ಮನೆ ಆರೋಗ್ಯ ಅಂಜೈನಾ ಪೆಕ್ಟೋರಿಸ್

ಅಂಜೈನಾ ಪೆಕ್ಟೋರಿಸ್

0

ಕರೋನರಿಗೆ ಧಮನಿಯಿಂದ ರಕ್ತ ಪೂರೈಕೆಯಿಲ್ಲದೆ ಉಂಟಾಗುವ ಎದೆನೋವನ್ನು ಅಂಜೈನಾ ಪೆಕ್ಟೊರಿಸ್ ಎನ್ನುತ್ತಾರೆ. ಸರಳವಾಗಿ ’ಅಂಜೈನಾ ’ಎನ್ನುತ್ತಾರೆ.

Join Our Whatsapp Group

ಅಂಜೈನಾ ಗನ್ನುವ ಪದದ ಅರ್ಥ ’ನೋವು’ಎಂದು ಪೆಕ್ಟೋರಿಸ್ ಎಂದರೇ ಎದೆ ಎಂದರ್ಥ. ನಿಖರವಾಗಿ ಹೇಳಬೇಕೆಂದರೆ –

ಹೃದಯದ ಮಾಂಸಖಂಡಗಳಿಗೆ ಹರಿಯುವ ರಕ್ತದ ಕೊರತೆಯಿಂದಾ ಗುವ ಹಿಂಸೆಯಿಂದಾಗಿ ಬರುವ ಎದೆ ನೋವು-ಅಂಜೈನಾ ಇಂತಹ ಪರಿಸ್ಥಿತಿಯಲ್ಲಿ ಅವುಗಳಿಗೆ ಬೇಕಾದ ಆಮ್ಲಜನಕದ, ಇತರ ಪೋಷಕದ ಪದಾರ್ಥಗಳ ಕೊರತೆ ಉಂಟಾಗುತ್ತದೆ.

ಅಂಜೈನಾ  ಆದಾಗ ಬರುವ ಎದೆ ನೋವು ಆಗಾಗ ಬರುತ್ತಿದ್ದು, ಶ್ರಮದ ಕೆಲಸದ ನಡುವೆ ಬಂದಲ್ಲಿ .ವಿಶ್ರಾಂತಿ ಪಡೆದ ಕೂಡಲೇ ಕಡಿಮೆಯಾಗುತ್ತದೆ.

ಹೃದಯ ಮಾಂಸಖಡಕ್ಕೆ ಬರುವ ಕರೋನರಿ ಧಮನಿಯಲ್ಲಿ ಎಲ್ಲಾದರೂ ಕೊಬ್ಬು ಸೇರಿಕೊಂಡಾಗ ಇದನ್ನು Atheroma ಎನ್ನುತ್ತಾರೆ. ಆ ಧಮನಿಯ ಒಳಗೊಂಡ ಕೊಬ್ಬಿನಿಂದ ಅಮೃತವಾಗಿ ರಕ್ತ ಪರಿಚಲನೆಗೆ ಅಡಚಣೆ ಉಂಟಾಗಿ, ಹೃದಯಕ್ಕೆ ರಕ್ತದ ಕೊರತೆ ಉಂಟಾಗುತ್ತದೆ. ಆಗ ಮಾಂಸಖಂಡಗಳಿಗೆ ಬೇಕಾದ ಪ್ರಾಣವಾಯುವಿನ ವಿತರಣೆ ಇರುವುದಿಲ್ಲ. ಆಗ ಹೃದಯ ಕಷ್ಟಪಟ್ಟು ಒಂದು ನೋವಿನ ಕಿಕ್ ಕೊಡುತ್ತದೆ. ಅದೇ ‘ಅಂಜೈನಾ’

ಚಿಹ್ನೆಗಳು

★ ಎದೆಯ ಮೇಲೆ ಯಾರೋ ಕೂತಂತೆ ಭಾರವಾಗಿರುತ್ತದೆ. ಇದನ್ನು ಸ್ವಲ್ಪ ಹೆಚ್ಚು ಕಡಿಮೆ ಇರಬಹುದು.

 ಸಹಿಸಲಸಾಧ್ಯವಾದ ಈ ನೋವು ಎದೆಯ ಮಧ್ಯಭಾಗದಿಂದ Breast Bonesನ ಮೇಲ್ಭಾಗದಿಂದ ಪ್ರಾರಂಭವಾಗಿ, ಗಂಟಲಿನ ಮೇಲೆ ಮೇಲಿನ ದವಡೆಯ ಮೇಲೆ ಭುಜಗಳ ತನಕ, (ಸಾಮಾನ್ಯವಾಗಿ ಎಡ ಭುಜ), ಮಣಿಕಟ್ಟು ಬೆರಳಿನ ತನಕ ಹರಡಬಹುದು. 

