ಕಲಬುರಗಿ: ಹಣಕ್ಕೆ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಘಟನೆ ನಗರದ ಹಾಗರಗಾ ಕ್ರಾಸ್ ಬಳಿಯ ಮನೆಯಲ್ಲಿ ನಡೆದಿದೆ.
ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿಯಾದ ಕಾರು ವ್ಯಾಪಾರಿ ಅರ್ಜುನ್, ರಮೇಶ್ ಎಂಬಾತನಿಗೆ ಕಾರು ತೋರಿಸಲು ಬಂದಿದ್ದಾನೆ.
ಈ ವೇಳೆ ಮನೆಯೊಂದರಲ್ಲಿ ಕೂಡಿಹಾಕಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಹಿಂಸೆ ಕೊಟ್ಟಿದ್ದಾರೆ. ಆತನಿಂದ ಹಣ ಹಾಕಿಸಿಕೊಂಡ ಬಳಿಕವೂ ದುಷ್ಕರ್ಮಿಗಳು ಮತ್ತಷ್ಟು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಇಮ್ರಾನ್ ಪಟೇಲ್, ಮೊಹಮ್ಮದ್ ಮತೀನ್ ಸೇರಿ ಹಲವರು ಕೃತ್ಯ ಎಸಗಿದ್ದರು. ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.