ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಅಜ್ಜಿ, ದಿವಂಗತ ಚಲನಚಿತ್ರ ನಿರ್ಮಾಪಕ ಜೆ ಓಂ ಪ್ರಕಾಶ್ ಅವರ ಪತ್ನಿ ಪದ್ಮಾ ರಾಣಿ ಓಂ ಪ್ರಕಾಶ್(91) ಅವರು ನಿಧನರಾಗಿದ್ದು, ಕುಟುಂಬದ ಮೂಲಗಳು ಸುದ್ದಿಯನ್ನು ಖಚಿತಪಡಿಸಿವೆ.
ಪದ್ಮಾ ರಾಣಿ ಓಂ ಪ್ರಕಾಶ್ ಅವರು ಗುರುವಾರ ಮೃತರಾಗಿದ್ದಾರೆಂದು ಮೂಲಗಳು ತಿಳಿಸಿದ್ದು, ಪದ್ಮಾ ರಾಣಿ ಓಂ ಪ್ರಕಾಶ್ ಅವರು ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್ ಅವರ ತಾಯಿಯಾಗಿದ್ದಾರೆ.
ವಿಷಯ ಹೊರಬಿದ್ದ ನಂತರ ಹೃತಿಕ್ ರೋಷನ್ ಅಭಿಮಾನಿಗಳು, ಚಿತ್ರ ರಂಗದವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ನಮ್ಮ ಪ್ರೀತಿಯನ್ನು ಅರ್ಪಿಸುತ್ತಿದ್ದೇವೆ. ಆ ಭಗವಂತನು ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಓ ಶಾಂತಿ ಎಂದು ಸಂತಾಪ ಸಂದೇಶ ಕಳುಹಿಸುತ್ತಿದ್ದಾರೆ.
ಹೃತಿಕ್ ಅವರ ತಾಯಿ ಪಿಂಕಿ ರೋಷನ್ ತಾಯಿಯೊಂದಿಗಿನ ಫೋಟೋ ಹಂಚಿಕೊಂಡು, ನನ್ನ ತಾಯಿ ತಂದೆಯೊಂದಿಗೆ ಮತ್ತೆ ಒಂದಾಗಲು, ಅವರ ಮುಂದಿನ ಪ್ರಯಾಣಕ್ಕಾಗಿ ನಮ್ಮನ್ನು ಅಗಲಿದ್ದಾರೆ…ಪ್ರೀತಿ, ಶಾಂತಿ, ಕೃತಜ್ಞತೆ ಎಂದು ಬರೆದುಕೊಂಡಿದ್ದಾರೆ.