ಈ ನೋವಿನ ಬಗ್ಗೆ ಕೆಲವರು ಉಸಿರು ನಿಂತಹೋಗಿ ಅವ್ಯವಸ್ಥೆ ಯಾದಂತೆಯೂ ಎಂದು ವಿವರಿಸುತ್ತಾರೆ ಕೆಲವರು ಎದೆ ಬಿಗಿಕೊಂಡು ಭಾರವಾದಂತಿತ್ತು ಎನ್ನುತ್ತಾರೆ.

ಹೊಟ್ಟೆಯ ಮೇಲಿನ ಭಾಗ, ಎದೆಯ ಹತ್ತಿರ, ಉಬ್ಬಿದ ಅನುಭವವಾಗುತ್ತದೆ.

 ವಿಪರೀತ ದಣಿವು ಬಿರುವುದು

ಎಷ್ಟು ಹೊತ್ತು ಇರುತ್ತದೆ?

★ ಸಾಮಾನ್ಯವಾಗಿ ಕೆಲವು ನಿಮಿಷಗಳಿರಬಹುದು. ಒಮ್ಮೊಮ್ಮೆ ಕೆಲವು ಸೆಕೆಂಡುಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಯಾವಾಗ ಹೇಗ್ ಆಗುತ್ತದೆ?

★ ಮನಸ್ಸು ಉದ್ರಿಕ್ತಂಡಾಗ,ಕೋಪಗೊಂಡಾಗ ಕಿರಿಕಿದಾಗ.

 ★ಆಘಾತಕರ ಸುದ್ದಿಯನ್ನು ಕೇಳಿದಾಗ, ಎಮೋಷನಲ್ ಶಾಕ್ ಉಂಟಾದಾಗ.

 ★ದೈಹಿಕ ಶ್ರಮ ಉಂಟಾದಾಗ – ಮುಖ್ಯವಾಗಿ ಬಾರ ಎತ್ತುವುದು – ತಳ್ಳುವುದು ಇಂತಹ ಸಂದರ್ಭಗಳಲ್ಲಿ ಆ ಕೆಲಸವನ್ನು ನಿಲ್ಲಿಸಿದ ಕೂಡಲೇ ಕಡಿಮೆಯಾಗುತ್ತದೆ.

★ ಮೆಟ್ಟಿಲೇರುತ್ತಿರುವಾಗ, ಇಲ್ಲಿ ಎತ್ತರದ ಪ್ರದೇಶಕ್ಕೆ ಹತ್ತುತ್ತಿರುವಾಗ,ನಯುವುದನ್ನು ನಿಲ್ಲಿಸಿದ ತಕ್ಷಣ ನೋವು ಮಾಯವಾಗುತ್ತದೆ.

★ಹೊಟ್ಟೆ ಬಿರಿಯುವಂತೆ ತಿಂದಾಗ.

 ★ಅತಿ ಚಳಿಯಾದಾಗ.

★ ರಾತ್ರಿ ನಿದ್ದೆಯಿಂದ ಹಠಾತ್ತಾಗಿ ಎದ್ದಾಗ.   

ಹಾರ್ಟ್ ಅಟ್ಯಾಕ್ ಅಲ್ಲ – ಅಲ್ಲವೇ ?

ಬಹಳ ಜನ ಮೊದಲ ಬಾರಿ ಅಂಜೈನಾ ಆದಾಗ ಇದು ಹಾರ್ಟ್ ಅಟ್ಯಾಕ್ ನ ನೋವು ಎಂದು ಗಾಬರಿಕೊಳ್ಳುತ್ತಾರೆ. ಆದರೆ ಹಾರ್ಟ್ ಅಟ್ಯಾಕ್ ಅಂಜೈನಾಗೂ ಕೆಲವು ಮುಖ್ಯ ವ್ಯತ್ಯಾಸಗಳಿವೆ ಅವುಗಳೆಂದರೆ :

★ ಹೃದಯದ ಮಾಂಸಖಂಡಗಳು ಗಾಯಗೊಂಡಾಗ, ಅಥವಾ ಹಾನಿ ಆದಾಗ ಹಾರ್ಟ್ ಅಟ್ಯಾಕ್ ಉಂಟಾಗುತ್ತದೆ.

