ಮನೆ ಸುದ್ದಿ ಜಾಲ ವಾಯು ಗುಣಮಟ್ಟ: ಬೆಂಗಳೂರು, ಮೈಸೂರು, ಮಂಗಳೂರು ನಗರಗಳ ವರದಿ ಆತಂಕಕಾರಿ

ವಾಯು ಗುಣಮಟ್ಟ: ಬೆಂಗಳೂರು, ಮೈಸೂರು, ಮಂಗಳೂರು ನಗರಗಳ ವರದಿ ಆತಂಕಕಾರಿ

0

ಬೆಂಗಳೂರು: ಕೊರೊನಾ ಸಾಂಕ್ರಾಮಿಕ-ಸಂಬಂಧಿತ ಲಾಕ್‌ಡೌನ್‌ಗಳು ಮತ್ತು ಕರ್ಫ್ಯೂಗಳ ಹೊರತಾಗಿಯೂ ದಕ್ಷಿಣ ಭಾರತ 10 ನಗರಗಳು ವಾಯುಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಮೀರಿದ್ದು, ಅದರಲ್ಲಿ ರಾಜ್ಯದ ಪ್ರಮುಖ ನಗರಗಳಾಧ ಬೆಂಗಳೂರು, ಮೈಸೂರು ಮತ್ತು ಮಂಗಳೂರು ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.

ನವೆಂಬರ್ 2020ರಿಂದ ನವೆಂಬರ್ 2021ರ ಅವಧಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ ಡೇಟಾವನ್ನು ಉಲ್ಲೇಖಿಸಿರುವ ಪರಿಸರ ವೀಕ್ಷಣಾ ಸಂಸ್ಥೆ ಗ್ರೀನ್‌ಪೀಸ್ ಇಂಡಿಯಾ ಈ ವರದಿ ಬಹಿರಂಗಪಡಿಸಿದೆ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಮಾಡಿದ ಗಾಳಿಯ ಗುಣಮಟ್ಟದಲ್ಲಿ ಲಾಭಗಳನ್ನು ಹಿಡಿದಿಟ್ಟುಕೊಳ್ಳುವ ಬೆಂಗಳೂರಿನ ಸಾಮರ್ಥ್ಯವನ್ನು ದೆಹಲಿ ಮೂಲದ ವಿಜ್ಞಾನ ಮತ್ತು ಪರಿಸರ ಕೇಂದ್ರ ಶ್ಲಾಘಿಸಿತ್ತು. ಆದರೆ ಇತ್ತೀಚಿನ ವರದಿಗೆ ಇದು ತೀವ್ರ ವ್ಯತಿರಿಕ್ತವಾಗಿದೆ. ಕರ್ನಾಟಕದ ಮೂರು ನಗರಗಳಲ್ಲದೆ, ಹೈದರಾಬಾದ್, ಚೆನ್ನೈ, ಅಮರಾವತಿ, ವಿಶಾಖಪಟ್ಟಣಂ, ಕೊಚ್ಚಿ, ಪುದುಚೇರಿ ಮತ್ತು ಕೊಯಮತ್ತೂರಿನ ವಾಯುಮಾಲಿನ್ಯದ ದತ್ತಾಂಶವನ್ನು ಸಹ ವಿಶ್ಲೇಷಿಸಲಾಗಿದೆ.

ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿ ವಾರ್ಷಿಕ ಕಣಗಳ (PM) 2.5 (2.5 ಮೈಕ್ರಾನ್ಸ್‌ಗಿಂತ ಕಡಿಮೆ ಕಣಗಳು) ಮಟ್ಟಗಳು WHO ಮಾರ್ಗಸೂಚಿಗಳನ್ನು ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಷ್ಟು ಸುಮಾರು 6ರಿಂದ 7 ಪಟ್ಟು ಮೀರಿದೆ. ಇದೇ ವೇಳೆ ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪಾಂಡಿಚೇರಿಯಲ್ಲಿ ವಾರ್ಷಿಕ ಕಣಗಳ 2.5 ಮಟ್ಟವು ಮಾರ್ಗಸೂಚಿಗಳನ್ನು 4ರಿಂದ 5 ಪಟ್ಟು ಮೀರಿದೆ,” ಎಂದು ವರದಿ ಹೇಳಿದೆ.

ವಿಶಾಖಪಟ್ಟಣಂ ಮತ್ತು ಹೈದರಾಬಾದ್‌ನಲ್ಲಿ ವಾರ್ಷಿಕ PM10 (10 ಮೈಕ್ರಾನ್‌ಗಿಂತ ಕಡಿಮೆ) ಮಟ್ಟಗಳು ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳ ನಿಗದಿತ WHO ಮಾರ್ಗಸೂಚಿಗಳನ್ನು 6 ರಿಂದ 7 ಪಟ್ಟು ಮೀರಿದರೆ, ಬೆಂಗಳೂರು, ಮಂಗಳೂರು, ಅಮರಾವತಿ, ಚೆನ್ನೈ ಮತ್ತು ಕೊಚ್ಚಿ 3ರಿಂದ 4 ಪಟ್ಟು ಮಿತಿಯನ್ನು ಮೀರಿದ ಡೇಟಾವನ್ನು ದಾಖಲಿಸಿವೆ.

ಮೈಸೂರು, ಕೊಯಮತ್ತೂರು ಮತ್ತು ಪಾಂಡಿಚೇರಿಯಲ್ಲಿ ವಾರ್ಷಿಕ ಕಣಗಳ 10PM ಮಟ್ಟಗಳು ದಾಖಲಾಗಿವೆ. ಇದು ಸುರಕ್ಷಿತ ಗಾಳಿಗಾಗಿ WHO ಮಾರ್ಗಸೂಚಿಗಳನ್ನು 2ರಿಂದ 3 ಪಟ್ಟು ಮೀರಿದೆ. ಪಳೆಯುಳಿಕೆ ಇಂಧನ ಚಾಲಿತ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು, ಕೈಗಾರಿಕೆಗಳು, ಸಾರಿಗೆ, ತ್ಯಾಜ್ಯ ಸುಡುವಿಕೆ ಮತ್ತು ನಿರ್ಮಾಣ ಚಟುವಟಿಕೆಗಳು ವಾಯು ಗುಣಮಟ್ಟ ಹದಗೆಡಲು ಪ್ರಾಥಮಿಕ ಕಾರಣ ಎಂದು ಗ್ರೀನ್‌ಪೀಸ್ ಹೇಳಿದೆ.

ವಾಯು ಮಾಲಿನ್ಯಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಅಸ್ತಮಾ, ಕಡಿಮೆ ತೂಕದ ಜನನ, ಖಿನ್ನತೆ, ಸ್ಕಿಜೋಫ್ರೇನಿಯಾ, ಮಧುಮೇಹ, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್ ಮತ್ತು ಅಕಾಲಿಕ ಮರಣಕ್ಕೆ ಕಾರಣವಾಗಬಹುದು ಎಂದು ವರದಿ ತಿಳಿಸಲಾಗಿದೆ.

ಹಿಂದಿನ ಲೇಖನಪ.ಜಾತಿ ಮತ್ತು ಪಂಗಡದವರಿಗೆ ಬಡ್ತಿಯಲ್ಲಿ ಮೀಸಲಾತಿ  ವಿಚಾರ: ಮಾನದಂಡ ರೂಪಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
ಮುಂದಿನ ಲೇಖನಕೊರೋನಾ: ದೇಶದಲ್ಲಿಂದು 2.51 ಲಕ್ಷ ಹೊಸ ಕೇಸ್ ಪತ್ತೆ