★ಚರ್ಮ ರೋಗಗಳು : ಇಸಬು,ಕಜ್ಜಿ ಮುಂತಾದ ಚರ್ಮರೋಗಗಳಿಂದ ಬಳಲುವರು ಬೇವಿನ ತೊಗಟೆ ಮತ್ತು ಅಮೃತಬಳ್ಳಿಯ ಕಷಾಯ ಸೇವನೆ ಮಾಡಬೇಕು.
★ಎದೆಯುರಿ,ಹುಳಿತೇಗು: ನಾಲ್ಕು ಚಮಚೆ ಅಮೃತಬಳ್ಳಿಯ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಊಟಕ್ಕೆ ಮುಂಚೆ ಸೇವಿಸುವುದರಿಂದ ಎದೆಯುರಿ, ಹುಳಿತೇಗು ದೂರವಾಗುತ್ತದೆ.
★ಕ್ಷಯರೋಗಿಗಳಲ್ಲಿ: ಕ್ಷಯಕ್ಕೆ ನೀಡುವ ಔಷಧಿಗಳೊಂದಿಗೆ ಅಮೃತಬಳ್ಳಿಯನ್ನು ಎರಡು ತಿಂಗಳ ಕಾಲ ನೀಡಿ ಅಧ್ಯಯನ ನಡೆಸಿದಾಗ ರೋಗಿಗಳಲ್ಲಿ ತೂಕದಲ್ಲಿ ಹೆಚ್ಚಳ ಕಫದ ಉತ್ಪತ್ತಿ ಕಡಿಮೆಯಾಗಿ ಹಸಿವೆ ಹೆಚ್ಚಾದುದು ದೃಢಪಟ್ಟಿದೆ. ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಅಧಿಕಗೊಂಡಿತು
★ಅಸ್ತಮಾ ರೋಗಿಗಳಲ್ಲಿ: ಅಮೃತಬಳ್ಳಿಯ ಕಾಂಡದ ರಸ ಇಲ್ಲವೇ ಅಮೃತದ ಸತ್ವವನ್ನು ಅಡುಸೋಗೆ ರಸದೊಂದಿಗೆ ನೀಡಿದಾಗ ಉಸಿರಾಟ ಸಲೀಸಾಗುತ್ತದೆ. ಇದು ಶ್ವಾಶಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
★ ಬಾಣಂತಿಯರಿಗೆ: ಅಮೃತಬಳ್ಳಿಯ ಕಾಂಡವನ್ನು ಜಜ್ಜಿ ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಬೆಳಿಗೆ ಹಾಗೂ ಸಾಯಂಕಾಲ ಅರ್ಧ ಲೋಟ ಸೇವನೆ ಮಾಡುವುದರಿಂದ ಎದೆಯ ಹಾಲು ಹೆಚ್ಚುತ್ತದಲ್ಲದೆ ಅಮೃತಬಳ್ಳಿಯ ಶುದ್ದಿಕಿರಕವಿಗಿಯೂ ಕಾರ್ಯ ನಿರ್ವಹಿಸುತ್ತದೆ.
★ಸಂಶೋಧನೆ: ಮುಂಬಯಿಯ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ ಇಲಿಗಳ ಮೇಲೆ ಅಮೃತಬಳ್ಳಿಯನ್ನು ಪ್ರಯೋಗಿಸಿ ನೋಡಲಾಗಿ ಅವುಗಳಲ್ಲಿ ಕ್ಯಾನ್ಸರ್ ನಿಯಂತ್ರಣದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿರುವುದು ತಿಳಿದು ಬಂದಿದೆ.
★ಅಮೃತಸತ್ವ : ಅಮೃತಬಳ್ಳಿಯ ಖಂಡದ ರಸದಷ್ಟೇ ಮಹತ್ವ ಅಮೃತಕ್ಕೆ ಅಮೃತಸತ್ವ ಮಾರುಕಟ್ಟೆಯಲ್ಲಿ ದೊರೆಯುತ್ತಾದದಮ್ರೂ ಮನೆಯಲ್ಲಿಯೂ ತಯಾರಿಸಿ ಟ್ಟುಕೊಳ್ಳಬಹುದು.ಅಮೃತಡ್ಡಬಳ್ಳಿ ರಸದ ಬದಲಿಗೆ ಎರಡು ಚಮಚ ಸಕ್ರೆ ಒಂದು ಚಿಟಿಕೆ ಅಮೃತಸತ್ವ ಸಮನಾಗುತ್ತದೆ ತತ್ವವನ್ನೇ ಘಉಪಯೋಗಿಸಬಹುದು.
