ಗ್ಯಾಸ್ಟಿಕ್ ಅಲ್ಸರ್ : ಇದು ಸಾಮಾನ್ಯ ನೋವು ಗಲ್ಲದಿಂದ ಹೊಟ್ಟೆಯ ಆದಿಭಾಗದ ಮಧ್ಯದಲ್ಲಿ ಅನ್ನನಾಳದಲ್ಲಿ ಆಗುತ್ತದೆ. ಆಗ ನಾವು ಆಹಾರವನ್ನು ಪ್ರಯಾಸದಿಂದ ನುಂಗುತ್ತೇವೆ ಈ ಕರುಳಿನ ಮತ್ತು ಗ್ಯಾಸ್ಟಿಕ್ ಅಲ್ಸರ್ ನ ಬಾಧೆ ಒಂದು ಸಲ ಆರಂಭವಾದರೆ ನಿಲ್ಲುವ ಸಂಭವ ಇಲ್ಲ. ನಾವು ಆಹಾರ ಸೇವಿಸಿದ ತಕ್ಷಣ ನೋವು ಆರಂಭವಾಗುತ್ತದೆ ಆದರೆ ಆಹಾರ ಸೇವಿಸದಿದ್ದರೆ ಇನ್ನೂ ಹೆಚ್ಚಾಗುತ್ತದೆ.
ಸಣ್ಣ ಕರುಳಿನ ಅಲ್ಸರ್ : ಇದರ ನೋವು ಸಾಮಾನ್ಯವಾಗಿರುತ್ತದೆ.ಇದೂ ಸಹ ಆಹಾರ ಸೇವಿಸಿದರೆ ನೋವು ಕಡಿಮೆಯಾಗುತ್ತದೆ. ಇದು ಆಹಾರ ಸೇವಿಸಿದ ಎರಡು ಮೂರು ಗಂಟೆಗಳ ಮೇಲೆ ನೋವು ಆರಂಭವಾಗುತ್ತದೆ. ಕೆಲವು ಸಲ ಈ ಗಾಯಗಳ ನೋವು
ಕೆಲವು ದಿನ ವಾರ ತಿಂಗಳುಗಳ ಕಾಲ ಇರುವುದಿಲ್ಲ.
ಮಾನಸಿಕ ಒತ್ತಡ : ಸಹ ಈ ಅಲ್ಸರ್ ಗೆ ಕಾರಣವಾಗುತ್ತದೆ ಮಾನಸಿಕ ಒತ್ತಡಗಳಾದಾಗ ಅದು ಜಠರದಲ್ಲಿ ಆಮ್ಲ ಹೆಚ್ಚು ಸ್ರವಿಸಲು ಅವಕಾಶ ಮಾಡುತ್ತದೆ.
ಪರಿಹಾರಗಳು :
ಆಹಾರ ಪತ್ಯಗಳು :
ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು. ಸಮ ಪ್ರಮಾಣ ಊಟ ಸೇವಿಸಬೇಕು.
ಮದ್ಯಪಾನ ಧೂಮಪಾನ, ತಂಬಾಕು, ಗುಟಕ ಸೇವನೆಯಿಂದ ದೂರವಿರಬೇಕು.
ನೀರನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಕಾಫಿ ಚಹಾ ಸೇವಿಸಬಾರದು.
ಮಸಾಲೆಯುಕ್ತ ಆಹಾರ,ಉಪ್ಪು ಉಪ್ಪಿನಕಾಯಿ ಮೆಣಸು,ಶುಂಠಿ, ಸಾಸುವೆ, ಕರ್ರಿ,ಬಹಳ ಬಿಸಿ ಅಥವಾ ಬಹಳ ತಣ್ಣಗಿರುವ ಜಿಡ್ಡು ಆಹಾರ ಬೀಜ, ಒಣ ಹಣ್ಣುಗಳು ಒರಟು ಆಹಾರಗಳು ಬಿಡಿ .ಮಾನಸಿಕ ಉದ್ವೇಗ ಬಹಳ ಆಲೋಚನೆ ವ್ಯಾಕುಲತೆಗೆ ಒಳಗಾಗುವುದು ಬೇಡ. ಧಾನ್ಯ ಪ್ರಾಣಾಯಾಮ ಮಾಡಿ.
ಊಟದ ನಂತರ ಬಗ್ಗುವುದು, ಪ್ರಯಾಸದ ಕೆಲಸ,ಸಾಹಸದ ಕೆಲಸ ಮಾಡಬಾರದು.
