ಮನೆ ಸುದ್ದಿ ಜಾಲ ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರ ನೇಮಕ

ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರ ನೇಮಕ

0

ಮೈಸೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಚುನಾವಣಾ ಆಯೋಗವು ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನು ನೇಮಕ ಮಾಡಿರುತ್ತದೆ.

Join Our Whatsapp Group

ಈ ಸಂಬಂಧ 210 ಪಿರಿಯಾಪಟ್ಟಣ ಹಾಗೂ 211 ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರಗಳಿಗೆ  ಯಶು ರುಸ್ತುಂ ಅವರನ್ನು ಸಾಮಾನ್ಯ ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಸಾರ್ವಜನಿಕರು ಸದರಿ ಕ್ಷೇತ್ರಗಳ ಪಿರಿಯಾಪಟ್ಟಣ ಚುನಾವಣಾ ಸಂಬಂಧ ದೂರುಗಳನ್ನು ನೀಡಲು ದೂ.ಸಂ: 7349776593 ಹಾಗೂ ಕೆ.ಆರ್.ನಗರ ಚುನಾವಣಾ ಸಂಬಂಧ ದೂ.ಸಂ: 7795662991 ಗೆ ಕರೆ ಮಾಡಬಹುದು.

ಬೆಳಗ್ಗೆ 11 ರಿಂದ 1 ಗಂಟೆವರೆಗೆ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದವರು ಪಿರಿಯಾಪಟ್ಟಣ ಐಬಿಯಲ್ಲಿ ಮತ್ತು ಕೆ ಆರ್ ನಗರ ಕ್ಷೇತ್ರದವರು ಕೆ ಆರ್ ನಗರ ಐಬಿ ಯಲ್ಲಿ ಸಾಮಾನ್ಯ ವೀಕ್ಷಕರನ್ನು ನೇರವಾಗಿ ಭೇಟಿ ಮಾಡಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.