★ಅಮೃತ ಸತ್ವಕ್ಕೆ ತೆಗೆಯುವ ಢ್ಯವಿಧಾನ: ಒಂದು ಹಿಡಿ ಅಮೃತಬಳ್ಳಿಯ ಕಾಂಡವನ್ನು ಸ್ವಚ್ಛವಾಗಿ ತೊಳೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಂಡು ಚಟ್ನಿಯಂತೆ ಜಜ್ಜೆ ಒಂದು ಅಂಗಳವಾದ ಪಾತ್ರೆಯಲ್ಲಿ ಪತ್ರಿಕೆಯಲ್ಲಿ ಹಾಕಿಟ್ಟು ನೀರು ತುಂಬಿಡಬೇಕು.ಪಾತ್ರೆಯನ್ನು ಮುಚ್ಚಿಡಬೇಕು ಮರುದಿನ ಮೇಲಿನ ಅರ್ಧ ಭಾಗ ನೀರನ್ನು ಹಾಕಿಡಬೇಕು ಚೆಲ್ಲಿ ಮತ್ತೆ ಬೇರೆ ನೀರನ್ನು ಹಾಕಿಡಬೇಕು ಮೂರು ನಾಲ್ಕು ದಿನ ಹೀಗೆ ಮಾಡಿದ ನಂತರ ಮೇಲಿನ ನೀರಿನ್ನೆಲ ನಿಧಾನವಾಗಿ ಚೆಲ್ಲಬೇಕು. ಪಾತ್ರೆಯ ತಳದಲ್ಲಿ ಬೆಳ್ಳನೆಯ ನುಣ್ಣನೆಯ ಅಮೃತ ಸತ್ವ ನಿಮ್ಮನ್ನು ಸ್ವಾಗತಿಸುತ್ತವೆ. ಅದನ್ನು ನಂತರ ನೆರಳಲ್ಲಿ ಒಣಗಿದ ಮೇಲೆ ಡಬ್ಬಿಯಲ್ಲಿ ತುಂಬಿಟ್ಟುಕೊಳ್ಳಬೇಕು. ಅಮೃತ ಸತ್ವ ಮನೆಯಲ್ಲಿದ್ದರೆ ಮನೆಯಲ್ಲೇ ವೈದ್ಯರಿದ್ದಂತೆ ಯಾವಾಗ ಬೇಕಾದರೂ ಔಷದಿ ಸಿದ್ಧ. ಅಮೃತ ಬಳ್ಳಿ ಲಭ್ಯವಿದ್ದಷ್ಟು ಸತ್ವ ತಯಾರಿಸಿ ಟ್ಟುಕೊಳ್ಳಬಹುದು. ಇದನ್ನು ಬಹಳ ದಿನಗಳ ಕಾಲ ಸಂಗ್ರಹಿಸಿಡಬಹುದು. ಅಮೃತಬಳ್ಳಿಯಿಂದ ತಯಾರಿಸಿದ ಅಮೃತಾರಿಷ್ಟ, ಅಮೃತಾದಿ ಕಷಾಯ, ಅಮೃತಾದಿ ಗುಗ್ಗುಳು, ಬಲಾಗುಡೂಚ್ಯಾದಿ ತೈಲಂ,ಪಂಚತಿಕ್ತ ಗೂಗ್ಗಳು ಪೃತಂ. ಚಂದ್ರಪ್ರಬಾ ವಟಿ ಮುಂತಾದ ಔಷಧಿಗಳು ಲಭ್ಯ.
ಅಡಿಗೆ :
ತುಂಬುಲಿ: ಅಮೃತ ಬಳ್ಳಿಯ ಎಲೆ ಮತ್ತು ಕಾಂಡವನ್ನು ಕತ್ತರಿಸಿದ ಸಣ್ಣಗೆ ತುಂಡು ಮಾಡಿಕೊಂಡು, ಸ್ವಲ್ಪ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಹುರಿದುಕೊಳ್ಳಬೇಕು.ನಂತರ ಅದಕ್ಕೆ ಸ್ವಲ್ಪ ತೆಂಗಿನ ತುರಿ ಸೇರಿಸಿ ನುಣ್ಣಗೆ ಅರೆದುಕೊಳ್ಳಬೇಕು. ನಂತರ ಗಟ್ಟಿ ಮೊಸರು ಇಲ್ಲವೇ ಮಜ್ಜಿಗೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಉಪಯೋಗಿಸಬೇಕು. ಬೇಕೆನಿಸಿದರೆ ಒಗ್ಗರಣೆ ಕೊಡಬಹುದು.