ಕುಶಾಲನಗರ : ಚಿನ್ನಾಭರಣ ಮಳಿಗೆಗೆ ಆಗಮಿಸಿ ಆಭರಣ ಖರೀದಿಸುವ ನೆಪದಲ್ಲಿ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನ ಇಟ್ಟು ಪರಾರಿಯಾಗಿದ್ದ, ಇಬ್ಬರು ಮಹಿಳೆಯರನ್ನು ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದ, ಪಾಮರಹಳ್ಳಿ ಗ್ರಾಮ ನಿವಾಸಿಗಳಾದ ಕೈರುನ್ (46) ಹಾಗೂ ಜೈರಾಭಿ (36) ಎಂಬವರೆ ಬಂಧಿತ ಮಹಿಳಾ ಆರೋಪಿಗಳು.
ಬಂಧಿತರಿಂದ 22.4 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿದಿದ್ದಾರೆ.
ಪಟ್ಟಣದ ರಥ ಬೀದಿಯಲ್ಲಿರುವ ಶೀತಲ್ ಜ್ಯುವೆಲ್ಲರಿ ಶಾಪ್ ಗೆ ಜೂನ್ 5ರಂದು ಇಬ್ಬರೂ ಬುರ್ಖಾಧಾರಿ ಮಹಿಳೆಯರು ಮತ್ತು ಒಬ್ಬ ಯುವಕ ಚಿನ್ನಾಭರಣಗಳನ್ನು ಖರೀದಿಸುವ ನಾಟಕವಾಡಿ ಅಂಗಡಿಯವರ ಗಮನವನ್ನು ಬೇರೆಡೆ ಸೆಳೆದು ಅಸಲಿ ಚಿನ್ನಭರಣವನ್ನು ಎಗರಿಸಿ ಅದರ ಬದಲಿಗೆ ನಕಲಿ ಆಭರಣಗಳನ್ನು ಇಟ್ಟು ಪರಾರಿಯಾಗಿದ್ದರು.
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಮತ್ತು ವೃತ ನಿರೀಕ್ಷಕ ಬಿ.ಜಿ. ಮಹೇಶ್, ಟೌನ್ ಪೊಲೀಸ್ ಠಾಣೆಯ ಐಪಿಎಸ್ ರವೀಂದ್ರ ನೇತೃತ್ವದಲ್ಲಿ ತನಿಕಾ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿತು.
ಜು.5 ಐದರಂದು ಮಾಲು ಸಮೇತ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿ ಪ್ರಕರಣವನ್ನು ಭೇದಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.