ಮನೆ ಉದ್ಯೋಗ ಮೈಸೂರಿನ ವಾಕ್​ ಶ್ರವಣ ಸಂಸ್ಥೆಯಲ್ಲಿ ಪ್ರೊಫೆಸರುಗಳ ನೇಮಕಾತಿಗೆ ಅರ್ಜಿ ಆಹ್ವಾನ

ಮೈಸೂರಿನ ವಾಕ್​ ಶ್ರವಣ ಸಂಸ್ಥೆಯಲ್ಲಿ ಪ್ರೊಫೆಸರುಗಳ ನೇಮಕಾತಿಗೆ ಅರ್ಜಿ ಆಹ್ವಾನ

0

ಅರಮನೆ ನಗರಿ ಮೈಸೂರಿನಲ್ಲಿ ಅಖಿಲ ಭಾರತ ವಾಕ್​ ಶ್ರವಣ ಸಂಸ್ಥೆಯು (ಆಯಿಶ್-AIISH) 22 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ .

Join Our Whatsapp Group

ಮೈಸೂರಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ (AIISH) ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  

ಮೈಸೂರಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್‌ನಲ್ಲಿ (AIISH) ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಇಪ್ಪತ್ತೆರಡು ಹುದ್ದೆಗಳು ಲಭ್ಯವಿವೆ.

ಲಿಖಿತ ಪರೀಕ್ಷೆ/ ಬೋಧನೆ/ಕೌಶಲ್ಯ ಪರೀಕ್ಷೆ/ಸಂದರ್ಶನ ವಿಧಾನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ವಿವರವಾದ ಸೂಚನೆಗಳಿಗಾಗಿ, ಅಧಿಕೃತವಾಗಿ ಬಿಡುಗಡೆ ಮಾಡಿರುವ ಜಾಹೀರಾತಿನ ಮೂಲಕ ಪರಿಶೀಲಿಸಿಕೊಳ್ಳಿ.

ಅಖಿಲ ಭಾರತ ವಾಕ್​ ಶ್ರವಣ ಸಂಸ್ಥೆಯು (ಆಯಿಶ್) ಕರ್ನಾಟಕದ ಮೈಸೂರು ನಗರದಲ್ಲಿ ನೆಲೆಗೊಂಡಿರುವ ವಾಕ್ ಮತ್ತು ಶ್ರವಣ ದೋಷಗಳ ಅಖಿಲ ಭಾರತ ಮಟ್ಟದ ಪ್ರತಿಷ್ಠಿತ ಚಿಕಿತ್ಸಾ ಕೇಂದ್ರವಾಗಿದೆ. ಮಾತಿನ ತೊಂದರೆ, ಕಿವುಡತನ ಇತ್ಯಾದಿ ನ್ಯೂನತೆಗಳನ್ನು ಸರಿಪಡಿಸುವುದು ಹಾಗೂ ಆ ಬಗ್ಗೆ ಶಿಕ್ಷಣ ನೀಡುವುದು, ಸಂಶೋಧನೆ ನಡೆಸುವುದು ಈ ಸಂಸ್ಥೆಯ ಮುಖ್ಯ ಕಾರ್ಯಗಳು. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ 1966ರ ಅಕ್ಟೋಬರ್ ತಿಂಗಳಿನಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿತು.

ಮೊದಲಿಗೆ ಮೈಸೂರು ನಗರದ ಝಾನ್ಸಿ ಲಕ್ಷೀಬಾಯಿ ರಸ್ತೆಯಲ್ಲಿರುವ ರಾಮಮಂದಿರ ಹಾಗೂ ಅನಂತರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕೆಲಸ ಮಾಡುತ್ತಿದ್ದ ಈ ಸಂಸ್ಥೆ 1970ರಲ್ಲಿ ಮಾನಸ ಗಂಗೋತ್ರಿ ಆವರಣಕ್ಕೆ ವರ್ಗಾವಣೆಗೊಂಡಿತು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂದಿನ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಸಂಸ್ಥೆಗೆ ನೀಡಿದ್ದ 32 ಎಕರೆ ಜಮೀನಿಗೆ ಬದಲಾಗಿ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ 32 ಎಕರೆ ಜಮೀನು ನೀಡಿದ್ದರ ಫಲವಾಗಿ ಈ ಸಂಸ್ಥೆ ಇಲ್ಲಿ ರೂಪುಗೊಂಡಿತು. ವಾಕ್-ಶ್ರವಣ ದೋಷಗಳ ತಪಾಸಣೆ ಚಿಕಿತ್ಸೆಗಳ ಜೊತೆಗೆ ಈ ಸಂಸ್ಥೆ ಅಧ್ಯಯನ ಹಾಗೂ ಸಂಶೋಧನೆಗೆ ಸಹ ಹೆಚ್ಚಿನ ಒತ್ತು ನೀಡುತ್ತಿದೆ.

ಈ ಸಂಸ್ಥೆ ಈಗ ವಾಕ್-ಶ್ರವಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯ ವರೆಗಿನ ಶಿಕ್ಷಣವನ್ನು ನೀಡುತ್ತಿದ್ದು ಇಲ್ಲಿ ಒಟ್ಟು ಆರು ವಿಭಾಗಗಳಿವೆ: ಶ್ರವಣ ವಿಜನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಆಡಿಯಾಲಜಿ), ಮನೋವಿಜ್ಞಾನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಸೈಕಾಲಜಿ), ವಿದ್ಯುನ್ಮಾನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಾನಿಕ್ಸ್), ಕಿವಿ-ಮೂಗು-ಗಂಟಲು ವಿಭಾಗ (ಡಿಪಾರ್ಟ್ಮೆಂಟ್ ಆಫ್ ಇಎನ್ಟಿ), ವಾಕ್-ಭಾಷಾ ವಿಜ್ಞಾನವಿಭಾಗ (ಡಿಪಾರ್ಟ್ಮೆಂಟ್ ಆಫ್ ಸ್ಪೀಚ್ ಲಾಂಗ್ವೇಜ್ ಸೈನ್ಸ್​​), ವಾಕ್-ದೋಷನಿದಾನ ವಿಭಾಗ (ಡಿಪಾರ್ಟ್ಮೆಂಟ್ ಆಫ್ ಸ್ಪೀಚ್ ಪೆಥಾಲಜಿ) ಹಾಗೂ ಚಿಕಿತ್ಸಾ ಕೇಂದ್ರ (ಥೆರಪಿ ಕ್ಲಿನಿಕ್). ಸಲಕರಣೆ ಅಭಿವೃದ್ಧಿ ವಿಭಾಗ – ಡಿಪಾರ್ಟ್ಮೆಂಟ್ ಆಫ್ ಮೆಟೀರಿಯಲ್ ಡೆವಲಪ್ಮೆಂಟ್.