ಮನೆ ಸುದ್ದಿ ಜಾಲ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯುವಕ

ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯುವಕ

0

ಒಡಿಶಾ : ದುಡುಮಾ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಯೂಟ್ಯೂಬರ್ ಕೊಚ್ಚಿಹೋದ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ದುಡುಮಾ ಜಲಪಾತದ ನೀರಿನಲ್ಲಿ ಸಿಲುಕಿ ಕೊಚ್ಚಿಹೋದ ಬೆರ್ಹಾಂಪುರ್‌ನ ಸಾಗರ್ ತುಡು (22) ಎಂಬ ಯೂಟ್ಯೂಬರ್ ನಾಪತ್ತೆಯಾಗಿದ್ದಾನೆ. ಸಾಗರ್ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ಪ್ರಮುಖ ಪ್ರವಾಸಿ ತಾಣಗಳ ವೀಡಿಯೋಗಳನ್ನು ಚಿತ್ರೀಕರಿಸಲು ಬಂದಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಟಕ್‌ನಿಂದ ತನ್ನ ಸ್ನೇಹಿತ ಅಭಿಜಿತ್ ಬೆಹೆರಾ ಜೊತೆ ಕೊರಾಪುಟ್‌ಗೆ ಬಂದಿದ್ದ ಸಾಗರ್ ಜಲಪಾತದಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ರೀಲ್ ರೆಕಾರ್ಡ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಜಲಪಾತದಲ್ಲಿ ನೀರಿನ ಪ್ರಮಾಣ ಏರಿಕೆಯಾದ ಪರಿಣಾಮ ಬಂಡೆಯ ಮೇಲೆ ನಿಂತಿದ್ದ ಸಾಗರ್ ಕೊಚ್ಚಿಹೋಗಿ, ನಾಪತ್ತೆಯಾಗಿರುವ ಸಾಗರ್‌ಗಾಗಿ ಅಗ್ನಿಶಾಮಕ ದಳ ರಕ್ಷಣಾ ಪಡೆಗಳಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.