ಮನೆ ಅಪರಾಧ ಮೈಸೂರಿನ ಪ್ರಾಥಮಿಕ ಕೇಂದ್ರದಲ್ಲಿ ಹಣ ವಸೂಲಿ ಆರೋಪ: ವೈದ್ಯಾಧಿಕಾರಿ ಅಮಾನತು

ಮೈಸೂರಿನ ಪ್ರಾಥಮಿಕ ಕೇಂದ್ರದಲ್ಲಿ ಹಣ ವಸೂಲಿ ಆರೋಪ: ವೈದ್ಯಾಧಿಕಾರಿ ಅಮಾನತು

0

ಮೈಸೂರು(Mysuru): ಪ್ರಾಥಮಿಕ ಕೇಂದ್ರದಲ್ಲಿ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ಹಾಗೂ ಔಷಧ ಕೊಡಬೇಕೆಂಬ ನಿಯಮ ಉಲ್ಲಂಘನೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ವೈದ್ಯಾಧಿಕಾರಿ ಡಾ ಬಿ ಜಿ ಕುಮಾರಸ್ವಾಮಿ ಎಂಬುವವರನ್ನು ಅಮಾನತು ಮಾಡಿಲಾಗಿದೆ.

ಮೈಸೂರಿನ ಉದ್ಬೂರು ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ ಬಿ ಜಿ ಕುಮಾರಸ್ವಾಮಿ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಾ.ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ವೈದ್ಯಾಧಿಕಾರಿ ಡಾ ಕುಮಾರಸ್ವಾಮಿ, ಚಿಕಿತ್ಸೆ ಪಡೆಯಲು ಬಂದ ಪ್ರತಿಯೊಬ್ಬರಿಂದ ಹಣ ವಸೂಲಿ ಮಾಡುತ್ತಿದ್ದರು. ಡ್ರಿಪ್ಸ್ ಹಾಕಲು 200, ಜ್ವರದ ಚಿಕಿತ್ಸೆಗೆ 100, ಇಂಜೆಕ್ಷನ್ ಹಾಕಲು 50 ರೂ. ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿತ್ತು. ರೋಗಿಗಳಿಂದ ಹಣ ಪಡೆಯುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಡಿಎಚ್ ಓ ಡಾ. ಕೆ. ಎಚ್ ಪ್ರಸಾದ್ ಅವರಿಂದ  ಆರೋಗ್ಯ ಇಲಾಖೆ ಆಯುಕ್ತರು ವರದಿ ತರಿಸಿಕೊಂಡಿದ್ದರು.

ಇದೀಗ ಕರ್ತವ್ಯ ಲೋಪ, ದುರ್ನಡತೆ ಆರೋಪದಡಿ ವೈದ್ಯಾಧಿಕಾರಿ ಡಾ.ಬಿ.ಜಿ ಕುಮಾರಸ್ವಾಮಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.