ಮನೆ ತಂತ್ರಜ್ಞಾನ ಸುನಾಮಿ ಎಬ್ಬಿಸಿದ TVS ರೈಡರ್ 125: ಪವರ್ ಅಂದ್ರೆ ಇದೇ ಅಲ್ವಾ

ಸುನಾಮಿ ಎಬ್ಬಿಸಿದ TVS ರೈಡರ್ 125: ಪವರ್ ಅಂದ್ರೆ ಇದೇ ಅಲ್ವಾ

0

ಟಿವಿಎಸ್ ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಅದಕ್ಕೆ ಕಾರಣ, NTorq ಸ್ಕೂಟರ್ ಹಾಗೂ ರೈಡರ್ 125 ಬೈಕ್. ಉತ್ತಮ ಕಾರ್ಯಕ್ಷಮತೆ ಹೊಂದಿರುವುದರಿಂದ ಇವೆರಡನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ರೈಡರ್ ಬೈಕ್ ಮಾರಾಟದಲ್ಲಿ ಕಂಪನಿ ಐತಿಹಾಸಿಕ ಸಾಧನೆ ಮಾಡಿದೆ. ಸೆಪ್ಟೆಂಬರ್ 16, 2021ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ (TVS) ಕಂಪನಿ ‘ರೈಡರ್ 125’ ಬೈಕ್ ಅನ್ನು ಅದ್ದೂರಿಯಾಗಿ ಲಾಂಚ್ ಮಾಡಿತ್ತು. ಇದೀಗ ದೊರೆತ್ತಿರುವ ಮಾಹಿತಿ ಪ್ರಕಾರ, ಮಾರ್ಚ್ 2023ರವರೆಗೆ ಅಂದರೆ ಕೇವಲ 19 ತಿಂಗಳ ಅವಧಿಯಲ್ಲಿ ಬರೋಬ್ಬರಿ 3,16,130 ಯುನಿಟ್ ರೈಡರ್ ಬೈಕ್ ಸೇಲ್ ಮಾಡಿ, ದೊಡ್ಡದೊಂದು ದಾಖಲೆ ನಿರ್ಮಿಸಿದೆ. ಇದನ್ನು ಲೆಕ್ಕಹಾಕಿದಾಗ ಕಳೆದ ಆರ್ಥಿಕ ವರ್ಷ, ತಿಂಗಳಿಗೆ 19,948 ರೈಡರ್ ಬೈಕ್ ಗಳನ್ನು ಕಂಪನಿ ಮಾರಾಟ ಮಾಡಿದೆ.

Join Our Whatsapp Group

ಹೋದ ಆರ್ಥಿಕ ವರ್ಷ (FY2023) ಟಿವಿಎಸ್ ಸುಮಾರು 9,10,376 ಯುನಿಟ್ ಮೋಟಾರ್ ಸೈಕಲ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಸೇಲ್ ಮಾಡಿತ್ತು. ಅದರಲ್ಲಿ ರೈಡರ್ ಬೈಕ್ ಸಿಂಹಪಾಲನ್ನು ಪಡೆದಿದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ. ಒಟ್ಟು ಮಾರಾಟದಲ್ಲಿ ಶೇಕಡ 26% ಪಾಲನ್ನು ಈ ಬೈಕ್ ರೂಪಾಂತರಗಳೇ ಹೊಂದಿವೆ. ಭಾರತದಲ್ಲಿ ರೈಡರ್ ಬೈಕಿಗೆ ಬಜಾಜ್ ಪಲ್ಸರ್ 125, ಹೋಂಡಾ SP 125, ಹೀರೋ ಗ್ಲಾಮರ್ ಮತ್ತು ಸೂಪರ್ ಸ್ಪ್ಲೆಂಡರ್ ಪ್ರತಿಸ್ಪರ್ಧಿಗಳಾಗಿವೆ. ಟಿವಿಎಸ್ ರೈಡರ್ 125 ಈ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸಲು ಕಾರಣವೆಂದರೆ, ಅದರ ಅಥ್ಲೆಟಿಕ್ ಲುಕ್ ಹಾಗೂ ಸ್ಟೈಲ್. ಇದು, ಮಸ್ಕ್ಯುಲರ್ ಟ್ಯಾಂಕ್, ಸ್ನ್ಯಾಜಿ ಹೆಡ್‌ಲೈಟ್, ಸ್ಪ್ಲಿಟ್ ಸೀಟ್ ಹಾಗೂ ಆಕರ್ಷಕ ಟೈಲ್-ಲ್ಯಾಂಪ್ ಅನ್ನು ಪಡೆದಿದೆ. ಜೊತೆಗೆ ಅಕ್ಟೋಬರ್ 2022ರಲ್ಲಿ ಈ ಬೈಕ್ ಅನ್ನು ಅತ್ಯಾಧುನಿಕ TFT ಕ್ಲಸ್ಟರ್ ನೊಂದಿಗೆ ನವೀಕರಿಸಲಾಯಿತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಯಿತು. ಈ ಬೈಕ್, ಬೆಲೆ ಬಗ್ಗೆ ಮಾತನಾಡುವುದಾದರೆ, ರೂಪಾಂತರಗಳೊಗೆ ಅನುಗುಣವಾಗಿ ಬೇರೆ-ಬೇರೆ ದರವನ್ನು ಹೊಂದಿದೆ. ರೈಡರ್ ಡ್ರಮ್ ರೂಪಾಂತರ ರೂ.86,803, ರೈಡರ್ ಸಿಂಗಲ್ ಸೀಟ್ ವೇರಿಯೆಂಟ್ ರೂ.93,719, ರೈಡರ್ ಡಿಸ್ಕ್ ರೂಪಾಂತರ ರೂ.94,319 ಹಾಗೂ ರೈಡರ್ ಸ್ಮಾರ್ಟ್‌ಕನೆಕ್ಟ್ ವೇರಿಯೆಂಟ್ ರೂ.1,00,820 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಆನ್-ರೋಡ್ ದರ ಸೇರಿದಂತೆ ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡಿರಿ.

