ಮನೆ ಸಾಹಿತ್ಯ ಕಂದಾಚಾರ ತ್ಯಜಿಸಿ, ಪ್ರೀತಿಯನ್ನು ರೂಢಿಸಿಕೊಳ್ಳಿ

ಕಂದಾಚಾರ ತ್ಯಜಿಸಿ, ಪ್ರೀತಿಯನ್ನು ರೂಢಿಸಿಕೊಳ್ಳಿ

0

ಒಂದು ಕಾಲದಲ್ಲಿ ಬಲು ಶಿಷ್ಟಾಚಾರದ ವ್ಯಕ್ತಿಯೊಬ್ಬನು ಸೂರ್ಯ ಸ್ವರ್ಗದಲ್ಲಿದ್ದಾಗ ಬಾಯಿಗೊಂದಿಷ್ಟು ನೀರು ಅಥವಾ ಆಹಾರ ಹೋಗಲು ಬಿಡುತ್ತಿರಲಿಲ್ಲ. ಅವನ ಈ ಕಠಿಣ ವ್ರತಾಚರಣೆಗೆ ಸ್ವರ್ಗದ ಸಮ್ಮತಿ ಇತ್ತೇನೋ ಎಂಬಂತೆ ಸಮೀಪದ ಬೆಟ್ಟವೊಂದರ ಮೇಲೆ ಹಾಡಹಗಲಿನಲ್ಲೂ ಸಕಲರಿಗೂ ಕಾಣುವಂತೆ ಒಂದು ಪ್ರಕಾಶಮಾನ ನಕ್ಷತ್ರ ಬೆಳಗುತ್ತಿತ್ತು..

ಆದರೆ ಆ ನಕ್ಷತ್ರ ಅಲ್ಲಿಗೆ ಹೇಗೆ ಬಂತೆಂಬುದು ಯಾರಿಗೂ ತಿಳಿದುಬರಲಿಲ್ಲ. ಒಂದುದಿನ ಆ ವ್ಯಕ್ತಿಯು ಬೆಟ್ಟದ ಮೇಲೆ ಇರಲು ನಿರ್ಧರಿಸಿದನು. ಆದರೆ ಹಳ್ಳಿಯ ಪುಟ್ಟ ಹುಡುಗಿಯೊಬ್ಬಳು ತಾನು ಜೊತೆಯಾಗಿ ಬರುವೆನೆಂದು ಹಠ ಮಾಡಿದಳು. ಅಂದು ಬಲು ಬಿಸಿಲಿತ್ತು. ಅದರಿಂದಾಗಿ ಬಹುಬೇಗ ಅವರಿಬ್ಬರಿಗೂ ಬಾಯಾರಿಕೆಯಾಯಿತು. ಆಗ ಆತ ಬಾಲೆಗೆ ಸ್ವಲ್ಪ ನೀರು ಕುಡಿಯಲು ಹೇಳಿದರೂ, ಅವನು ಕುಡಿದರೆ ಮಾತ್ರ ತಾನು ಕುಡಿಯುದಾಗಿ ಪಟ್ಟು ಹಿಡಿದಳು.. ಆಗ ಬಡಪಾಯಿಗೆ ದಿಕ್ಕೆ ತೋಚದಂತಾಯಿತು. ಉಪವಾಸ ವೃತವನ್ನು ಮುರಿಯಲು ಅವನು ಸುತಾರಂ ಸಿದ್ಧನಿರಲಿಲ್ಲ. ಆದರೆ ಆ ಮಗು ಸಂಕಟ ಪಡುವುದನ್ನು ಆತನಿಗೆ ನೋಡಲಾಗಲಿಲ್ಲ. ಕೊನೆಗೆ ಆತ ಆ ಹುಡುಗಿಗಾಗಿ ಆಹಾರ ಮತ್ತು ನೀರು ಸ್ವೀಕರಿಸಿದನು. ನಕ್ಷತ್ರ ಮಾಯವಾಗಿರಬಹುದೆಂದು ಆತಂಕದಿಂದ ಆತ ಬಹಳ ಹೊತ್ತು ಆಕಾಶದ ತಲೆ ಎತ್ತಿ ನೋಡಲಿಲ್ಲ. ಆದರೆ ಕೊನೆಗೆ ಆಕಾಶವನ್ನು ದಿಟ್ಟಿಸಿದನು.

 ಪ್ರಶ್ನೆಗಳು :-

1.ಅಲ್ಲಿ ಅವನೇನು ಕಂಡನು ? 2.ಈ ಕಥೆಯ ಪರಿಣಾಮವೇನು ?

 ಉತ್ತರಗಳು :-

1.ಆ ವ್ಯಕ್ತಿ ಮಾಮೂಲಿನಂತೆ ಕೇವಲ ಒಂದು ನಕ್ಷತ್ರವನ್ನು ಕಾಣಿಸಲಿಲ್ಲ, ಬದಲಿಗೆ ಆ ಬೆಟ್ಟದ ಮೇಲೆ ಎರಡು ನಕ್ಷತ್ರಗಳು ಪ್ರಕಾಶಮಾನವಾಗಿ ಬೆಳಗುವುದನ್ನ ಕಂಡನು.

2. ವ್ರತ ಮತ್ತು ಸಾಂಪ್ರದಾಯಗಳನ್ನು ವ್ಯಗ್ರ ಮನಸು ಪಳಗಿಸುವ ಉದ್ದೇಶದಿಂದ ಅನುಷ್ಠಾನಕ್ಕೆ ತರಲಾಗಿದೆ. ಎಲ್ಲಾ ಧರ್ಮಗಳ ಅಂತಿಮ ಸಾರವು ಒಬ್ಬರನ್ನೊಬ್ಬರನ್ನು ಪ್ರೀತಿಸುವುದೇ ಆಗಿದೆ.