ಮನೆ ಸುದ್ದಿ ಜಾಲ ನಾಗರಿಕರಿಗೆ ಬಂದೂಕು ತರಬೇತಿಗಾಗಿ ಅರ್ಜಿ ಆಹ್ವಾನ

ನಾಗರಿಕರಿಗೆ ಬಂದೂಕು ತರಬೇತಿಗಾಗಿ ಅರ್ಜಿ ಆಹ್ವಾನ

0

ಚಾಮರಾಜನಗರ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಗಳಲ್ಲಿ ಕೊಳ್ಳೇಗಾಲ ಮತ್ತು ಚಾಮರಾಜನಗರ ಪಟ್ಟಣಗಳಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಪಡೆಯಲಿಚ್ಚಿಸುವ ಆಸಕ್ತ ನಾಗರಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಂದ ನಿಗದಿತ ಅರ್ಜಿ ಪಡೆದು ಭರ್ತಿ ಮಾಡಿ ಆಗಸ್ಟ್ ೧೫ ರೊಳಗೆ ಆಯಾ ಠಾಣೆಗಳಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳಾದ ಡಿ.ಎ.ಆರ್‌ನ ಡಿ.ಎಸ್.ಪಿ. ಜಿ. ಸೋಮಣ್ಣ ಮೊ.ಸಂ ೯೪೮೦೮೦೪೬೦೬, ಡಿ.ಎ.ಆರ್‌ನ ಆರ್.ಪಿ.ಐ, ಟಿ.ಬಿ. ಸತೀಶ್ ಮೊ.ಸಂ ೯೧೧೦೪೨೭೬೮೫ ಹಾಗೂ ಜಿಲ್ಲಾ ಶಸ್ತಾçಕಾರರಾದ ಜಿ. ರಮೇಶ ಮೊ.ಸಂ ೯೮೪೫೯೭೩೮೧೯ ಇವರನ್ನು ಸಂಪರ್ಕಿಸುವAತೆ ಜಿಲ್ಲಾ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.