ಟಿವಿಎಸ್ ರೈಡರ್ 125 ಬೈಕ್ ಎಂಜಿನ್ ಬಗ್ಗೆ ತಿಳಿಯುವುದಾದರೆ, ಇದು 124.8ಸಿಸಿ, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟ್ದ್ ಎಂಜಿನ್ ಹೊಂದಿದ್ದು, 11.38 PS ಗರಿಷ್ಠ ಪವರ್ ಹಾಗೂ 11.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 67kmpl ಮೈಲೇಜ್ ನೀಡಲಿದೆ. ಈ ಬೈಕ್, ಇಕೋ ಹಾಗೂ ಸ್ಪೋರ್ಟ್ಸ್ ಎಂಬ ಎರಡು ರೈಡಿಂಗ್ ಮೋಡ್ ಹೊಂದಿದ್ದು, ಐಡಲಿಂಗ್ ಸ್ಟಾಪ್-ಸ್ಟಾರ್ಟ್ ಬಟನ್ ಪಡೆದಿದೆ. ಜೊತೆಗೆ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ರೇರ್ 5 ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್, 240ಎಂಎಂ ಡಿಸ್ಕ್/ 130ಎಂಎಂ ಡ್ರಮ್, ರೇರ್ 130ಎಂಎಂ ಡ್ರಮ್ ಬ್ರೇಕ್ ಹೊಂದಿದೆ.

ಒಟ್ಟಾರೆ, ಕೇವಲ 19 ತಿಂಗಳ ಅವಧಿಯಲ್ಲಿ ಬರೋಬ್ಬರಿ 3,16,130 ಯುನಿಟ್ ರೈಡರ್ ಬೈಕ್ ಸೇಲ್ ಮಾಡುವ ಮೂಲಕ ಕಂಪನಿ ಭಾರೀ ಸಾಧನೆ ಮಾಡಿದೆ. ಬೈಕ್, ಅತ್ಯುತ್ತಮ ಮೈಲೇಜ್ ಹಾಗೂ ಒಳ್ಳೆಯ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಇಷ್ಟವಾಗುತ್ತಿದ್ದು, ಈ ಆರ್ಥಿಕ ವರ್ಷವು ಖರೀದಿದಾರರಿಂದ ಯಾವ ರೀತಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಹಿಂದಿನ ಲೇಖನಪಾಕ್​ ಪ್ರವಾಸ ಒಲ್ಲೆ ಎಂದ ಭಾರತಕ್ಕೆ ಇತರ ರಾಷ್ಟ್ರಗಳ ಬೆಂಬಲ: ಪಾಕಿಸ್ತಾನದ ಕೈ ತಪ್ಪಿದ ಏಷ್ಯಾಕಪ್​ಗೆ ಲಂಕಾ ಆತಿಥ್ಯ?
ಮುಂದಿನ ಲೇಖನ‘ದಿ ಕೇರಳ ಸ್ಟೋರಿ’ ನಿಷೇಧ V/S ಟ್ಯಾಕ್ಸ್‌ ಫ್ರೀ: ಪರ – ವಿರೋಧ ವಾದವೇನು?