ಮನೆ ಆರೋಗ್ಯ ಅಪಘಾತಗಳು ಗಾಯಗಳು, ವಿಷ ವಸ್ತುಗಳ ಪ್ರಭಾವಗಳು

ಅಪಘಾತಗಳು ಗಾಯಗಳು, ವಿಷ ವಸ್ತುಗಳ ಪ್ರಭಾವಗಳು

0

ಮಕ್ಕಳಿಗೆ ಅಪಘಾತದಲ್ಲಿ ಗಾಯಗಳಾಗಿರುತ್ತದೆ. ಮೇಲಿನಿಂದ ಕೆಳಗೆ ಬೀಳುವುದು, ರಸ್ತೆಯಲ್ಲಿ ವಾಹನಗಳು ಡಿಕ್ಕಿ ಹೊಡೆಯುವುದು, ಆಟವಟಡುವಾಗ ಪೆಟ್ಟಾಗುವುದು, ಹರಿತವಾದ ಅಯುಧಗಳಿಂದ ಮತ್ತು ಸ್ವಲ್ಪ ವಯಸ್ಸು ಬಲಿತು ಸೈಕಲ್ ಕಲಿಯುವಾಗ ಬಿದ್ದು ಗಾಯ ಮಾಡಿಕೊಳ್ಲುವುದು. ಹೀಗೆ ಹಲವಾರು ಅಪಘಾತಗಳಿಗೆ ಸಿಲುಕುತ್ತಿರುತ್ತಾರೆ. ಹೆಚ್ಚಾಗಿ 3-7 ವರ್ಷದ ಮಕ್ಕಳು ಅಪಘಾತಗಳಲ್ಲಿ ಗಾಯ ಮಾಡಿಕೊಳ್ಳಿತ್ತಾರೆ. ಕೆರೆ, ಕುಂಟೆಗಳಲ್ಲಿ ಮುಳುಗುವುದು ಇರುತ್ತದೆ.

ತಲೆಗೆ ಗಾಯ-ಆಮ್ಲಜನಕ :-

ತಲೆಗೆ ಗಾಯಗಳಾದಾಗ ಬಹ ಎಚ್ಚರಿಕೆಯಿಂದ ಚಿಕಿತ್ಸೆ ಮಾಡಬೇಕು. ಗಾಯಗಳಿಗೆ ಚಿಕಿತ್ಸೆ ಮಾಡುವುದರ ಜೊತೆಗೆ ಆಮ್ಲಜನಕ ಮೆದುಳಿಗೆ ಪೂರೈಕೆಯಾಗುವಂತೆ ನೋಡಿಕೊಳ್ಲಬೇಕು. ಆಮ್ಲಜನಕ ಕೊರತೆಯಾದರೆ ನೆರಮಂಡಲ ಶಾಶ್ವತವಾಗಿ ತೊಂದರೆಗೊಳಗಾಗುತ್ತದೆ.

ಆಕಸ್ಮಿಕ ವಿಷಸೇವನೆ :-

ಮಕ್ಕಳು ಸಾಮಾನ್ಯವಾಗಿ ಗೊತ್ತಿಲ್ಲದೆ ವಿಷ ಸೇವಿಸಿಬಿಡುತ್ತಾರೆ. ತಂದೆ ತಾಯಿಗಳ ಆಜಾಗರೂಕತೆಯೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಮಕ್ಕಳಿಗೆ ಅಪಾಯಕಾರಿಯಾದ ರಾಸಾಯನಿಕ, ರಸಗೊಬ್ಬರ,ಇಲಿಪಾಷಾಣ ಮುಂತಾದವುಗಳನ್ನು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಬೇಕು. ಮಕ್ಕಳು ಸೀಮೆಎಣ್ಣೆ ಕುಡಿಯುವ ಪ್ರಸಂಗಗಳು ಅಧಿಕ. ರೈತ ಕುಟುಂಬಗಲ್ಲಿ ಎಂಡ್ರಿನ್ ಕುಡುಯುವುದು ಸಾಮಾನ್ಯ ವಿಷಯ. ಮಕ್ಕಳ ಹೊಟ್ಟೆಗೆ ವಿಷ ಸೇರಿದ್ದಾಗ ಅದಷ್ಟು ಬೇಗ ವಿಷ ಪ್ರಭಾವವನ್ನು ಕಡಿಮೆ ಮಾಡಲು ಶ್ರಾಮಿಸಬೇಕು. ಹೃದಯದ ಮೇಲೆ ಮತ್ತು ನರಮಂಡಲದ ಮೇಲೆ ವಿಷಪ್ರಭಾವವಾಗದಂತೆ ನೋಡಿಕೊಳ್ಳಬೇಕು.

ಮಕ್ಕಳು ದೊಡ್ಡವರಾಗಿ ತಿಳಿವಳಿಕೆ ಮೂಡುವವರೆಗೂ ವಿಷವಸ್ತುಗಳ ಬಗ್ಗೆ ಬಹಳ ಜಾಗ್ರತೆಯಾಗಿರಬೇಕು. ಮಕ್ಕಳ ಕೈಗೆ ಅಂತಹ ವಸ್ತುಗಳ ಸಿಕ್ಕದಂತೆ ಎಚ್ಚರವಹಿಸುವುದು ಅಗತ್ಯ.

ಹಿಂದಿನ ಲೇಖನಅರಣ್ಯ ಒತ್ತುವರಿ ತೆರವಿಗೆ ಕ್ರಮ ವಹಿಸಲು ಈಶ್ವರ ಖಂಡ್ರೆ ಸೂಚನೆ
ಮುಂದಿನ ಲೇಖನರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