ಮನೆ ಮನರಂಜನೆ ನಟ ಧನುಷ್ ಅಭಿನಯದ ಮಾರನ್ ಚಿತ್ರ ಒಟಿಟಿಯಲ್ಲಿ ಬಿಡುಗಡೆ

ನಟ ಧನುಷ್ ಅಭಿನಯದ ಮಾರನ್ ಚಿತ್ರ ಒಟಿಟಿಯಲ್ಲಿ ಬಿಡುಗಡೆ

0

ಬೆಂಗಳೂರು: ನಟ ಧನುಷ್  ನಟಿಸಿರುವ ಆಕ್ಷನ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ‘ಮಾರನ್’ ಚಿತ್ರ ನೇರವಾಗಿ ಓಟಿಟಿ ವೇದಿಕೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಸೋಮವಾರ ಚಿತ್ರತಂಡ  ಪ್ರಕಟಿಸಿದೆ.

ಇದೇ ತಿಂಗಳ ಅಂತ್ಯದಲ್ಲಿ ಮಾರನ್ ಬಿಡುಗಡೆಯಾಗಲಿದ್ದು, ನಿಶ್ಚಿತ ದಿನಾಂಕ ಹೊರ ಬಿದ್ದಿಲ್ಲ.‘ನಮ್ಮಿಂದ ನಿಮಗಾಗಿ ಹ್ಯಾಪಿ ವ್ಯಾಲೆಂಟೈನ್ ಡೇ. ಶೀಘ್ರದಲ್ಲೇ ಹಾಟ್‌ಸ್ಟಾರ್‌ನಲ್ಲಿ ಬರಲಿದ್ದೇವೆ ಎಂದು ಪ್ರೇಮಿಗಳ ದಿನದ ಶುಭಾಶಯ’ ಕೋರಿದ್ದಾರೆ ನಟಿ ಮಾಳವಿಕಾ ಮೋಹನನ್.

ಧನುಷ್‌ಗೆ ಜೊತೆಯಾಗಿ ನಟಿ ಮಾಳವಿಕಾ ಮೋಹನನ್ ಕಾಣಿಸಿಕೊಂಡಿದ್ದು, ಸಮುದ್ರಕಣಿ, ಸ್ಮೃತಿ ವೆಂಕಟ್, ಕೃಷ್ಣಕುಮಾರ್ ಬಾಲಸುಬ್ರಮಣಿಯನ್ ಹಾಗೂ ಮಹೇಂದ್ರನ್ ಅವರು ನಟಿಸಿದ್ದಾರೆ.ಈ ಸಿನಿಮಾವನ್ನು ಕಾರ್ತಿಕ್ ನರೇನ್ ನಿರ್ದೇಶಿಸಿದ್ದು, ಸತ್ಯಜ್ಯೋತಿ ಫಿಲ್ಮಂ ಬ್ಯಾನರ್ ಅಡಿ ಟಿ.ಜಿ ತ್ಯಾಗರಾಜನ್ ನಿರ್ಮಾಣ ಮಾಡಿದ್ದಾರೆ.