡತಿ ತಾಕೀತು ಮಾಡುವುದು ಉಂಟು.

• ಆದರೆ ಇದು ಹೇಳಿದಷ್ಟು ಸುಲಭವಲ್ಲ. ಆಫೀಸ್ ನಲ್ಲಿ ಬೇಸತ್ತು ಮನೆಗೆ ಬಂದ ಗಂಡನಿಗೆ ಖುಷಿಯಾಗಿ ಮಾತ ನಾಡಿಸಿ ಆರೈಕೆ ಮಾಡಬೇಕಾದ ಹೆಂಡತಿ ಏನಾದರೂ ಬೇರೆ ಹೇಳಿದರೆ ಗಂಡನಿಗೆ ಮನಸ್ಸಿಗೆ ಸಾಕಷ್ಟು ನೋವಾಗುತ್ತದೆ ಮತ್ತು ವಿಪರೀತ ಹಿಂಸೆ ಎನಿಸುತ್ತದೆ.

ಮಕ್ಕಳ ಕಿರಿಕಿರಿ

• ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ, ಅವುಗಳ ಕಿರಿಕಿರಿ ಬೇರೆ ಮನಸ್ಸಿಗೆ ಕಸಿವಿಸಿ ಉಂಟು ಮಾಡುತ್ತದೆ.

• ಮಕ್ಕಳ ಡೈಪರ್ ಚೇಂಜ್ ಮಾಡುವುದರಿಂದ ಹಿಡಿದು ಅವುಗಳ ಪ್ರತಿ ಚಲನವಲನದಲ್ಲಿ ಭಾಗಿಯಾಗ ಬೇಕಾ ಗುತ್ತದೆ.

• ಈ ವಿಷಯದಲ್ಲಿ ಕೂಡ ಗಂಡ ಹೆಂಡತಿಗೆ ಆಗಾಗ ಜಗಳ ಆಗುವುದು ಉಂಟು. ಜೊತೆಗೆ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಕೂಡ ಇಬ್ಬರಿಗೂ ಮನಸ್ತಾಪ ಬರುತ್ತದೆ. ಆದರೆ ಮಕ್ಕಳ ಮುಂದೆ ಜಗಳ ಆಡುವುದು ಅಷ್ಟು ಸರಿ ಅಲ್ಲ.

ಲೈಂಗಿಕತೆ

• ಮದುವೆಯಲ್ಲಿ ಕೇವಲ ವಿರಸ ಇದ್ದರೆ ಅದು ಮದುವೆ ಜೀವನ ಎನಿಸಿಕೊಳ್ಳುವುದಿಲ್ಲ. ಯಾರ ನಡುವೆ ಸರಸ, ಸಲ್ಲಾಪ ಹೆಚ್ಚಾಗಿರುತ್ತದೆ ಅಂತಹವರು ಮಾತ್ರ ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯ.

• ಆದರೆ ಇಲ್ಲೂ ಸಹ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಬರಬಹುದು.

• ನೀವು ರೋಮ್ಯಾನ್ಸ್ ಮಾಡುವ ರೀತಿ ನಿಮ್ಮ ಹೆಂಡತಿಗೆ ಇಷ್ಟವಾಗದೇ ಇರಬಹುದು. ಅಥವಾ ಆಕೆಯ ಇಷ್ಟ ನಿಮಗೆ ಗೊತ್ತಾಗದೆ ಇರಬಹುದು. ಯಾವುದಕ್ಕೂ ಇಬ್ಬರು ಕುಳಿತು ಓಪನ್ ಆಗಿ ಮಾತನಾಡಿ.

ಮನೆ ಕೆಲಸಗಳಿಗೆ ಸಂಬಂಧಪಟ್ಟಂತೆ

• ಇದಂತೂ ಪ್ರತಿ ಮನೆಯಲ್ಲಿರುತ್ತದೆ. ಎಲ್ಲಾ ಕೆಲಸವನ್ನು ಹೆಂಡತಿ ಮೇಲೆ ಹಾಕಿ ಗಂಡ ಸುಮ್ಮನೆ ಟಿವಿ ನೋಡುತ್ತಾ ಕುಳಿದಿದ್ದರೆ, ಹೆಂಡತಿಯ ಪಿತ್ತ ನೆತ್ತಿಗೇರುತ್ತದೆ.

• ಜೊತೆಗೆ ಮನೆಯನ್ನು ಕ್ಲೀನ್ ಮಾಡುವ ಮತ್ತು ನೋಡಲು ಚೆನ್ನಾಗಿ ಕಾಣುವಂತೆ ಇಟ್ಟುಕೊಳ್ಳುವ ವಿಧಾನದಲ್ಲೂ ಭಿನ್ನಾ ಭಿಪ್ರಾಯಗಳು ಬರಬಹುದು. ಇಲ್ಲಿಯೂ ಸಹ ಜವಾಬ್ದಾರಿ ಗಳನ್ನು ಹಂಚಿಕೊಂಡು ಸಮತೋಲನವಾಗಿ ನಡೆದರೆ ಜೀವನ ಚೆನ್ನಾಗಿರುತ್ತದೆ.

ರೂಢಿಸಿಕೊಂಡು ಬಂದ ಅಭ್ಯಾಸಗಳು

• ಗಂಡನಿಗೆ ನಿದ್ರೆ ಹೆಚ್ಚು ಇಷ್ಟವಾದರೆ, ಹೆಂಡತಿಗೆ ಶಾಪಿಂಗ್ ಇಷ್ಟ. ಈ ವಿಚಾರದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ.

• ಇಂತಹ ಹಲವಾರು ವಿಚಾರಗಳು ಅಭ್ಯಾಸಗಳಾಗಿ ರೂಢಿಯಾಗಿ ರುತ್ತವೆ. ಆದರೆ ಇವುಗಳನ್ನು ಸಮತೋಲ ನದಲ್ಲಿ ಒಬ್ಬರ ನ್ನೊಬ್ಬರು ಒಪ್ಪಿಕೊಂಡು ಅರ್ಥ ಮಾಡಿಕೊಂಡು ಮುನ್ನಡೆದರೆ ಜೀವನವನ್ನು ಆನಂದ ವಾಗಿ ಕಳೆಯಬಹುದು.

ಹಿಂದಿನ ಲೇಖನಕುತ್ತಿಗೆ ಕೊಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ: ನಾರಾಯಣ್ ಗೌಡ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಮುಂದಿನ ಲೇಖನಮುಂದಿನ ವಾರ ಎರಡು ದಿನ ಮಾತ್ರ ಹೈಕೋರ್ಟ್ ಕಾರ್ಯನಿರ್ವಹಣೆ