ತರಕಾರಿ ಮತ್ತು ಹಣ್ಣುಗಳಿಂದ :
ಮನೆ ಮದ್ದು :
ರಾಕಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ,ಹು
ಳಿತೇಗು ಅತ್ಯಾಮ್ಲತೆ ಶಮಾನವಾಗುತ್ತದೆ.
ಆಹಾರ ಪಚವಾಗದೆ ಹೊಟ್ಟೆಯಲ್ಲಿ ಒಬ್ಬರವಿದ್ದರೆ ಜೀರಿಗೆ, ಒಣದ್ರಾಕ್ಷಿ, ಓಮದ ಕಾಳುಗಳನ್ನು ಜಜ್ಜಿ ಸೇವಿಸಬಹುದು. ಹುಳಿಯಿಲ್ಲದ ಮಜ್ಜಿಗೆಯ ಹೇರಳವಾದ ಸೇವನೆಯಿಂದ ಶಮನಾಗುತ್ತದೆ.
ಮಜ್ಜಿಗೆ, ಇಂಗು, ಕರಿಬೇವು ಸೇರಿಸಿ ಕುಡಿದರೆ ಹೊಟ್ಟೆಯಲ್ಲಿ ನುಲಿತ ಕಡಿಮೆಯಾಗುತ್ತದೆ.
ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯಬೇಕು ಅಥವಾ ತಂಬುಳಿ ಮಾಡಬೇಕು ಸೋಡದ ನೀರಿಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆ ಬೆರೆಸಿ ಕುಡಿಯಬಹುದು.
ಬಾರ್ಲಿ ಗೋಧಿ ಹೆಸರು ಕಾಳು,ಹಳೆಯ ಅಕ್ಕಿ,ಕಾಯಿಸಿ ಆರಿಸಿದ ನೀರು ಸಕ್ಕರೆ, ಜೇನುತುಪ್ಪ ಹಾಗಲಕಾಯಿ, ಬಾಳೆಯ ಹೂವು ಕುಂಬಳಕಾಯಿ, ಪಡವಲಕಾಯಿ, ದಾಳಿಂಬಿ, ತಾಜಾ ಮಜ್ಜಿಗೆ ಸೇವಿಸಿ.
ಪ್ರತಿದಿನ ಊಟದ ನಂತರ ಸಣ್ಣ ತುಂಡು ಬೆಲ್ಲ ತಿಂದರೆ ಅಸಿಡಿಟಿಯ ತೊಂದರೆ ಬರುವುದಿಲ್ಲ ಆಹಾರ ಪಥ್ಯ ಎಳ್ಳು ಎಳ್ಳಿನಿಂದ ಮಾಡಿದ ಯಾವುದೇ ಪದಾರ್ಥ ಉದ್ದು ಹುರುಳಿ, ಉಪ್ಪು,, ಹುಳಿ, ಖಾರ, ಮೊಸರು, ಮೆಣಸು, ಹಸಿಮೆಣಸು. ಮಸಾಲೆ ಆಹಾರ ಪದಾರ್ಥಗಳನ್ನು ತ್ಯಜಿಸಿ.
ಮುದ್ರೆಯಿಂದ :
ಶಂಖ ಮುದ್ರೆ ಪಚನ ಕ್ರಿಯೆ ಸುಧಾರಿಸುತ್ತದೆ ಇದನ್ನು ಇಪ್ಪತ್ತು ಮೂವತ್ತು ನಿಮಿಷವಾದರೂ ಮಾಡಬೇಕಾಗುತ್ತದೆ.
ಸರಬಿ ಮುದ್ರೆ ಅಸಿಡಿಟಿ ದೂರವಾಗಿ ದೇಹದ ಜಡತೆಯನ್ನು ಶಮಾನಗೊಳಿಸುತ್ತದೆ. ಪ್ರತಿದಿನ 10 ನಿಮಿಷವಾದರೂ ಮಾಡಬೇಕು.
ಪ್ರಾಣಾಯಾಮ :
ನಿತ್ಯ ಪ್ರಾಣಯಾಮದ ಜೊತೆಗೆ ಸೂರ್ಯ ಭೇದನ ಶ್ವಾನ ಪ್ರಾಣಾಯಾಮ ಮಾಡಿ.