★ಹೃದಯದ ಸ್ನಾಯುಗಳಿಗೆ ರಕ್ತವನ್ನು ಹೊತ್ತೊಯ್ಯುವ ಕರೋನರಿ ಧಮನಿಗಳು ಸಂಕುಚಿತಗೊಂಡು ರಕ್ತ ಪರಿಚಲನೆಗೆ ಧಕ್ಕೆ ಉಂಟಾದಾಗ ಆಗುವ ನೋವೇ ‘ಅಂಜೈನಾ’ 

★ ವಿಶ್ರಾಂತಿ ಪಡೆದರೆ ಅಥವಾ Nitroglycerin ಮಾತ್ರೆಗಳನ್ನು.ಉದಾಹರಣೆಗೆ Sobitrate, Angisedನಂಹವು ಸೇವಿಸಿಯೋ, ಅಂಜೈನಾವನ್ನು ನಿವಾರಿಸಿಕೊಳ್ಳಬಹುದು.ಆದರೆ ಹಾರ್ಟ್ ಅಟ್ಯಾಕ್ ಆದಾಗ ನೋವು ಹೀಗೆ ಸುಲಭದಲ್ಲಿ ಹೋಗುವುದಿಲ್ಲ.

ಎರಡು ತರಹದ ಅಂಜೈನಾ!

★ ಅಂಜೈನಾವನ್ನು ಎರಡು ವಿಧಗಳಾಗಿ ವಿಂಗಡಿಸುತ್ತಾರೆ.

★ ಸೈಬಲ್ – ಮತ್ತೊಂದು ಅನ್ ಸ್ಟೇಬಲ್ ಬಲ್ – ಎಂದು.

★ ಆನ್ ಸ್ಟೇಬಲ್ ಏನೂ ಕಾರಣವಿಲ್ಲದೆ ನೋವು ಉಂಟಾಗುತ್ತದೆ. ಇದು ಹಾರ್ಟ್ ಆಟ್ಯಾಕ್ ನ ಮುನ್ಸೂಚನೆ.

  ನೆಲೆ ನಿಲ್ಲುವ ಸ್ಟೇಬಲ್ ಅಂಜೈನಾ – ಯಾವುದಾದರೂ ಕೆಲಸ ಮಾಡುತ್ತಿರುವಾಗ, ಇಲ್ಲವೇ ಭಾವೋದ್ವೇಗಕ್ಕೆ ಒಳಗಾದಾಗ ನೋವುಂಟಾಗುತ್ತದೆ. ಇದರಿಂದ ಹೊರಬಂದ ಕೂಡಲೇ ರೆಸ್ಟ್ ಪಡೆದ ತಕ್ಷಣ ನೋವಿರುವುದಿಲ್ಲ.ಇದಕ್ಕೂ ಚಿಕಿತ್ಸೆಯ ಅವಶ್ಯಕತೆಯಿದೆ. ಆದರೆ ಅಷ್ಟೇನೂ ಅವಶ್ಯಕವಿಲ್ಲ.

  ವೈದ್ಯರನ್ನುಯಾವಾಗ ನೋಡಬೇಕು?

 ಅಂಜೈನಾ ನೋವು ಬಹಳ ಹೊತ್ತು ಇರುವುದಲ್ಲದೇ( 10 -15 ನಿಮಿಷ ಗಳಿಗಿಂತ ಹೆಚ್ಚು) ಅದು ಅತಿ ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಕರೆಯಬೇಕು /ನೋಡಬೇಕು.ಅದು Myocardial infarction ಹಾರ್ಟ್ ಅಟ್ಯಾಕ್ ನಿಂದ ಉಂಟಾಗಬಹುದು.

★ಅಂಜೈನಾ ಮೊದಲ ಬಾರಿ ಉಂಟಾದರೂ ಡಾಕ್ಟರನ್ನು ಖಂಡಿತ ಭೇಟಿಯಾಗಿ.

★ ವಿಶ್ರಾಂತಿಯಲ್ಲಿದ್ದಾಗ ನೋವು ಉಂಟಾದರೂ ಮರೆಯದೆ ವೈದ್ಯರನ್ನು ಕಾಣೆ.

★ ನಿದ್ರಿಸುತ್ತಿರುವಾಗ ನೋವಿನಿಂದ ಎಚ್ಚರವಾದರೂ ಅದು ಹಾರ್ಟ್ ಅಟ್ಯಾಕ್ ಎಂದು ತಿಳಿದು ಡಾಕ್ಟರನ್ನು ಸಂಪರ್ಕಿಸಿ.

 ಸಿಗರೇಟ್ ಹಾರ್ಟ್ ಅಟ್ಯಾಕ್!

