ಗಂಟಲಿನಲ್ಲಿರುವ ಲಿಂಪೋಟಿಕ್ ಅಂಗಾಂಶಗಳನ್ನು ಎಡಿನಾಯಿಡ್ಸ್ ಎನ್ನುತ್ತಾರೆ. ಕೆಲವರಲ್ಲಿ ಕ್ರಾನಿಕ್ ಸೋಂಕಿನಿಂದಾಗಿ ಬಹಳ ಉಬ್ಬಿರುತ್ತದೆ. 3-7 ವರ್ಷಗಳ ವಯಸ್ಸಿನಲ್ಲಿ ಯಾವುದೇ ಸೋಂಕಿಲ್ಲದೆಯೂ ಎಡಿನಾಯಿಡ್ಸ್ ಗಳು ಉಬ್ಬಿರುತ್ತದೆ.
10 ವರ್ಷದ ವಯಸ್ಸಾದ ನಂತರ ಎಡಿನಾಯಿಡ್ಸ್ ಗಾತ್ರದಲ್ಲಿ ಕಡಿಮೆಯಾಗಲು ಆರಂಭಿಸುತ್ತದೆ. 20 ವರ್ಷ ತುಂಬುವಷ್ಟರಲ್ಲಿ ಏಡಿನಾಡ್ಸ್ ಬಹುಮಟ್ಟಿಗೆ ನಶಿಸಿರುತ್ತದೆ.
ಎಡಿನಾಯಿಡ್ಸ್ ದೊಡ್ಡದಾದರೆ :-
ಎಡಿನಾಯಿಡ್ಸ್ ಗಾತ್ರದಲ್ಲಿ ದೊಡ್ಡದಾದರೆ ಮೂಗಿನ ಒಳಭಾಗದಲ್ಲಿ ಅಡ್ಡಿಯುಂಟಾಗುತ್ತದೆ. ಹಾಗಾಗಿ ಎಡಿನಾಯಿಡ್ಸ್ ಉಬ್ಬಿರುವವರ ಬಾಯಿಯ ಮೂಲಕ ಹೆಚ್ಚು ಉಸಿರಾಡಬೇಕಾಗುತ್ತದೆ. ಊಟ ಮಾಡುವಾಗ ತುತ್ತು ನುಂಗಲು ಕಷ್ಟವಾಗುತ್ತದೆ. ಮುಖ್ಯವಾಗಿ ಚಿಕ್ಕಮಕ್ಕಳು ತುತ್ತು ನುಂಗಲು ಕಷ್ಟಪಡುತ್ತಾರೆ. ನುಂಗುವ ಸಮಯದಲ್ಲಿ ಬಾಯಿಯ ಮೂಲಕ ವಿಚಿತ್ರವಾದ ಶಬ್ದ ಕೂಡ ಬರುತ್ತದೆ. ನಿದ್ರಿಸುವಾಗ ಕೂಡ ಗೊರಕೆ ಬರುತ್ತದೆ. ಎಡಿನಾಯಿಡ್ಸ್ ಇರುವ ಮಕ್ಕಳ ಮುಖದ ಲಕ್ಷಣ ಕೂಡ ಬದಲಾಗುತ್ತದೆ. ಇಂತಹ ಮುಖಲಕ್ಷಣಗಳನ್ನು ʼಎಡಿನಾಯಿಡ್ಸ್ ಫೇಸಿಸ್ʼ ಎನ್ನುತ್ತಾರೆ.
ಎಡಿನಾಯಿಡ್ಸ್ ನಿಂದಾಗಿ ಮೂಗು ಮತ್ತು ಕಿವಿಯ ಮಧ್ಯದಲ್ಲಿರುವ ಹಿಷ್ಟಾಷಿಯನ್ ನಾಳ ಮುಚ್ಚಿಹೋಗುತ್ತದೆ. ಇದರಿಂದ ಶ್ರವಣದೋಷ ಉಂಟಾಗುತ್ತದೆ. ಕಿವಿಯಲ್ಲಿ ಸದಾ ನೋವು ಮತ್ತು ಕೀವು ಬರುತ್ತದೆ.
ರೆಡಿನಾಯಿಡ್ಸ್ ನ ಲಕ್ಷಣಗಳು :-
ಎಡಿನಾಯಿಡ್ಸ್ ಇರುವ ಮಕ್ಕಳ ಮೂಗಿನಿಂದ ಸದಾ ನೀರು ಸುರಿಯುತ್ತಿರುತ್ತದೆ. ಗಂಟಲು ನೋವು, ಕೆಮ್ಮು ಇರುತ್ತದೆ. ಇಂತಹ ಮಕ್ಕಳ ಗಂಟಲನ್ನು ಪರೀಕ್ಷಿಸಿದರೆ, ಕಿರುನಾಲಿಗೆಯ ಹಿಂಭಾಗ ಗಂಟಲಿನಲ್ಲಿ ಕೋಳಿಮೊಟ್ಟೆಯ, ಬಿಳಿ ದ್ರವದಂತೆ ಕಂಡುಬರುತ್ತದೆ. ಹೀಗೆ ಕಂಡು ಬರುವುದೆಂದರೆ ಅದು ಎಡಿನಾಯಿಡ್ಸ್ ಎಂದು ಅರ್ಥ. ಎಡಿನಾಯಿಡ್ಸ್ ಇರುವವರಿಗೆ ಸದಾ ನೆಗಡಿಯಿರುತ್ತದೆ. ಸೈನುಸೈಟಿಸ್ ಇರುತ್ತದೆ. ಎಡಿನಾಯಿಡ್ಸ್ ನಿಂದಾಗಿ ಮಕ್ಕಳು ಮಂಕಾಗುತ್ತಾರೆ.
