ಮನೆ ಭಾವನಾತ್ಮಕ ಲೇಖನ ಸಂತೋಷದಿಂದ ಬದುಕಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಸಂತೋಷದಿಂದ ಬದುಕಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

0

ಪ್ರಸ್ತುತ ಜಗತ್ತಿನಲ್ಲಿ ಒತ್ತಡ ಮತ್ತು ಖಿನ್ನತೆ ಸಾಮಾನ್ಯ, ಇದಕ್ಕೆ ಮುಖ್ಯ ಕಾರಣ ನಮ್ಮ ಬಿಡುವಿಲ್ಲದ ಜೀವನಶೈಲಿ. ಈ ಖಿನ್ನತೆಯು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದೆ, ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಖಂಡಿತವಾಗಿಯು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯು ಸಾಧ್ಯವಾಗುತ್ತದೆ.

Join Our Whatsapp Group

ಜೀವನದಲ್ಲಿ ಸಂತೋಷವಾಗಿರಲು ಧನಾತ್ಮಕ ಆಲೋಚನೆಗಳು ಬಹಳ ಮುಖ್ಯ. ಈ ಸಕಾರಾತ್ಮಕ ಆಲೋಚನೆಗಳು ನೀವು ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಆನಂದಿಸಲು ಸಹಾಯ ಮಾಡುತ್ತದೆ. ಹಾಗೂ ಜೀವನದಲ್ಲಿ ಎದುರಾಗುವಂತಹ ಒತ್ತಡದ ಪರಿಸ್ಥಿತಿಯನ್ನು ಸಮರ್ಪಕ ರೀತಿಯಲ್ಲಿ ಎದುರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಸಕಾರಾತ್ಮಕ ಮನಸ್ಥಿತಿಯು ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳನ್ನು ಮೂಡಿಸುತ್ತದೆ. ನಿಮ್ಮ ಮನಸ್ಥಿತಿ ಸಕಾರಾತ್ಮಕವಾಗಿದ್ದರೆ, ನೀವು ಒತ್ತಡಕ್ಕೆ ಒಳಗಾಗವ ಸಾಧ್ಯತೆ ಇರುವುದಿಲ್ಲ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.

ಜೀವನದಲ್ಲಿ ಸಂತೋಷವಾಗಿರಲು, ಸೋಮಾರಿತನವನ್ನು ತ್ಯಜಿಸುವುದು ಬಹಳ ಮುಖ್ಯ. ಆಯಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಜೀವನದಲ್ಲಿ ಒತ್ತಡದಿಂದ ಹೊರಬರಲು ದೈಹಿಕ ವ್ಯಾಯಾಮ ಮತ್ತು ಯೋಗವನ್ನು ಪ್ರತಿದಿನ ಮಾಡಬೇಕು. ಯೋಗದಿಂದ ಮನಸ್ಸಿಗೆ ನಮ್ಮದಿ ದೊರೆಯುತ್ತದೆ. ದೈಹಿಕ ವ್ಯಾಯಾಮವು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ಇಂದಿನ ದಿನಗಳಲ್ಲಿ ಅನೇಕರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಲ್ಯಾಪ್ ಟಾಪ್ ನೋಡುವುದರಲ್ಲಿಯೇ ಕಳೆಯುತ್ತಾರೆ. ಇದು ಖಂಡಿತವಾಗಿಯೂ ದಣಿದ ಭಾವನೆಯನ್ನು ಮೂಡಿಸುತ್ತದೆ. ಅದರ ಬದಲಿಗೆ ಪ್ರಕೃತಿಯ ಮಡಿಲಲ್ಲಿ ನಡೆಯುವುದು, ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿ.

ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಹೊಸ ಹೊಸ ಕಲಿಕೆಗಳನ್ನು ರೂಢಿಸಿಕೊಳ್ಳಬೇಕು. ಇದು ನಮ್ಮನ್ನು ಕ್ರೀಯಾಶೀಲರನ್ನಾಗಿಸುವುದು ಮಾತ್ರವಲ್ಲದೆ, ಮನಸ್ಸಿಗೆ ಉಲ್ಲಾಸ ನೀಡುತ್ತದೆ.

ನಾವು ಯಶಸ್ಸಿನ ಹಿಂದೆ ಓಡುತ್ತಲೇ ಇರುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ಸಣ್ಣ ಸಾಧನೆಗಳನ್ನು ಆಚರಿಸಲು ಮರೆಯುತ್ತೇವೆ. ದೊಡ್ಡದನ್ನು ಸಾಧಿಸುವ ಹಾದಿಯಲ್ಲಿ ನಾವು ಯಾವಾಗಲು ಸಣ್ಣ ಸಂತೋಷಗಳನ್ನು ನಿರ್ಲಕ್ಷಿಸುತ್ತೇವೆ. ಇದರ ಬದಲು ಸಣ್ಣಪುಟ್ಟ ಗೆಲುವನ್ನು ಉತ್ಸಾಹದಿಂದ ಆಚರಿಸಿ, ಇದು ನೀವು ನಿಮ್ಮ ಜೀವನವನ್ನು ಆನಂದಿಸುವಂತೆ ಮಾಡುತ್ತದೆ.

ನಿದ್ರೆ ಪೂರ್ಣವಾಗದಿದ್ದರೂ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಹಾಗಾಗಿ ಪ್ರತಿದಿನ 7 ರಿಂದ 8 ಗಂಟೆಗಳ ನಿದ್ರೆ ಪಡಯುವುದು ತುಂಬಾ ಮುಖ್ಯವಾಗಿದೆ.