ಮನೆ ಉದ್ಯೋಗ ಭಾರತೀಯ ಮಿಲಿಟರಿ’ಯ 138ನೇ ಬ್ಯಾಚ್ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ ಎಂಟ್ರಿಗೆ ಅರ್ಜಿ ಆಹ್ವಾನ

ಭಾರತೀಯ ಮಿಲಿಟರಿ’ಯ 138ನೇ ಬ್ಯಾಚ್ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ ಎಂಟ್ರಿಗೆ ಅರ್ಜಿ ಆಹ್ವಾನ

0

ಇಂಡಿಯನ್ ಆರ್ಮಿಯು ಇದೀಗ ಅಗ್ನಿವೀರರ ನೇಮಕಾತಿ ಅರ್ಜಿ ಸ್ವೀಕಾರದ ಜತೆಗೆ ಮತ್ತೊಂದು ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅದೇ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ (ಟಿಜಿಸಿ). 2024 ರ ಜನವರಿ ತಿಂಗಳಲ್ಲಿ ಆರಂಭವಾಗುವ ಈ ಕೋರ್ಸ್ಗೆ ಸೇರಲು ಆಸಕ್ತಿ ಇರುವವರು ಏಪ್ರಿಲ್ 18 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Join Our Whatsapp Group

ನೇಮಕಾತಿ ಪ್ರಾಧಿಕಾರ : ಭಾರತೀಯ ರಕ್ಷಣಾ ಪಡೆ

ಹುದ್ದೆ ಹೆಸರು : ಟೆಕ್ನಿಕಲ್ ಗ್ರಾಜುಯೇಟ್ ಎಂಟ್ರಿ

ವಿದ್ಯಾರ್ಹತೆ : ಬಿಇ / ಬಿ.ಟೆಕ್ ಪಾಸ್.

ವಯಸ್ಸಿನ ಅರ್ಹತೆ : ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.

ತರಬೇತಿ ಅವಧಿ : 1 ವರ್ಷ.

ಪ್ರಮುಖ ದಿನಾಂಕಗಳು

ಆನ್ ಲೈನ್ ಮೂಲಕ ಅರ್ಜಿ ಸ್ವೀಕಾರ ಆರಂಭ ದಿನಾಂಕ : 18-04-2023

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-05-2023

ವೇತನ ಮಾಹಿತಿ

ಆರ್ಮಿ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ಗೆ ಸೇರುವವರಿಗೆ ಬೇಸಿಕ್ ಪೇ ರೂ.56,100 ರ ಜತೆಗೆ ಮಿಲಿಟರಿ ಸೇವೆ ರೂ.15,500 ಹಾಗೂ ಇತರೆ ಭತ್ಯೆಗಳು ಸಿಗಲಿವೆ.

ನೇಮಕಾತಿ ವಿಧಾನ : ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ ಜತೆಗೆ ಎಸ್ ಎಸ್ ಬಿ ಇಂದ ಸಂದರ್ಶನ ನಡೆಸಲಾಗುತ್ತದೆ. ಈ ಕೋರ್ಸ್ಗೆ ಸೇರಿದವರಿಗೆ ಒಂದು ವರ್ಷದ ತರಬೇತಿ ಪೂರ್ಣಗೊಂಡ ನಂತರ ಪರ್ಮನೆಂಟ್ ಕಮಿಷನ್ಗೆ ಸೇರಿಸಲಾಗುತ್ತದೆ.

ಇತರೆ ಹೆಚ್ಚಿನ ಮಾಹಿತಿಗಳನ್ನು ಏಪ್ರಿಲ್ 18 ರಂದು ಬಿಡುಗಡೆ ಮಾಡುವ ಡೀಟೇಲ್ಡ್ ನೋಟಿಫಿಕೇಶನ್ ಅನ್ನು ಓದಿ ತಿಳಿಯಬಹುದು. ಅಭ್ಯರ್ಥಿಗಳು ಆನ್ಲೈನ್ ರಿಜಿಸ್ಟ್ರೇಷನ್ ಅನ್ನು https://joinindianarmy.nic.in ವೆಬ್ಸೈಟ್ಗೆ ಭೇಟಿ ನೀಡಿ, ಸಲ್ಲಿಸಬೇಕಾಗುತ್ತದೆ.

ಆರ್ಮಿ 138ನೇ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ಗೆ ಎಷ್ಟು ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಲಾಗಿಲ್ಲ. ಈ ಮಾಹಿತಿಯು ಸಂಪೂರ್ಣ ಅಧಿಸೂಚನೆ ಬಿಡುಗಡೆ ನಂತರ ತಿಳಿಯಲಿದೆ. ಈ ಕೋರ್ಸ್ ಗೆ ಸೇರಲು ಆಸಕ್ತಿ ಇರುವವರು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಆರಂಭಿಸಿ.

ಹಿಂದಿನ ಲೇಖನಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ
ಮುಂದಿನ ಲೇಖನಬಂಡೀಪುರಕ್ಕೆ ಮತ್ತೊಂದು ಗರಿಮೆ: ದೇಶದಲ್ಲಿ ಉತ್ತಮ ಸಂರಕ್ಷಿತ ಅರಣ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