ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಇಲಾಖೆಯಲ್ಲಿ ಖಾಲಿಯಿರುವ 15 ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ. ಇದರಲ್ಲಿ ಸಹಾಯಕ ಮ್ಯಾನೇಜರ್, ಸೈಟ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
ಸಂಸ್ಥೆಯ ಹೆಸರು: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು
ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕ, ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್, ಸೈಟ್ ಎಂಜಿನಿಯರ್ (ಸೇತುವೆ), ಗುಣಮಟ್ಟ ನಿಯಂತ್ರಣ ತಜ್ಞ, ನಿವಾಸಿ ಇಂಜಿನಿಯರ್ (ಸಿವಿಲ್), ನಿವಾಸಿ ಎಂಜಿನಿಯರ್ (ಸೇತುವೆ), ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ)
ಹುದ್ದೆಗಳ ಸಂಖ್ಯೆ: ಒಟ್ಟು 15 ಹುದ್ದೆಗಳು
ಶೈಕ್ಷಣಿಕ ಅರ್ಹತೆಗಳು:
ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಸ್ನಾತಕೋತ್ತರ ಪದವಿ, ಸೈಟ್ ಸರ್ವೇಯರ್ ಹಾಗೂ ಸೈಟ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.
ಗುಣಮಟ್ಟ ನಿಯಂತ್ರಣ ತಜ್ಞರು ಹುದ್ದೆಗೆ ಡಿಪ್ಲೊಮಾ, ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಹಾಗೂ ರೆಸಿಡೆಂಟ್ ಎಂಜಿನಿಯರ್ (ಸಿವಿಲ್), ರೆಸಿಡೆಂಟ್ ಎಂಜಿನಿಯರ್ (ಬ್ರಿಡ್ಜ್) ಹುದ್ದೆಗೆ ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸೆಕ್ಟರ್ ಎಕ್ಸ್ಪರ್ಟ್/ಸಿವಿಲ್ (ಸೇತುವೆ ವಿನ್ಯಾಸ) ಹುದ್ದೆಗೆ ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪರ್ಣಗೊಳಿಸಿರಬೇಕು.
ವಯೋಮಿತಿ ಹಾಗೂ ವೇತನಶ್ರೇಣಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ 32 ವರ್ಷ ಮೀರಿರಬಾರದು. ಇನ್ನು ಉಳಿದಂತೆ ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್, ಸೈಟ್ ಎಂಜಿನಿಯರ್ (ಸೇತುವೆ), ಗುಣಮಟ್ಟ ನಿಯಂತ್ರಣ ತಜ್ಞ, ನಿವಾಸಿ ಇಂಜಿನಿಯರ್ (ಸಿವಿಲ್), ನಿವಾಸಿ ಎಂಜಿನಿಯರ್ (ಸೇತುವೆ), ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು.
ಮೇಲ್ಕಂಡ ಹುದ್ದೆಗಳ ಅನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಇಡಬ್ಲ್ಯೂಎಸ್ /ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ರೂ.300.
ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ – ರೂ.600.
ಆಯ್ಕೆ ಪ್ರಕ್ರಿಯೆ:
ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನಕ್ಕೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಡಿಸೆಂಬರ್ 13, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 10 2025
ಸಂದರ್ಶನದ ದಿನಾಂಕ: ಜನವರಿ 9 ಹಾಗೂ 10, 2025