ಮನೆ ಜ್ಯೋತಿಷ್ಯ ಆಶ್ಲೇಷಾ ನಕ್ಷತ್ರ ಮತ್ತು ಜಾತಕ

ಆಶ್ಲೇಷಾ ನಕ್ಷತ್ರ ಮತ್ತು ಜಾತಕ

0

      ಆಶ್ಲೇಷ ನಕ್ಷತ್ರದ ಕ್ಷೇತ್ರ ವ್ಯಾಪ್ತಿಯ 16ಅಂಶ 40 ಕಲಾದಿಂದ 30 ಅಂಶ ಕರ್ಕ ರಾಶಿಯವರಿಗೆ, ರಾಶಿ ಸ್ವಾಮೀ ಚಂದ್ರ,ನಕ್ಷತ್ರ ಸ್ವಾಮಿ, ಬುಧ ನಕ್ಷತ್ರ ದೇವತೆ ಸರ್ಪ, ತಾರಾಸಮೂಹ ಐದು  ಆಕಾಶ ಭಾಗ ಮಧ್ಯ, ಅಂತ್ಯನಾಡಿ, ಮಾರ್ಜಾಲ, ಯೋನಿ, ರಾಕ್ಷಸಗಣ  ನಾಮಾಕ್ಷರ  ಡಿ, ಡು, ಡೇ, ಡೋ.ಆಶ್ಲೇಷ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ,ಭಾಗ ಶ್ವಾಶಕೋಶ, ಉದರ ಅನ್ನನಾಳದ ಕೆಳಗಿನ ಭಾಗ,ತಂತು ಪಟ,ಅಗ್ನ್ಯಾಶಯ, ಯಕೃತ್.

Join Our Whatsapp Group

 ಆಶ್ಲೇಷಾ ನಕ್ಷತ್ರದ ಜಾತಕಾನ ಸ್ವರೂಪ  :

     ಶೀಘ್ರವಾಗಿ ಪ್ರಸನ್ನವಾಗುವವ, ಚತುರ ಬುದ್ಧಿ, ಕಲ್ಪನಾ ಪ್ರವೀಣ, ಸರ್ವ ಮಾನ್ಯ, ಯಥಾರ್ಥವಾದಿ, ಶೀಘ್ರದಲ್ಲಿ ಬದಲಾಗುವವ, ಪರಿವರ್ತನಾ ಶೀಲ ಆಚರಣೆ,ನಿರರ್ಗಳವಾಗಿ ಮಾತನಾಡುವ,ಮಾತುಕತೆಯಲ್ಲಿ ಅನ್ಯರ ಅನುಕರಣೆ ಮಾಡುವವ,ಉತ್ತಮ ಲೇಖಕ ಅನ್ಯರ ಭಾಷೆಯನ್ನು ಶೀಘ್ರವಾಗಿ ಆರಿಯುವವ ಬಹುಭಾಷಿ, ವಿದೂಷಕ,ಕಲಾತ್ಮಕ ಅಭಿರುಚಿ ಯುಳ್ಳವ,ಸೋಗು ಹಾಕುವವ, ಸಾಹಿತ್ಯ ಅಥವಾ ಸಂಗೀತದ ತಿಳುವಳಿಕೆಯುಳ್ಳವ ಯಾತ್ರಾಪ್ರಿಯ, ಇದಲ್ಲದೆ,ಈ ಜಾತಕನು ಬೇಜವಾಬ್ದಾರಿ  ಪ್ರವೃತ್ತಿಯವ, ಸಮಸ್ತ ಪ್ರಕಾರದ ಪದಾರ್ಥಗಳನ್ನು ಭಕ್ಷಣೆ ಮಾಡುವವ, ಅಪರಾಧ ವೃತ್ತಿ ಅಥವಾ ದುಷ್ಟಕಾರ್ಯಗಳಿಗೆ ಕೆಲವೊಮ್ಮೆ ಮಹತ್ವ ನೀಡುವವ, ಕೃತಘ್ನ ಮೋಸಗಾರ ಕಪಟಿ,ಸ್ವಾರ್ಥಿಯೂ ಆಗುತ್ತಾನೆ.

