ಮನೆ ರಾಜ್ಯ ಮೈಸೂರಿನಲ್ಲಿ ಅಪಘಾತ: ವಿಟ್ಲ ಪಟ್ಟಣ ಪಂಚಾಯಿತಿ ನೌಕರ ಸಾವು

ಮೈಸೂರಿನಲ್ಲಿ ಅಪಘಾತ: ವಿಟ್ಲ ಪಟ್ಟಣ ಪಂಚಾಯಿತಿ ನೌಕರ ಸಾವು

0

ವಿಟ್ಲ: ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ನ ಪೌರ ಕಾರ್ಮಿಕ ಮೃತಪಟ್ಟಿದ್ದಾನೆ.

ಪ್ರಸ್ತುತ ವಿಟ್ಲದ ರಥದಗದ್ದೆ ಬಳಿ ವಾಸ್ತವ್ಯವಿರುವ ದೊಡ್ಡ ಕುಮಾರ (47)  ಮೃತ ನೌಕರ.

ಸೋಮವಾರ ಅವರ ಹುಟ್ಟೂರು ಮೈಸೂರಿನಲ್ಲಿ ನಡೆದ ದ್ವಿಚಕ್ರ ವಾಹನ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ ಎಂ ಮಾಹಿತಿ ಲಭ್ಯವಾಗಿದೆ.

ಸುಮಾರು 10 ವರ್ಷಗಳಿಂದ ವಿಟ್ಲ ಪಂಚಾಯತ್ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, 3 ವರ್ಷಗಳ ಹಿಂದೆ ಖಾಯಂ ಪೌರ ಕಾರ್ಮಿಕರಾಗಿ ಭಡ್ತಿ ಹೊಂದಿದ್ದರು. 2 ವರ್ಷಗಳ ಹಿಂದೆ ಕಟ್ಟಡದಿಂದ ಬಿದ್ದು ಗಾಯಗೊಂಡು ಚೇತರಿಸಿದ್ದರು.

ಹಿಂದಿನ ಲೇಖನಶಾಸಕರ ಖರೀದಿ: ಎಸ್’ಐಟಿ ಎದುರು ಹಾಜರಾಗುವಂತೆ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಅವರಿಗೆ ಸೂಚಿಸಿದ ತೆಲಂಗಾಣ ಹೈಕೋರ್ಟ್
ಮುಂದಿನ ಲೇಖನಬೆಳಗಾವಿ ಗಡಿ ವಿವಾದ: ಮಹಾರಾಷ್ಟ್ರಕ್ಕೆ ಸುಪ್ರೀಂಕೋರ್ಟ್’ನಲ್ಲಿ ಸೋಲಾಗಲಿದೆ- ಸಿಎಂ ಭರವಸೆ