ಮನೆ ಮನರಂಜನೆ ಮದುವೆಗೆ ಸಜ್ಜಾದ ನಟಿ ಮೌನಿ ರಾಯ್: ಹುಡುಗ ಯಾರು ಗೊತ್ತಾ ?

ಮದುವೆಗೆ ಸಜ್ಜಾದ ನಟಿ ಮೌನಿ ರಾಯ್: ಹುಡುಗ ಯಾರು ಗೊತ್ತಾ ?

0

ಬೆಂಗಳೂರು: ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯ ಕಾಣಿಸಿಕೊಂಡಿದ್ದ ನಟಿ ಮೌನಿ ರಾಯ್, ಗೆಳೆಯನ ಜತೆ ಮದುವೆಗೆ ಸಜ್ಜಾಗಿದ್ದು,  ಸೂರಜ್ ನಂಬಿಯಾರ್ ಜತೆಗೆ ಇರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೌನಿ ರಾಯ್ ಅವರ ಪೋಸ್ಟ್ ಅನ್ನು 5 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಗೆಳೆಯರು, ಚಿತ್ರರಂಗದವರು ಮತ್ತು ಅಭಿಮಾನಿಗಳು ಈ ಜೋಡಿಗೆ ಶುಭ ಕೋರಿದ್ದಾರೆ.

ಜನವರಿ 27ರಂದು ಗೋವಾದಲ್ಲಿ ಸೂರಜ್ ನಂಬಿಯಾರ್ ಜತೆ ಮೌನಿ ರಾಯ್ ವಿವಾಹ ನಡೆಯಲಿದೆ.ಮೆಹಂದಿ ಕಾರ್ಯಕ್ರಮದ ಫೋಟೊಗಳನ್ನು ಪೋಸ್ಟ್ ಮಾಡಿದ್ದ ಮೌನಿ ಅವರಲ್ಲಿ, ತಮ್ಮ ಭಾವಿ ಪತಿಯ ಫೋಟೊ ಪ್ರಕಟಿಸುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು.ಅದರಂತೆ, ಮೌನಿ ಅವರು ಸೂರಜ್‌ರನ್ನು ಅಪ್ಪಿಕೊಂಡಿರುವ ಫೋಟೊ ಪೋಸ್ಟ್ ಮಾಡಿ, ಎವರಿಥಿಂಗ್, ಹರಿ ಓಂ, ಓಂ ನಮಃ ಶಿವಾಯ ಎಂದು ಅಡಿಬರಹ ನೀಡಿದ್ದಾರೆ.

ಮೂಲತಃ ಬೆಂಗಳೂರಿನವರಾದ ಸೂರಜ್, ಇಲ್ಲಿಯೇ ಶಿಕ್ಷಣ ಮುಗಿಸಿ, ನಂತರ ದುಬೈನಲ್ಲಿ ಉದ್ಯಮ, ಬ್ಯಾಂಕಿಂಗ್ ಹೂಡಿಕೆ ಹಾಗೂ ಪುಣೆಯಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ನಡೆಸುತ್ತಿದ್ದಾರೆ.

ಹಿಂದಿನ ಲೇಖನರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಬಿ.ಕೆ.ಹರಿಪ್ರಸಾದ್ ನೇಮಕ
ಮುಂದಿನ ಲೇಖನಅಧಿಕಾರ, ಸ್ಥಾನ ಮಾನ ನೀಡಿದ ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ: ಸಚಿವ ಕೆ.ಗೋಪಾಲಯ್ಯ