 ಆಶ್ಲೇಷಾ ಜಾತಕ ಉದ್ಯೋಗ :

    ವಿವಿಧ ಪ್ರಕಾರದ ಪದಾರ್ಥಗಳ ವ್ಯಾಪಾರಿ,ಪಂಡಿತ,ಸಂಸ್ಕಾರ ಕರ್ಮ ಮಾಡುವವ, ಮಾರಾಟದ ಪ್ರತಿನಿಧಿ,ಮಾರಾಟಗಾರ ದಾಲಾಲಿ ವ್ಯಾಪಾರದತ್ತ ಒಲವುಳ್ಳವ,ಅಂತರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದವ, ವಾಣಿಜ್ಯ ವಿಭಾಗ ಪತ್ರ ಲಿಪಿಕ ಬೆರಳಚ್ಚುಗಾರ, ಪತ್ರವ್ಯವಹಾರಕರ್ತ,ಲೇಖಕ, ಗುಮಾಸ್ತ ಭಾಷಣಶಾಸ್ತ್ರಜ್ಞ, ಮಸಿ ಅಥವಾ ಪ್ರಕಾಶದ ಮಾರಾಟಗಾರ, ಸುಣ್ಣ ಬಣ್ಣ ಅಥವಾ ಅಲ್ಪಕಾಲಿಕ ಕಾರ್ಯಗಳ ಗುತ್ತಿಗೆದಾರ,ಪಾಲಿಷ್, ಲೆಕ್ಕಪುಸ್ತಕ, ಲೆಕ್ಕಪರೀಕ್ಷಕ, ಸ್ಥಾನೀಯ ಅಧ್ಯಾಪಕ ಮತ್ತು ಕಠಿಣ ಕಾರ್ಯಗಳಲ್ಲಿ ತೊಡಗುವವನ್ನೂ ಆಗುತ್ತಾನೆ. ಕೆಲವೊಮ್ಮೆ ಈ ನಕ್ಷತ್ರ ಜಾತಕನು ಭಾಷಾಂತರಕಾರ,ರಾಜದೂತ, ಜಲ ವಿತರಣೆ, ನಾಗರಿಕ ಪೂರೈಕೆ ವಸ್ತ್ರ ವಿಶೇಷಜ್ಞ,ಟೆಕ್ಸಟೈಲ್ ಇಂಜಿನಿಯರ್, ನೂಲು ಅಥವಾ ಕೃತ್ರಿಮನೂಲಿನ ಉದ್ಯೋಗ, ವ್ಯಾಪಾರ, ಕಾಗದ, ಲೇಖನಿ ಇತ್ಯಾದಿಗಳಿಂದ ಧನಲಾಭ ಹೊಂದುವವನಾಗುತ್ತಾನೆ.ಸ್ವತಂತ್ರವಾಗಿ ಯಾವುದೇ ಕಾರ್ಯವನ್ನು ಮಾಡಲಾಗದ ಜಾತಕನು ಟ್ರಾವೆಲ್ ಏಜೆಂಟ್,ಮಾರ್ಗದರ್ಶಿ, ಪಥ ಪ್ರದರ್ಶಕ, ಗಗನಸಖ, ಬೀದಿ ಜ್ಯೋತಿಷಿ  ಗಣಿತಜ್ಞ, ಗಣಿತ ಅಧ್ಯಾಪಕ ಪರಿಚಾರಕ ಇತ್ಯಾದಿ ಕಾರ್ಯಕ್ರಮಗಳನ್ನು ಕುಶಲತೆಯಿಂದ  ಮಾಡುತ್ತಾನೆ.

      ಇಷ್ಟೆಲ್ಲದೆ, ಬುಧನ ನಕ್ಷತ್ರದಲ್ಲಿ ಜನಿಸುವ ಜಾತಕನು ಬಲ್ಬ್ ಗಿಡಿ ಮೂಲಿಕೆ,ಫಲ, ವಿಷ, ಕ್ರೀಡೆ,ರೋಗದ ವಿಶೇಷಜ್ಞ, ಆಕೃತಿಗಳ ನಿರ್ಮಾಣಕಾರ, ಕಲಬೆರಕ ಪದಾರ್ಥಗಳನ್ನು ಸಿದ್ಧಪಡಿಸುವವ, ರಬ್ಬರ್ ಅಥವಾ ಪ್ಲಾಸ್ಟಿಕ್ ಕಾರ್ಯ ಮಾಡುವವ, ದೈಹಿಕ ತಜ್ಞ ಮೇವು, ಹೊಟ್ಟು ಮಾರುವವ ರಕ್ತ ಅಥವಾ ಪಿತ್ತರೋಗದ  ವಿಶೇಷಜ್ಞ ನಾಗುತ್ತಾನೆ.