ಕ್ಷೇತ್ರ – 6 ಡಿಗ್ರಿ 30 ಕಲೆಯಿಂದ 30 ಡಿಗ್ರಿ, ಕಲಾ – ಮಿಥುನ, ರಾಶಿಸ್ವಾಮಿ – ಬುಧ, ನಾಡಿ – ಅಂತ್ಯ, ಯೋನಿ – ಶ್ವಾನ, ಗಣ – ಮನುಷ್ಯ, ನಕ್ಷತ್ರಸ್ವಾಮಿ – ರಾಹು, ನಾಮಾಕ್ಷರಗಳು – ಕು, ಪ, ಓ, ಛ, ಜ ಶರೀರರದಭಾಗ – ಕುತ್ತಿಗೆ, ಹೆಗಲು, ಭುಜಗಳು, ರಟ್ಟೆ.
ರೋಗಗಳು :- ಕಂಠದಲ್ಲಿ ಸ್ರಾವ, ಕಿವಿ ಸೋರುವುದು, ಕರ್ಣಮೂಲ, ಅಸ್ತಮಾ, ಒಣ ಕೆಮ್ಮು ಮತ್ತು ಮತಿಭ್ರಮಣೆ, ಜಡತ್ವ ಮತ್ತು ಕಿವಿಯ ರೋಗಗಳು.
ಸಂರಚನೆ :- ಪ್ರಖರ, ಸಮರ್ಥ ಊಹಾಪೋಹ ಸಮರ್ಥ, ಆಲೋಚಕ, ಅಧ್ಯಯನದಲ್ಲಿ ಅಸಫಲ, ಬಂಧನ ಮಾಡುವವನು, ಉತ್ತಮ ಆಚಾರ ಹೊಂದಿದವನು, ಸುಳ್ಳು ಹೇಳುವವನು, ವ್ಯಾಪಾರ ಮಾಡುವವನು, ತಾಂತ್ರಿಕ ವಶೀಕರಣ ಮಾಡುವವನು, ವಿಶ್ವಾಸ ಘಾತಿ, ಜಾದುಗಾರ, ಕೃತಜ್ಞನಿಂದನೀಯ ಕಾರ್ಯಮಾಡುವವನು, ಅಪರಾಧ ಪ್ರವೃತ್ತಿಯವನ್ನು ಸಾಹಸಿಕ ಮತ್ತು ಮಧ್ಯ ವ್ಯವಸ್ಥೆಯಲ್ಲಿ ಕಷ್ಟ ಅನುಭವಿಸುವವನು ಆಗಿದ್ದಾನೆ
ಉದ್ಯೋಗ, ವಿಶೇಷತೆಗಳು :- ಪುಸ್ತಕ ಮಾರುವದು, ಸಂಗ್ರಹಿಸುವುದು, ವ್ಯಾಪಾರ ಮಾಡುವುದು, ಅಂಚೆ ತಂತಿ ನೌಕರಿ ಮಾಡುವುದು, ಪ್ರವಾಸ ಸಂಚಾರ, ಅಣು ಶಕ್ತಿ ಕಾರ್ಯಗಾರದಲ್ಲಿ ಕೆಲಸ ಮಾಡುವದು, ರೇಡಿಯೋದಲ್ಲಿ ಪ್ರಚಾರ ವಿಭಾಗದಲ್ಲಿರುವುದು, ಲೇಖನ ಅನುಸಂಧಾನ, ಸಂಶೋಧನೆ, ಮದಿರೆ, ಔಷದಿ ವ್ಯಾಪಾರ ಮಾಡುವುದು, ನೇಯುವದು, ಹಸ್ತ ರೇಖೆಯನ್ನು ತಿಳಿಯುವುದು, ಸಾರ್ವಜನಿಕ ನೇಮಕಾತಿ ಕೆಲಸ, ಅಪರಾಧಿಪ್ರವೃತ್ತಿಯವನು, ಮುಂತಾದ ಫಲ ಪಡೆಯುವವನು.
ಈ ನಕ್ಷತ್ರದವರಿಗೆ ಸಂತಾನ ಹೀನತೆ ಬರಬಹುದಾಗಿದೆ. ಅಲ್ಪವಿರ್ಯನಾದ ಜನರು ಅಬಲಿಷ್ಠರೂ ಆಗುವರು. ಗಣಿತ, ಸಸ್ಯಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರ, ತಂತಶಾಸ್ತ್ರ ಗಳಿಗೆ ನಿಪುಣರಾಗಿ ಹಣ ಸಂಗ್ರಹಿಸುವರು, ಮಧುರವಾಗಿ ಮಾತನಾಡುವರು, ಪ್ರೇಮವಹಾರವುಳ್ಳವರು ಆಗುವವರು.
ವೈದ್ಯ ಅಥವಾ ಮಂತ್ರಶಕ್ತಿ ತಿಳಿದವರು, ಸ್ವಚ್ಛ ಹೃದಯದವರು, ಧೂಮಪಾನ ವಸ್ತು ಸೇವಿಸುವವರು, ದೂರದರ್ಶಿಗಳು ಅಪಮಾನ ಜಗಕ ಕೆಲಸ ಮಾಡುವವರು, ಪರಿವಾರದಲ್ಲಿ ಕೆಲಹ ಮಾಡುವವರು, ಪ್ರವಾಸಿ, ಅಹಂಕಾರಿ ಕಾರ್ಯ ಮಾಡುವವರು, ಬುಧನು ಅಥವಾ ರಾಹು ಈ ನಕ್ಷತ್ರದಲ್ಲಿದ್ದು ದಾಟಿ ಹೋಗುವಾಗ ತಮ್ಮ ದಶೆಯ ಫಲವನ್ನು ನೀಡುವರು. ಸೂರ್ಯನಿಂದಲೂ ಈ ಸಮಯದಲ್ಲಿ ಪ್ರೇರಣೆಯೂ ಸಿಗುವುದು. ಆಶಾಡ ಮಾಸದಲ್ಲಿ ಸೂರ್ಯನು ಸುಮಾರು 30 ದಿವಸ ಈ ನಕ್ಷತ್ರದಲ್ಲಿರುವನು. ಈ ಸಮಯದಲ್ಲಿ ಮಾನ್ಸೂನ್ ಪ್ರದೇಶದಲ್ಲಿ ಮಳೆ ಉಂಟಾಗುವುದು. ಸೂರ್ಯನ ಪ್ರಭಾವ ಸಾಧಾರಣವಾಗಿರುವುದು.