ಈ ದೇವಾಲಯವು 2012 ಇರವಿಯಲ್ಲಿ ಅಭಯ ಆಂಜನೇಯ ಸ್ವಾಮಿಯ ಏಕಶಿಲಾ ಮೂರ್ತಿಯನ್ನು ಧರ್ಮದರ್ಶಿಗಳು ಮತ್ತು ಗ್ರಾಮಸ್ಥರ ಸಹಾಯದಿಂದ ಇಲ್ಲಿ ಪ್ರತಿಷ್ಠಾಪಿಸಿದ್ದಾರೆ.
ಮತ್ತು ಶ್ರೀರಾಮ ಸೀತಾಮಾತೆ ಮತ್ತು ಲಕ್ಷ್ಮಣ ಆಂಜನೇಯ ಸಮೇತ ಇರುವ ಮೂರ್ತಿಯನ್ನು ಮಹಾಬಲಿಪುರ ಪದ್ಮನಾಭಂ ಅವರು ಬಹಳ ಸುಂದರವಾದ ವಿಗ್ರಹಗಳನ್ನು ಮಾಡಿ ಕೊಟ್ಟಿದ್ದಾರೆ ಅದನ್ನು ಕೂಡ ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
ಇಲ್ಲಿಯ ಅಭಯ ಆಂಜನೇಯ ಸ್ವಾಮಿಯು ಭಕ್ತರು ಕೋರಿದ ವರವನ್ನು ನೀಡುವಂತಹ ಮತ್ತು ಯಾರು ಏನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಇಲ್ಲಿ ಬಂದು ಆ ದೇವರಲ್ಲಿ ಪ್ರಾರ್ಥಿಸಿಕೊಂಡರೆ ಅವರನ್ನು ಉದ್ದರಿಸುವನು.ಇಲ್ಲಿ ಪ್ರತಿ ಅಮಾವಾಸ್ಯೆಯ ದಿನ ಅಭಯ ಆಂಜನೇಯ ಸ್ವಾಮಿಗೆ 108 ಲೀಟರ್ ಹಾಲಿನ ಅಭಿಷೇಕ ಫಲ ಪಂಚಾಮೃತ ಅಭಿಷೇಕ ಮಾಡುತ್ತಾರೆ ವಾರ್ಷಿಕೋತ್ಸವ ಮತ್ತು ಹನುಮ ಜಯಂತಿಯನ್ನು ಬಹಳ ವಿಜೃಂಭಣೆಗಳಿಂದ ವಿಶೇಷವಾದ ಅಭಿಷೇಕ ಮತ್ತು ಪುಷ್ಪಲಂಕಾರಗಳಿಂದ ಮಾಡುತ್ತಾರೆ.
ಕೋರಿದವರಿಗೆ ವಿಶೇಷ ಫಲವನ್ನು ಕೊಡುತ್ತಾ ನೆಲೆ ನಿಂತಿದ್ದಾನೆ.ಪ್ರತಿ ಶನಿವಾರ ಮತ್ತು ಅಮಾವಾಸ್ಯೆ ದಿನ ಪ್ರಸಾದ ವಿನಿಯೋಗ ವಿರುತ್ತದೆ ಸುಮಾರು 2,000 ಜನ ಭಕ್ತಾದಿಗಳು ಬಹಳ ಸೇವೆ ಸಲ್ಲಿಸುತ್ತಾರೆ.
ನವರಾತ್ರಿ 9 ದಿನಗಳು ವಿಶೇಷ ಅಲಂಕಾರ ಮತ್ತು ಸಹಸ್ರನಾಮದ ಪಾರಾಯಣದಲ್ಲಿ ಇರುತ್ತದೆ.ಈ ಎಲ್ಲಾ ಭಕ್ತಾದಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಪುನರ್ವಸು ನಕ್ಷತ್ರದಂದು ವಿಶೇಷ ಅಭಿಷೇಕಗಳು ನೆರವೇರುತ್ತಾರೆ.