ಮನೆ ಕ್ರೀಡೆ ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಆಂಡಿ ಮರ್ರೆ ಹೊರಕ್ಕೆ

ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಆಂಡಿ ಮರ್ರೆ ಹೊರಕ್ಕೆ

0

ಮೆಲ್ಬೋರ್ನ್ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ವಿಶ್ವದ ಮಾಜಿ ನಂ.1 ಆಂಡಿ ಮರ್ರೆ ಹೊರಬಿದ್ದಿದ್ದಾರೆ. 

ಜ.20 ರಂದು ನಡೆದ ಪಂದ್ಯದಲ್ಲಿ ಜಪಾನ್ ನ ಟಾರೋ ಡೇನಿಯಲ್ ವಿರುದ್ಧ ಆಂಡಿ ಮರ್ರೆ ಎರಡನೇ ಸುತ್ತಿನಲ್ಲಿ ನೇರ ಸೆಟ್ ಗಳಿಂದ ಸೋಲು ಕಂಡಿದ್ದಾರೆ. 120 ನೇ ಶ್ರೇಯಾಂಕ ಹೊಂದಿರುವ ಡೇನಿಯಲ್ ಮೂರು ಬಾರಿ ಗ್ರಾಂಡ್ ಸ್ಲಾಮ್ ವಿಜೇತ 6-4-6-4-7-5 ಅಂತರದಿಂದ ಸೋಲಿಸಿದ್ದು, ಮೊದಲ ಬಾರಿಗೆ ಗ್ರಾಂಡ್ ಸ್ಲಾಮ್ ನ ಮೂರನೇ ಹಂತಕ್ಕೆ ತಲುಪಿದಿದ್ದಾರೆ.

ಜಪಾನ್ ನ ವಿಜೇತ ಆಟಗಾರ ಈಗ ಇಟಾಲಿಯ 11 ನೇ ಶ್ರೇಯಾಂಕಿತ ಜಾನ್ನಿಕ್ ಸಿನ್ನರ್ ಅಥವಾ ಅಮೆರಿಕಾದ ಸ್ಟೀವ್ ಜಾನ್ಸನ್ ನ ಎದುರಿಸಲಿದ್ದಾರೆ. ಮೂರನೇ ಸೆಟ್ ನಲ್ಲಿ ಸ್ವಲ್ಪ ಭಯವಾಗಿತ್ತು. ಆದರೆ ಹೆಚ್ಚು ಒತ್ತಡ ತೆಗೆದುಕೊಳ್ಳದಿರಲು ನಿರ್ಧರಿಸಿದೆ ಎಂದು ವಿಜೇತ ಕ್ರೀಡಾಪಟು ಡೇನಿಯಲ್ ಹೇಳಿದ್ದಾರೆ.

ಹಿಂದಿನ ಲೇಖನವೃತ್ತಿ ಬದುಕಿಗೆ ಸಾನಿಯಾ ಮಿರ್ಜಾ ವಿದಾಯ ಘೋಷಣೆ
ಮುಂದಿನ ಲೇಖನತಂದೆಯ ವಿಲ್ ಇಲ್ಲದ ಸ್ವಯಾರ್ಜಿತ ಆಸ್ತಿ ಹಕ್ಕು ಮಗಳಿಗೆ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು