ಮನೆ ಅಪರಾಧ ಹಣಕ್ಕೆ ಬೇಡಿಕೆ ಇಟ್ಟು ಸೆಕೆಂಡ್ ​ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ: ಆರೋಪಿಗಳ ಬಂಧನ

ಹಣಕ್ಕೆ ಬೇಡಿಕೆ ಇಟ್ಟು ಸೆಕೆಂಡ್ ​ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ: ಆರೋಪಿಗಳ ಬಂಧನ

0

ಕಲಬುರಗಿ: ಹಣಕ್ಕೆ ಬೇಡಿಕೆ ಇಟ್ಟು ಸೆಕೆಂಡ್​ ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಘಟನೆ ನಗರದ ಹಾಗರಗಾ ಕ್ರಾಸ್ ಬಳಿಯ ಮನೆಯಲ್ಲಿ ನಡೆದಿದೆ.

Join Our Whatsapp Group

ಸೇಡಂ  ತಾಲೂಕಿನ ದೇವನೂರ ಗ್ರಾಮದ ನಿವಾಸಿಯಾದ ಕಾರು ವ್ಯಾಪಾರಿ ಅರ್ಜುನ್​, ರಮೇಶ್ ಎಂಬಾತನಿಗೆ ಕಾರು ತೋರಿಸಲು ಬಂದಿದ್ದಾನೆ.

ಈ ವೇಳೆ ಮನೆಯೊಂದರಲ್ಲಿ ಕೂಡಿಹಾಕಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಹಿಂಸೆ ಕೊಟ್ಟಿದ್ದಾರೆ. ಆತನಿಂದ ಹಣ ಹಾಕಿಸಿಕೊಂಡ ಬಳಿಕವೂ ದುಷ್ಕರ್ಮಿಗಳು ಮತ್ತಷ್ಟು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.

ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಇಮ್ರಾನ್ ಪಟೇಲ್, ಮೊಹಮ್ಮದ್ ಮತೀನ್ ಸೇರಿ ಹಲವರು ಕೃತ್ಯ ಎಸಗಿದ್ದರು. ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನಕ್ರೂಸರ್ ವಾಹನ ಪಲ್ಟಿ: ಮೂವರು ಮಹಿಳೆಯರು ಸಾವು
ಮುಂದಿನ ಲೇಖನರಸ್ತೆ ಅಪಘಾತ: ಪಲ್ಟಿಯಾದ ವಾಹನದಲ್ಲಿ ಕಂತೆ ಕಂತೆ ಹಣ ಪತ್ತೆ