ಮನೆ ಅಂತಾರಾಷ್ಟ್ರೀಯ ಜಿ20 ಶೃಂಗಸಭೆ: ಬ್ರೆಜಿಲ್ ​ಗೆ ಬಂದಿಳಿದ ಪ್ರಧಾನಿ ಮೋದಿ

ಜಿ20 ಶೃಂಗಸಭೆ: ಬ್ರೆಜಿಲ್ ​ಗೆ ಬಂದಿಳಿದ ಪ್ರಧಾನಿ ಮೋದಿ

0

ರಿಯೋ ಡಿ ಜನೈರೊ(ಬ್ರೆಜಿಲ್): ಮೂರು ದೇಶಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, 19ನೇ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ರಿಯೋ ಡಿ ಜನೈರೊ ನಗರಕ್ಕೆ ಬಂದಿಳಿದರು. ಇಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ.

Join Our Whatsapp Group

ನೈಜೀರಿಯಾದ ಮೊದಲ ಭೇಟಿಯ ಬಳಿಕ ಮೋದಿ ಬ್ರೇಜಿಲ್ ​ಗೆ ಆಗಮಿಸಿದ್ದಾರೆ. ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಅವರು ಪೋಸ್ಟ್ ಮಾಡಿದ್ದು, “ಜಿ20 ಶೃಂಗಸಭೆಗಾಗಿ ಬ್ರೇಜಿಲ್​ನ ರಿಯೋ ಡಿ ಜನೈರೊ ನಗರಕ್ಕೆ ಬಂದಿಳಿದಿದ್ದೇನೆ. ಜಾಗತಿಕ ನಾಯಕರ ಜೊತೆಗಿನ ಫಲಪ್ರದ ಮಾತುಕತೆ ಮತ್ತು ಚರ್ಚೆಗಾಗಿ ಎದುರು ನೋಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

“ಜಿ20 ಶೃಂಗಸಭೆಯ ಭಾಗವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ನಗರ ರಿಯೊ ಡಿ ಜನೈರೊಗೆ ಬಂದಿದ್ದಾರೆ” ಎಂದು ಬ್ರೇಜಿಲ್​ನಲ್ಲಿ ಸ್ವಾಗತ ಕೋರುವ ಫೋಟೋವನ್ನು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ.

ಮೋದಿಗೆ ನೈಜೀರಿಯಾದ ರಾಷ್ಟ್ರೀಯ ಗೌರವ: ಭಾನುವಾರ ನೈಜೀರಿಯಾ ರಾಜಧಾನಿ ಅಬುಜಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಅಲ್ಲಿನ ಅಧ್ಯಕ್ಷ ಬೋಲಾ ಅಹ್ಮದ್ ತಿನುಬು ಜೊತೆ ದ್ವಿಪಕ್ಷೀಯ ಮಾತುಕತೆ ಮತ್ತು ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದ್ದರು. ಇದೇ ವೇಳೆ ಮೋದಿ ಅವರಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ (GCON) ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಶೇಷವೆಂದ್ರೆ, ಈ ಗೌರವ ಪಡೆದ ಎರಡನೇ ವಿದೇಶಿ ಅತಿಥಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.