ಮನೆ ರಾಜ್ಯ ರಾಯಚೂರು: ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ರಾಯಚೂರು: ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

0

ರಾಯಚೂರು: ನಗರದ ಲಾಡ್ಜ್ ಕೋಣೆಯಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಸೋನಿ (24) ಮೃತ ಮಹಿಳೆ.

ಪತಿ ಅವಿನಾಶ್ ಹಾಗೂ ಸೋನಿ ಕಳೆದ ಮೂರು ವರ್ಷದಿಂದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ ಸೋನಿ ಹೆರಿಗೆಯಾಗಿದ್ದು, 20 ದಿನಗಳ ಹಸುಗೂಸಿದೆ. ಸೋನಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ಪತಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಎಸ್ ಪಿ, ಡಿವೈಎಸ್ ಪಿ ಭೇಟಿ, ಪರಿಶೀಲನೆ ನಡೆಸಿದ್ದು, ಪತಿ ಸೇರಿದಂತೆ ಹೊಟೇಲ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಹಿಂದಿನ ಲೇಖನಆರೋಪಿಗೆ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸುವುದು ಬದ್ಧ ಕರ್ತವ್ಯ: ಹೈಕೋರ್ಟ್‌
ಮುಂದಿನ ಲೇಖನಬಾಗಲಕೋಟೆ: ವಿದ್ಯಾರ್ಥಿನಿಯರ ಅಂಬೇಡ್ಕರ್ ವಸತಿ ನಿಲಯದ ವಾರ್ಡನ್​​ ವಿರುದ್ಧ ಲೈಂಗಿಕ ಕಿರುಕುಳ ಆರೋಪ