ಮನೆ ಮನರಂಜನೆ ‘ಬಘೀರ’ ಚಿತ್ರೀಕರಣಕ್ಕೆ ಮರಳಿದ ನಟ ಶ್ರೀಮುರಳಿ

‘ಬಘೀರ’ ಚಿತ್ರೀಕರಣಕ್ಕೆ ಮರಳಿದ ನಟ ಶ್ರೀಮುರಳಿ

0

ಸ್ಯಾಂಡಲ್ ವುಡ್ ನಟ ಶ್ರೀಮುರಳಿ ಮೂರು ತಿಂಗಳ ವಿಶ್ರಾಂತಿ ನಂತರ ಶೂಟಿಂಗ್ ಗೆ ಪುನಃ ಮರಳಿದ್ದಾರೆ. ಶ್ರೀಮುರಳಿ ಅವರು ‘ಬಘೀರ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮಂಡಿಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ತಾತ್ಕಾಲಿಕವಾಗಿ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದ ಮುರಳಿ ಇದೀಗ ಪುನಃ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ.

Join Our Whatsapp Group

ಕನ್ನಡ ಚಿತ್ರರಂಗದಲ್ಲಿತಮ್ಮ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಡೆಡಿಕೇಟೆಡ್ ಆಗಿ ಕೆಲಸ ಮಾಡುವ ನಟರಲ್ಲಿ ಶ್ರೀಮುರಳಿ ಸಹ ಒಬ್ಬರು. ‘ಬಘೀರ’ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದ ಅವರು ಮಂಡಿಗೆ ಆದ ಪೆಟ್ಟಿನಿಂದಾಗಿ ಮನೆಯಲ್ಲೇ ಇರಬೇಕಾಯಿತು. ಆದರೆ ಆ ಸಮಯ ಹೇಗಿತ್ತು ಎಂಬ ಅಪರೂಪದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಮಕ್ಕಳ ಜತೆ ಸಮಯ ಕಳೆದೆ

ಮೂರು ತಿಂಗಳು ಮನೆಯಲ್ಲಿ ಕಳೆದಿದ್ದು ನನಗೆ ಭಯಾನಕ ಅನುಭವ ನೀಡಿದೆ. ಚಿತ್ರೀಕರಣ ಇಲ್ಲ, ಮನೆಯಲ್ಲಿಯೇ ಕುಳಿತಿರಬೇಕು ಎಂಬುದೇ ನನಗೆ ಹಿಂಸೆ. ಮೊದಲ ಎರಡು ತಿಂಗಳು ಮಕ್ಕಳ ಜತೆ ಸಮಯ ಕಳೆದಿದ್ದರಿಂದ ಬೇಗ ಹೋಯಿತು ಎನಿಸಿತು. ಕೊನೆಯ ಒಂದು ತಿಂಗಳಿನಲ್ಲಿ ನಿಧಾನವಾಗಿ ನನ್ನ ಕೆಲಸಗಳನ್ನು ಮಾಡಿಕೊಳ್ಳಲು ಆರಂಭಿಸಿದ್ದೆ. ಮಕ್ಕಳಿಗೂ ಇಷ್ಟು ಸಮಯ ನೀಡಿ ಬಹಳ ವರ್ಷಗಳೇ ಆಗಿದ್ದವು. ಅವರು ಸಹ ಖುಷಿಯಿಂದ ನನ್ನ ಜತೆ ಕಾಲ ಕಳೆದರು ಎಂದು ಹೇಳುತ್ತಾರೆ ಶ್ರೀಮುರಳಿ.

