ಮನೆ ರಾಜ್ಯ ನಟ ದರ್ಶನ್ ಬಂಧನ: ತನಿಖೆ ಆಗುವವರೆಗೂ ಏನೂ ಹೇಳಲು ಆಗುವುದಿಲ್ಲ- ಜಿ. ಪರಮೇಶ್ವರ

ನಟ ದರ್ಶನ್ ಬಂಧನ: ತನಿಖೆ ಆಗುವವರೆಗೂ ಏನೂ ಹೇಳಲು ಆಗುವುದಿಲ್ಲ- ಜಿ. ಪರಮೇಶ್ವರ

0

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡುವಾಗ ದರ್ಶನ್ ಹೆಸರು ಬಂದಿದೆ ಎಂಬ ಮಾಹಿತಿ ಇದೆ. ಅದರ ಮೇಲೆ ತನಿಖೆ ಆಗುವವರೆಗೂ ಏನೂ ಹೇಳಲು ಆಗುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

Join Our Whatsapp Group

ಈ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದ್ದಾರೆಯೇ? ಇಲ್ಲವೇ? ಯಾವ ಕಾರಣಕ್ಕೆ ಕೊಲೆ ಆಗಿದೆ. ದರ್ಶನ್ ಹೆಸರು ಯಾಕೆ ಬಂದಿದೆ ಎನ್ನುವುದು ತನಿಖೆ ನಂತರ ಗೊತ್ತಾಗಲಿದೆ. ಸದ್ಯ ಬೇರೆ ಏನು ಹೇಳಲು ಸಾಧ್ಯವಿಲ್ಲ. ತನಿಖೆ ಆದಮೇಲೆ ಎಲ್ಲವೂ ಗೊತ್ತಾಗಲಿದೆ. ಅದಕ್ಕೂ ಮೊದಲು ಏನು ಹೇಳಲು ಸಾಧ್ಯವಿಲ್ಲ ಎಂದೂ ಹೇಳಿದರು.

ಸೋಶಿಯಲ್ ಮೀಡಿಯಾ ಕಾಮೆಂಟ್ ಬಗ್ಗೆ ಗೊತ್ತಿಲ್ಲ. ಮೈಸೂರಿನಲ್ಲಿ ಬಂಧನ ಆಗಿದೆ. ಪೊಲೀಸರು ದರ್ಶನ್ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ ಎಂದರು.

ಹಿಂದಿನ ಲೇಖನ‘ಕಲ್ಕಿ 2898 ಎಡಿ’ ಟ್ರೇಲರ್: 24 ಗಂಟೆಯೊಳಗೆ 13 ಮಿಲಿಯನ್​ ವೀಕ್ಷಣೆ
ಮುಂದಿನ ಲೇಖನತುಮಕೂರು: ಲಕ್ಕಮ್ಮ-ಕೆಂಪಮ್ಮ ಜಾತ್ರೆಯಲ್ಲಿ ಭಾಗಿಯಾಗಿದ್ದ 35 ಜನ ಅಸ್ವಸ್ಥ