ಮನೆ ಕ್ರೀಡೆ ಲಂಡನ್​ ನಲ್ಲಿ ಹೊಸ ಕಿಟ್ ಧರಿಸಿ ಅಭ್ಯಾಸ ಪ್ರಾರಂಭಿಸಿದ ಟೀಮ್ ಇಂಡಿಯಾ ಆಟಗಾರರು

ಲಂಡನ್​ ನಲ್ಲಿ ಹೊಸ ಕಿಟ್ ಧರಿಸಿ ಅಭ್ಯಾಸ ಪ್ರಾರಂಭಿಸಿದ ಟೀಮ್ ಇಂಡಿಯಾ ಆಟಗಾರರು

0

ಭಾರತೀಯ ಕ್ರಿಕೆಟ್ ತಂಡದ ಕೆಲ ಆಟಗಾರರು ಲಂಡನ್ ಗೆ ತಲುಪಿದ್ದಾರೆ. ಐಪಿಎಲ್ 2023 ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಕಣಕ್ಕಿಳಿದೆ.

Join Our Whatsapp Group

ಇದಕ್ಕಾಗಿ ಭಾರತದ ಕೋಚ್ ರಾಹುಲ್ ದ್ರಾವಿಡ್, ಶಾರ್ದೂಲ್ ಠಾಕೂರ್, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಸೇರಿದಂತೆ ಒಂದು ತಂಡ ಲಂಡನ್ ಗೆ ತಲುಪಿದೆ. ಮತ್ತೊಂದು ಬ್ಯಾಚ್ ಐಪಿಎಲ್ ಮುಗಿದ ತಕ್ಷಣ ಭಾರತದಿಂದ ಹೊರಡಲಿದೆ. ಸದ್ಯ ಲಂಡನ್ ಗೆ ತಲುಪಿರುವ ಟೀಮ್ ಇಂಡಿಯಾ ಪ್ಲೇಯರ್ಸ್ ತಮ್ಮ ಹೊಸ ಅಡಿಡಾಸ್ ಕಿಟ್ ಧರಿಸಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

ಮೊನ್ನೆಯಷ್ಟೆ ಬಿಸಿಸಿಐ ಜರ್ಮನ್ ಕ್ರೀಡಾ ಸಾಮಗ್ರಿಗಳ ಕಂಪನಿ ಅಡಿಡಾಸ್ ಸಂಸ್ಥೆಯೊಂದಿಗೆ ಕಿಟ್ ಪ್ರಾಯೋಜಕತ್ವಕ್ಕೆ ಸಹಿ ಹಾಕಿತ್ತು. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಇದೀಗ ಟೀಮ್ ಇಂಡಿಯಾ ಆಟಗಾರರು ತೊಡುವ ಜೆರ್ಸಿಯ ಮೇಲೆ ಅಡಿಡಾಸ್ ಕಂಪನಿಯ ಲೋಗೋ ಕಾಣಿಸಿದೆ. ಈ ಹೊಸ ಲೋಗೋ ಇರುವ ಜೆರ್ಸಿ ಧರಿಸಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಬಿಸಿಸಿಐ ಈ ಫೋಟೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನ ಈ ಐತಿಹಾಸಿಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಈ ಮಹತ್ವದ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾವನ್ನು ಕೂಡ ಪ್ರಕಟ ಮಾಡಿದೆ.

ಈ ಹಿಂದೆ ಟೆಸ್ಟ್ ತಂಡದಿಂದ ಹೊರಬಿದ್ದ ಅಜಿಂಕ್ಯಾ ರಹಾನೆ ಕಮ್ ಬ್ಯಾಕ್ ಮಾಡಿದ್ದಾರೆ. ಸದ್ಯ ಸಾಗುತ್ತಿರುವ ಐಪಿಎಲ್ನಲ್ಲಿ ಸಿಎಸ್ಕೆ ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ರಹಾನೆ ಸ್ಥಾನ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು ಶುಭ್ಮನ್ ಗಿಲ್ ಆಯ್ಕೆ ಆಗಿದ್ದಾರೆ. ಕೆ ಎಸ್ ಭರತ್ ವಿಕೆಟ್ ಕೀಪರ್ ಆಗಿರಲಿದ್ದಾರೆ.

ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಆಲ್ ರೌಂಡರ್ ಗಳಾಗಿ ನಾಲ್ವರು ಆಯ್ಕೆ ಆಗಿದ್ದು ರವಿಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್ ಹಾಗೂ ರವಿಚಂದ್ರನ್ ಅಶ್ವಿನ್ ಇದ್ದಾರೆ. ವೇಗಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನಾದ್ಕಟ್ ಸ್ಥಾನ ಪಡೆದುಕೊಂಡಿದ್ದಾರೆ.

ಹಿಂದಿನ ಲೇಖನ‘ಬಘೀರ’ ಚಿತ್ರೀಕರಣಕ್ಕೆ ಮರಳಿದ ನಟ ಶ್ರೀಮುರಳಿ
ಮುಂದಿನ ಲೇಖನಕೆಎಂಎಫ್ ನಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