ಮನೆ ಅಪರಾಧ 65 ಮೊಬೈಲ್ ದರೋಡೆ ಮಾಡಿದ್ದ ಯುವಕನ ಬಂಧನ

65 ಮೊಬೈಲ್ ದರೋಡೆ ಮಾಡಿದ್ದ ಯುವಕನ ಬಂಧನ

0

ಬೆಂಗಳೂರು65 ಮೊಬೈಲ್‌ಗಳನ್ನು ದರೋಡೆ ಮಾಡಿದ್ದ 25 ವರ್ಷದ ಕುಂಬಳಗೋಡು ನಿವಾಸಿ ಸೈಯದ್ ಫವಾಜ್ ಎಂಬ ಯುವಕನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 

ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಫವಾಜ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ತಾನು ಮೊಬೈಲ್‌ಗಳನ್ನು ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದವರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ. ಈತ ಜಯನಗರ, ಬಸವನಗುಡಿ, ಮೈಕೋ ಲೇಔಟ್, ಸಿದ್ದಾಪುರ, ಬಿಟಿಎಂ ಲೇಔಟ್ ಮತ್ತಿತರ ಪ್ರದೇಶಗಳಲ್ಲಿ ಅಪರಾಧ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನ1200 ವರ್ಷಗಳ ಪುರಾತನ ಬುದ್ದನ ವಿಗ್ರಹ ಇಟಲಿಯಲ್ಲಿ ಪತ್ತೆ
ಮುಂದಿನ ಲೇಖನಪುನೀತ್ ರಾಜ್‌ಕುಮಾರ್ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ಟಾಲಿವುಡ್ ನಟ ಪ್ರಭಾಸ್