ಚಿಕಿತ್ಸೆ : ಎಡಿನಾಯಿಡ್ಸ್ನ ಊರಿಯೂತದಿಂದ ತೊಂದರೆಯಾಗುತ್ತಿದ್ದಾಗ ಶಸ್ತ್ರಚಿಕಿತ್ಸೆಯೊಂದೇ ಮಾರ್ಗ.
ಟಾನ್ಸಿಲ್ ಬಾವು :-
ಗಂಟಲಿನಲ್ಲಿರುವ ಟಾನ್ಸಿಲ್ ಗಳು ಸೋಂಕಿನಿಂದ ಬಾವು ಬರುವುದನ್ನು, ಕಿವುಗಟ್ಟುವುದನ್ನು ಎಕ್ಯೂಟ್ ಟಾನ್ಸಿಲೈಟಿಸ್ ಎನ್ನುತ್ತಾರೆ.
ಟಾನ್ಸಿಲ್ ಬಾವು ಬಂದಾಗ ಗಂಟಲಲ್ಲಿ ನೋವಾಗುತ್ತದೆ. ತುತ್ತು ನುಂಗಲು ಕಷ್ಟವಾಗುತ್ತದೆ. ಜ್ವರ ಬರುತ್ತದೆ. ಕಿವಿಯಲ್ಲಿ ಕೂಡ ನೋವಾಗುತ್ತದೆ. ತಲೆನೋಯುತ್ತದೆ. ಮಾತನಾಡಲು ಕೂಡ ಕಷ್ಟವಾಗುತ್ತದೆ.
ಟಾನ್ಸಿಲ್ ಬಾವು ಇರುವ ಕೆಲವರಿಗೆ ಪೆರಿಟಾನ್ಸಿಲಾರ್ ಆಬ್ಸನ್ ಗೆ ಬದಲಾಗುತ್ತದೆ. ಇದರಿಂದ ಸ್ವರಪೆಟ್ಟಿಗೆ ಉಬ್ಬುತ್ತದೆ. ಕೀಲುಗಳ ಊತ, ಮೂತ್ರಪಿಂಡಗಳ ಊರಿಯೂತ, ಕಿವಿಯಲ್ಲಿ ನೋವು ಇತ್ಯಾದಿಗಳು ಇರುತ್ತದೆ.
ಟಾನ್ಸಿಲ್ ಕೀವುಗೂಡಿ ಬಾವು ಬಂದಾಗ ಬಲವಾದ ರೋಗನಿರೋಧಕ ಔಷಧಿಗಳನ್ನು ಬಳಸಬೇಕು. ಸದಾ ಟಾನ್ಸಿಲ್ ಬಾವು ಬರುತ್ತಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.
ಮೂಗಿನಿಂದ ರಕ್ತಸ್ರಾವ :-
ಮೂಗಿನಿಂದ ರಕ್ತ ಸುರಿಯುವುದನ್ನು ʼಎಪಿಸ್ ಟಾಕ್ಸಿಸ್ʼ ಎನ್ನುತ್ತಾರೆ. ಮಕ್ಕಳು ಆಡುವಾಗ ಮೂಗಿಗೆ ಪೆಟ್ಟಾಗಿ ರಕ್ತ ಸುರಿಯುವುದು ಸಹಜವೆ. ಅಂತೆಯೇ ಕೆಲವು ವಿವಿಧ ಜ್ವರಗಳಿದ್ದಾಗ, ಮಕ್ಕಳ ಮೂಗಿನಿಂದ ರಕ್ತ ಸುರಿಯುತ್ತದೆ. ಮೂಗಿನಲ್ಲಿ ಏನಾದರೂ ಕಡ್ಡಿ, ಕಾಳುಗಳು ಸಿಕ್ಕಿಕೊಂಡಾಗಲು ರಕ್ತ ಸುರಿಯುತ್ತದೆ. ಎಡಿನಾಯಿಡ್ಸ್ ಬಾವು ಬಂದಿದ್ದಾಗ, ಡಿಫ್ತೀರಿಯಾ ರೋಗವಿದ್ದಾಗ ಕೂಡ ಮೂಗಿನಿಂದ ರಕ್ತ ಸುರಿಯುತ್ತದೆ.
ಕೆಲವರಿಗೆ ಕಾರಣವಿಲ್ಲದೆ ರಕ್ತ ಸುರಿಯುತ್ತದೆ. ಇಂತಹ ಪ್ರಸಂಗಗಳು ಲ್ಯುಕೀಮಿಯಾ (ರಕ್ತದ ಕ್ಯಾನ್ಸರ್) ಆಗಿರಬಹುದು. ಮೈಟ್ರಲ್ ಸ್ಪೀನೋಸಿಸ್, ನಾಯಿಕೆಮ್ಮು, ಅಮ್ಮ, ಮಲೇರಿಯಾ, ಟೈಫಾಯಿಡ್, ಇನ್ ಫ್ಲುಯೆಂಜಾದತಹ ರೋಗಗಳಿದ್ದಾಗ ಕೂಡ ಮೂಗಿನಿಂದ ರಕ್ತ ಸುರಿಯುತ್ತದೆ.
ಮೂಗಿನಿಂದ ರಕ್ತ ಸುರಿಯುತ್ತಿದ್ದಾಗ ನಿಗದಿತ ಪರೀಕ್ಷೆಗಳು ನಡೆಸಿ ಸೂಕ್ತ ಚಿಕಿತ್ಸೆ ಕೈಗೊಳ್ಳಬೇಕಾಗುತ್ತದೆ.
ವಿಜಯನಗರ ವಾರ್ಡ್ ನಂಬರ್ 20ರಲ್ಲಿ ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.