ಮನೆ ರಾಜ್ಯ ಬಂಡೀಪುರಕ್ಕೆ ಮತ್ತೊಂದು ಗರಿಮೆ: ದೇಶದಲ್ಲಿ ಉತ್ತಮ ಸಂರಕ್ಷಿತ ಅರಣ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ

ಬಂಡೀಪುರಕ್ಕೆ ಮತ್ತೊಂದು ಗರಿಮೆ: ದೇಶದಲ್ಲಿ ಉತ್ತಮ ಸಂರಕ್ಷಿತ ಅರಣ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ

0

ಬೆಂಗಳೂರು: ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಬೆನ್ನಲ್ಲೇ ದೇಶದಲ್ಲಿ ಉತ್ತಮ ಸಂರಕ್ಷಿತ ಅರಣ್ಯಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದೆ.

Join Our Whatsapp Group

ಇನ್ನೊಂದೆಡೆ ರಾಜ್ಯದ 5 ಹುಲಿ ರಕ್ಷಿತಾರಣ್ಯಗಳು ಟಾಪ್ 10 ಪಟ್ಟಿಯಲ್ಲಿವೆ ಎನ್ನುವುದು ಮತ್ತೊಂದು ಸಂತಸದ ಸಂಗತಿ.

ದೇಶದಲ್ಲಿ ಮೊದಲಿಗೆ ಘೋಷಣೆಯಾದ 9 ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ನ್ಯಾಷನಲ್ ಪಾರ್ಕ್ ಸೇರಿಕೊಂಡಿತ್ತು. ಈಗ ದೇಶದಲ್ಲೇ ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇಡೀ ದೇಶದಲ್ಲಿ 53 ಹುಲಿ ರಕ್ಷಿತಾರಣ್ಯ ಪ್ರದೇಶಗಳಿದ್ದು, ನಮ್ಮ ರಾಜ್ಯದ ಬಂಡೀಪುರಕ್ಕೆ ಎರಡನೇ ಸ್ಥಾನ ಲಭಿಸಿರುವುದು ಹೆಮ್ಮೆಯತ ಸಂಗತಿ

ಪ್ರತಿ 4 ವರ್ಷಕ್ಕೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೇರಿದಂತೆ ಇತರೆ ಮೂರು ಸಂಸ್ಥೆಗಳು ಸೇರಿ, ದೇಶದಲ್ಲಿರುವ ಎಲ್ಲಾ ಹುಲಿ ಸಂರಕ್ಷಿತಾರಣ್ಯಗಳನ್ನ ಮ್ಯಾನೇಜ್ಮೆಂಟ್ ಎಫೆಕ್ಟೀವ್ ಇವಾಲ್ಯುಯೇಷನ್ ನಡೆಸಲಾಗುತ್ತೆ. ಇದೀಗ ಎಲ್ಲಾ ಹುಲಿ ಸಂರಕ್ಷಿತಾರಣ್ಯದ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಬಂಡೀಪುರ ಎರಡನೇ ಸ್ಥಾನ ಪಡೆದಿದ್ರೆ, ನಾಗರಹೊಳೆಗೆ 4ನೇ ಸ್ಥಾನ, ಬಿಳಿಗಿರಿರಂಗನ ಬೆಟ್ಟಕ್ಕೆ 6ನೇ ಸ್ಥಾನ , ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ 9ನೇ ಸ್ಥಾನ ಹಾಗೂ ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ 10ನೇ ಸ್ಥಾನ ಲಭಿಸಿದೆ.

ಇನ್ನು ಈ ಹುಲಿ ಸಂರಕ್ಷಿತಾರಣ್ಯದ ಮೌಲ್ಯಮಾಪನ ನಡೆಸಲು ನಿವೃತ್ತ ಐಎಫ್ಎಸ್ ಅಧಿಕಾರಿಗಳು, ಸೈಂಟಿಸ್ಟ್ ಗಳನ್ನು ಒಳಗೊಂಡ ತಂಡ ರಚಿಸಲಾಗಿರುತ್ತೆ. ಈ ತಂಡ 64 ಅಂಶಗಳನ್ನು ಇಟ್ಟುಕೊಂಡು ಮೌಲ್ಯಮಾಪನ ನಡೆಸುತ್ತಾರೆ. ಅರಣ್ಯವನ್ನು ಹೇಗೆ ಸಂರಕ್ಷಣೆ ಮಾಡುತ್ತಿದ್ದಾರೆ? ಪ್ರವಾಸಿಗರಿಗೆ ಎಲ್ಲಾ ಸೌಲಭ್ಯ ಸಿಕ್ಕಿದೆಯಾ? ಆಡಳಿತಾತ್ಮಕ ಕೆಲಸ ಹೇಗಿದೆ? ಟೂರಿಸಂಗೆ ಅನುಕೂಲವಿದೆಯಾ? ಹೀಗೆ ಹಲವು ಅಂಶಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತೆ.ಇದರಲ್ಲಿ ಬಂಡೀಪುರಕ್ಕೆ 93.18 ಅಂಕ ಬಂದಿದೆ. ಮಧ್ಯಪ್ರದೇಶದ ಸಾತ್ಪುರ ಅರಣ್ಯಕ್ಕೂ ಇಷ್ಟೇ ಅಂಕ ಬಂದಿದ್ದು ಎರಡು ಅರಣ್ಯ ಪ್ರದೇಶಗಳು ಎರಡನೇ ಸ್ಥಾನವನ್ನು ಹಂಚಿಕೊಂಡಿವೆ.

ಹಿಂದಿನ ಲೇಖನಭಾರತೀಯ ಮಿಲಿಟರಿ’ಯ 138ನೇ ಬ್ಯಾಚ್ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ ಎಂಟ್ರಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಚುನಾವಣೆಯಲ್ಲಿ ಕ್ರಿಮಿನಲ್‌ ಗಳ ಸ್ಪರ್ಧೆಗೆ ನಿಷೇಧ: 4 ವಾರದಲ್ಲಿ ಉತ್ತರಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