ಮನೆ ಅಪರಾಧ ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಜೋಡಿಯ ಬಂಧನ

ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಜೋಡಿಯ ಬಂಧನ

0

ಬೆಂಗಳೂರು: ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ ಮಾಡುತ್ತಿದ್ದ ಯುವಕ ಹಾಗೂ ಆತನ ಪ್ರಿಯತಮೆಯನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Join Our Whatsapp Group

ಪ್ರಿಯಕರನ ಆಜ್ಞೆಯ ಮೇರೆಗೆ ಯುವತಿ ಮೊಪೆಡ್ ಗಳನ್ನು ಸಹ ಕಳ್ಳತನ ಮಾಡಿದ್ದಾರೆ. ಈ ಜೋಡಿ ಮಾದಕ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ದ್ವಿಚಕ್ರ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಎಂಡಿಎಂಎಯಂತಹ ಅತ್ಯಾಧುನಿಕ ಡ್ರಗ್ಸ್ ಗಳನ್ನು ಖರೀದಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಯುವತಿ ಮೊಪೆಡ್ ಅನ್ನು ಎತ್ತುವ ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ. ಯುವತಿ ತನ್ನ ಗುರುತನ್ನು ಮರೆಮಾಚಲು, ಮೊಪೆಡ್ ಗಳನ್ನು ಕದಿಯುವಾಗ ಬುರ್ಖಾ ಧರಿಸುತ್ತಿದ್ದಳು. ಕಳ್ಳತನ ಮಾಡುವಾಗ ಯುವತಿಯ ಗೆಳೆಯ ದೂರದಲ್ಲಿ ನಿಂತು ಸಲಹೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಶ್ರೀರಾಂಪುರದ ಅಂಬೇಡ್ಕರ್ನಗರದ ವಿ ಮುರುಗನ್(25) ಎಂದು ಗುರುತಿಸಲಾಗಿದ್ದು, ಯುವತಿಯನ್ನು ಥಣಿಸಂದ್ರದ ಸಾರಾಯಿಪಾಳ್ಯದ ನಿವಾಸಿಯಾಗಿದ್ದಾರೆ. ಮತ್ತೋರ್ವ ಆರೋಪಿ ಯಶವಂತಪುರದ ಮತ್ತಿಕೆರೆ ನಿವಾಸಿ ಬಿ.ಮುರಳಿ(23)ಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಆರೋಪಿ. ಮುರಳಿ ಈ ಜೋಡಿಗೆ ವಾಹನಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ್ದಾರೆ.

ಹಿಂದಿನ ಲೇಖನಆರ್’ಬಿಐನಿಂದ ಗ್ರೇಡ್ ಬಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
ಮುಂದಿನ ಲೇಖನನಮಗೆ ಹಣಕಾಸಿನ ಸಮಸ್ಯೆಗಳಿವೆ, ಆದರೆ ಜನ ಬಲವಿದೆ: ಎಚ್.ಡಿ.ಕುಮಾರಸ್ವಾಮಿ