ಬೀಡಿ ಸಿಗರೇಟ್ ಸೇದುವವರ ಶ್ವಾಸಕೋಶಗಳು,ಹೃದಯದ ಬಲಹೀನವಾಗುತ್ತದೆ ಎಂದು ಎಲ್ಲರಿಗೂ ತಿಳಿದ ವಿಷಯ.

★ ದೇಹಶ್ರಮದ ನಂತರ, ಮಾನಸಿಕ ಒತ್ತಡದಿಂದಾದಾಗ ಧೂಮಪಾನದಿಂದ ಹೃದಯ ಸ್ತಂಭನದ ಸಾಧ್ಯತೆ ಹೆಚ್ಚು ವಿಶೇಷವಾಗಿ ಅಂತರ ಪರಿಸ್ಥಿತಿಯಲ್ಲಿ ಹೋಗೆ ಸೇವಿಸಿದಲ್ಲಿ! 

★ ವ್ಯಾಯಾಮ ನಿರಂತರಾಗಿದ್ದಾಗ, ಮಾನಸಿಕವಾಗಿ ಗೊಂದಲದಲ್ಲಿ ಖಿನ್ನತೆಯಲ್ಲಿ ಇದ್ದಾಗ ಹೃದಯಕ್ಕೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಧೂಮಪಾನ ಮಾಡುವುದರಿಂದ ರಕ್ತ ಒಯ್ಯುವ ರಕ್ತನಾಳಗಳು ಬಲಹೀನವಾಗಿ ರಕ್ತ ಒಯ್ಯುವಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ ರಕ್ತದ ಕೊರತೆ ಉಂಟಾಗಿ ಸ್ತಂಭನ ಉಂಟಾಗುತ್ತದೆ.

★ಮಾನಸಿಕ ಒತ್ತಡವಿದ್ದಾಗ ಧೂಮಪಾನಿಗಳಲ್ಲದವರಲ್ಲಿ ರಕ್ತನಾಳಗಳು ಸಾಮಾನ್ಯಕ್ಕಿಂತ ನಾಲ್ಕರಷ್ಟು ಹೆಚ್ಚು ರಕ್ತ ಸರವರಾಜು ಮಾಡಬಲ್ಲವು ಆದರೆ ಧೂಮಪಾನಿಗಳ ವಿಷಯದಲ್ಲಿ ಹಾಗಾಗದು. ರಕ್ತನಾಳಗಳು ಧೂಮಪಾನದಿಂದ ಬಲಹೀನವಾಗಿ ಹೃದಯದ ರಕ್ತಕ್ಕೋಸ್ಕರ ಪರಿತಪಿಸುತ್ತದೆ. ಹಾಗೆ ತಕ್ಷಣ ಹೃದಯದ ಮಿಡಿತ ನಿಲ್ಲಬಹುದು.ಆದ್ದರಿಂದ ಧೂಮಪಾನ ಒಳ್ಳೆಯದಲ್ಲ.

ರೋಗ ನಿರ್ಧಾರ  ( Diagnosis )

★ ಸಾಮಾನ್ಯ ದೇಹ ತಪಾಸಣೆ(Physical Examination)ಯಿಂದ ಅಂಜೈನವನ್ನು ನಿರ್ಧರಿಸಲಾಗುವುದು. ರೋಗಿ ವಿಶ್ರಾಂತಿ ತೆಗೆದುಕೊಳ್ಳುವಾಗ ECG ಮಾಡುವುದು (ಹೃದಯದ ವಿದ್ಯುತ್ ತರಂಗಗಳನ್ನು ರೆಕಾರ್ಡ್ ಮಾಡುವುದು), ಹಾಗೆಯೇ ರೋಗಿ ತೊಂದರೆ ಪಡುತ್ತಿದ್ದಾಗ ECG ಟೆಸ್ಟ್ (Stress test)ಮಾಡುವುದರಿಂದ, ವೈದ್ಯರ ಹೃದಯದ ಆರೋಗ್ಯದ ಬಗ್ಗೆ ನಿರ್ಧರಿಸಬಲ್ಲದು.

★ ರಕ್ತ ಹೀನತೆ (ಅನೀಮಿಯಾ ),ರಕ್ತದಲ್ಲಿ ಕೊಬ್ಬಿನ ಪ್ರಮಾಣ, (Hyper Lipidaemia)ಮುಂತಾದ ಅಂಶಗಳನ್ನು ತಿಳಿದುಕೊಳ್ಳಲು ವೈದ್ಯರು ರಕ್ತ ಪರೀಕ್ಷೆ ಮಾಡುವರು.