ಮನೆ ದೇವರ ನಾಮ ಮನ್ನಾರು ಕೃಷ್ಣಗೆ ಮಂಗಳ

ಮನ್ನಾರು ಕೃಷ್ಣಗೆ ಮಂಗಳ

0

ಮನ್ನಾರು ಕೃಷ್ಣಗೆ ಮಂಗಳ

ಜಗವ ಮನ್ನಿಸಿದೊಡೆಯಗೆ ಮಂಗಳ

ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ

ಕಮ್ಮಗೋಲನಯ್ಯಗೆ ಮಂಗಳ

ಧರ್ಮರಕ್ಷಕನಿಗೆ ದಾನವಶಿಕ್ಷಗೆ

ನಮ್ಮ ರಕ್ಷಕನಿಗೆ ಮಂಗಳ

ತುರುಗಳ ಕಾಯ್ದಗೆ ಕರುಣಾಕರನಿಗೆ

ಗಿರಿಯನೆತ್ತಿದವಗೆ ಮಂಗಳ

ವರದ ತಿಮ್ಮಪ್ಪಗೆ ವಾರಿಜನಾಭಗೆ

ಹರಿ ಸರ್ವೋತ್ತಮನಿಗೆ ಮಂಗಳ

ದೇವಕಿದೇವಿಯ ತನಯಗೆ ಮಂಗಳ

ದೇವ ತಿಮ್ಮಪ್ಪಗೆ ಮಂಗಳ

ಮಾವನ ಕೊಂದು ಮಲ್ಲರ ಮಡುಹಿದ

ಪುರಂದರವಿಠಲಗೆ ಮಂಗಳ

ಹಿಂದಿನ ಲೇಖನಸಂಬಂಧಿಕ ವ್ಯಕ್ತಿಯ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ
ಮುಂದಿನ ಲೇಖನಹೊಟ್ಟೆಯ ಬೊಜ್ಜು ಕರಗಿಸಲು ಬೆಸ್ಟ್ ಈ 5 ಆಸನಗಳು