ವ್ಯಾಯಾಮದಿಂದ :
ಬೆಳಿಗ್ಗೆ ಮತ್ತು ಸಂಜೆ ಕಾಲದಲ್ಲಿ ಸ್ವಲ್ಪ ವ್ಯಾಯಾಮ ಮತ್ತು ಪ್ರತಿದಿನ ಕೆಲವು ನಿಮಿಷಗಳನ್ನು ನಡೆಯುವುದರಿಂದ ದೇಹದ ಅಂಗಗಳಲ್ಲಿ ರಕ್ತ ಚಲನೆಯಾಗಿ ಹೊಟ್ಟೆಯ ಮತ್ತು ಕರುಳಿನ ಸ್ನಾಯುಗಳು ಕ್ರಿಯೆ ಗೊಳ್ಳುವುದರಿಂದ ಶೀಘ್ರವಾಗಿ ಆಹಾರ ಪಚನವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ರೀತಿ :
ಈ ವ್ಯಾದಿಯಿಂದ ಬಳಲುತ್ತಿರುವವರನ್ನು ಅವರ ಜಾತಕದಿಂದ ಹೇಗೆ ನೋಡಬಹುದು ಎಂದು ತಿಳಿಯೋಣ ಇದಕ್ಕೆ ಕಾರಕ ಗ್ರಹಗಳು ಗುರು ಮತ್ತು ಶನಿ.
ಗುರು ಜಠರಾಗ್ನಿ ಮತ್ತು ಪಿತ್ತ ಜನಾಂಗದ ಕಾರಕಗ್ರಹ ಗುರು. ವಾಯುಕಾರಗ್ರಹ ಶನಿ.
ಸ್ಥಾನಗಳಲ್ಲಿ : ಪಂಚಮ ಮತ್ತು ಷಷ್ಠ ಸ್ಥಾನಗಳು.
ರಾಶಿಯಲ್ಲಿ : ಸಿಂಹ ಕನ್ಯಾಸ ಮತ್ತು ಮಕರ ರಾಶಿಗಳು.
ಕ್ಯಾನ್ಸರ್, ಅಲ್ಸರ್ ಗೆ : ಕುಜ ಕೇತು ಗುರು ಮತ್ತು ಶನಿಗೆ ಕೇತು ಮತ್ತು ಕುಜನ ಪ್ರಭಾವ ಬಂದಾಗ.
ಅಪೆಂಡಿಕ್ಸ್ ಗೆ : ಕುಜ ರವಿ ಕಾರಗ್ರಹಗಳು ಗುರು ಮತ್ತು ಶನಿಗೆ ಕುಜನ ಪ್ರಭಾವ ಬಂದಾಗ ಉಷ್ಣ ವಾಯು ಅನಂತರ ಅದು ಅಪೆಂಡಿಕ್ಸ್ ಅಥವಾ ಅಲ್ಸರ್ ಆಗಿ ಮಾರ್ಪಡುತ್ತದೆ.
ಲಗ್ನ ಪಂಚಮ : ಷಷ್ಠ ಸ್ಥಾನಗಳು ಈ ಭಾವಗಳು ಕೆಟ್ಟಾಗ ಅಥವಾ ಗುರು ಶನಿಯಿಂದ ಮತ್ತು ಪೀಡಿತರಾದಾಗ ಈ ವ್ಯಾಧಿಗಳು ಬರುತ್ತದೆ. ಗುರು ನಮ್ಮ ದೇಹ ಆಮ್ಲಗಳನ್ನು ಉತ್ಪತ್ತಿ ಮಾಡುತ್ತಾರೆ. ಶನಿ ವಾಯುಗ್ರಹವಾಗಿ ವಾತಯುಕ್ತ ವಾಯುವಿಗೆ ಕಾರಕನಾಗಿರುತ್ತಾನೆ. ಅಂದರೆ ಶನಿಯು ಪೀಡಿತನಾಗಿ ಗುರುವನ್ನು ದೃಷ್ಟಿಸಿ ಅಥವಾ ಯುತಿ ಪಡೆದಾಗ ಈ ವ್ಯಾದಿಯು ಆರಂಭ ಆರಂಭದಲ್ಲೆ ಇದಕ್ಕೆ ತಕ್ಕ ಉಪಶಮನ ಮಾಡದಿದ್ದರೆ ಗ್ಯಾಸ್ಟಿಕ್ ನಿಂದ ಅಲ್ಸರ್ ಅಲ್ಸರ್ನಿಂದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.