ವೈಯಕ್ತಿಕ ಕೆಲಸಗಳಿಗೆ ಸಮಯ

ವೈಯಕ್ತಿಕವಾಗಿ ಹಲವು ಕೆಲಸಗಳಿಗೆ ನನಗೆ ಸಮಯ ಸಿಕ್ಕಿತು. ಒಂದಷ್ಟು ಸ್ಕ್ರಿಪ್ಟ್ಗಳನ್ನು ಫೈನಲ್ ಮಾಡಿದೆ. ‘ಬಘೀರ’ ನಂತರ ಏನು ಮಾಡಬೇಕು ಎಂಬ ಬಗ್ಗೆ ಯೋಚಿಸಲು ಅನುಕೂಲವಾಯಿತು. ವರ್ಕೌಟ್ ಒಂದು ಮಿಸ್ ಆಯಿತು. ಆದರೆ ರೆಸ್ಟ್ ಮುಗಿದು, ವೈದ್ಯರು ನೀವು ವರ್ಕೌಟ್ ಮಾಡಬೇಕು ಎಂದ ತಕ್ಷಣ ಆರಂಭಿಸಿದೆ. ವರ್ಕೌಟ್ ನನ್ನ ಮನಸ್ಸನ್ನು ರಿಲ್ಯಾಕ್ಸ್ ಆಗುವಂತೆ ಮಾಡಿತು’ ಎನ್ನುತ್ತಾರೆ ಮುರಳಿ.

ಬಹಳ ದಿನಗಳ ನಂತರ ಮೊನ್ನೆ ಚಿತ್ರೀಕರಣಕ್ಕೆ ಹೋಗಿದ್ದೆ. ಅದರಂತಹ ಆನಂದದ ಕ್ಷಣ ಬೇರೊಂದಿಲ್ಲ ಎನಿಸಿತು. ಮುಂದಿನ ತಿಂಗಳಿನಿಂದ ನಿರಂತರವಾಗಿ ಚಿತ್ರೀಕರಣ ನಡೆಸುತ್ತೇವೆ. ಟಾಕಿ ಭಾಗದ ಚಿತ್ರೀಕರಣ ಶೇ.90ರಷ್ಟು ಮುಗಿದು ಹೋಗಿದೆ. ಆ್ಯಕ್ಷನ್ ಸಿಕ್ವೆನ್ಸ್ಗಳ ಚಿತ್ರೀಕರಣ ಬಾಕಿ ಇದ್ದು, ಅದಕ್ಕಾಗಿ ನಾನು ಮೊದಲಿದ್ದ ಬಾಡಿಯನ್ನು ಮಾಡಿಕೊಳ್ಳಬೇಕು. ವಿಶ್ರಾಂತಿ ಸಮಯದಲ್ಲಿ ದಪ್ಪ ಆಗಿದ್ದೆ. ವರ್ಕೌಟ್ ಆರಂಭಿಸಿ ಈಗ ಮೊದಲಿನಂತೆ ಕಾಣುತ್ತಿದ್ದೇನೆ. ಕೆಲವು ದಿನಗಳ ವರ್ಕೌಟ್ ನಂತರ ಮೊದಲಿನ ರೀತಿ ಸಿದ್ಧವಾಗುತ್ತೇನೆ ಎನ್ನುವುದು ಶ್ರೀಮುರಳಿಯವರ ಮಾತು.

ಬಘಿಘೀರ’ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಡಾ ಸೂರಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಮೂರು ತಿಂಗಳ ನಂತರ ಪುನಃ ಚಿತ್ರೀಕರಣಕ್ಕೆ ಹೋಗುತ್ತಿದ್ದು, ಕೆಲವೇ ದಿನಗಳಲ್ಲಿ ‘ಬಘೀರ’ ಸಿನಿಮಾ ಕಂಪ್ಲೀಟ್ ಆಗಲಿದೆ. ನನ್ನ ಅಭಿಮಾನಿಗಳಿಗೆ ಹೊಸದೊಂದು ಅನುಭವ ನೀಡುವ ಸಲುವಾಗಿ ನಮ್ಮ ತಂಡ ಶ್ರಮಿಸುತ್ತಿದೆ ಎನ್ನುತ್ತಾರೆ ಶ್ರೀಮುರಳಿ.