ಅಪ್ಪ : ಪರೀಕ್ಷೆಯ ಪ್ರಶ್ನೆ ಹೇಗಿತ್ತು ಕಠಿಣವೋ ಸುಲಭವೂ?
ಮಗ : ಪ್ರಶ್ನೆ ಓದಲು ಸುಲಭವಾಗಿತ್ತು ಉತ್ತರ ಬರೆಯಲು ಕಠಿಣವೆನಿಸಿತು.
ಗೆಳೆಯ : ಈಗ ಹೇಳು, ಈ ನಿನ್ನ ಹೆಂಡತಿಯನ್ನು ನೀನು ಹೇಗೆ ಮದುವೆಯಾದೆ, ಅವಳಿಗೆ ರೂಪವಿಲ್ಲ ಶಿಕ್ಷಣವಿಲ್ಲ, ಅಡಿಗೆ ಸಹ ಬರುವುದಿಲ್ಲ, ಬುದ್ಧಿಯಂತೂ ಇಲ್ಲ.!
ಸುಬ್ಬ : ನನ್ನ ನಂಬುಗೆ ಮದುವೆಯಾಗುವಂತೆ ಮಾಡಿತು.
ಗೆಳೆಯ : ಅಂದರೆ?
ಸುಬ್ಬ : ಅವಳ ತಂದೆ ತುಂಬಾ ಶ್ರೀಮಂತನೆಂದು ನಂಬಿದ್ದೆ.
ಆಕೆ : ನಮ್ಮೆಜಮಾನ್ರಿಗೆ ಒಂದು ದಿನ ಮಂತ್ರ ಹಾಕಿಸಬೇಕಲ್ಲ.
ಪುಟ್ಟಪ್ಪ ಯಾಕೆ ತಾಯಿ?
ಆಕೆ : ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಅಂತ ತಿಳ್ಕೊಬೇಕು.
ಪುಟ್ಟಪ್ಪ : ಅದಕ್ಯಾಕೆ ತಾಯಿ ಮಂತ್ರ, ಒಂದೆರಡು ರೌಂಡು ಗುಂಡು ಹಾಕಿಸಿದರೆ ಆಯ್ತು ಅವರೇ ಬಾಯಿ ಬಿಡುತ್ತಾರೆ.