ಗೊಬ್ಬರಗಳು:
ಈ ಬೆಳೆಗೆ ಹೆಚ್ಚು ಪ್ರಮಾಣದಲ್ಲಿ ಗೊಬ್ಬರಗಳು ಬೇಕಾಗುವುದಿಲ್ಲ.ಸ್ವಲ್ಪ ಪ್ರಮಾಣದಲ್ಲಿ ಕೊಟ್ಟೆಗೆ ಗೊಬ್ಬರವನ್ನು ಕೊಟ್ಟರೆ ಸಾಕು.ಗಿಡಕ್ಕೆ ನೂರು ಗ್ರಾಮದಷ್ಟು ಕೊಡಬಹುದು.
*ಅಂತರ ಬೇಸಾಯ :
ಬೆಳೆಯು ಚಿಕ್ಕದಿದ್ದಾಗ ಚಿಕ್ಕದಿಂದಾದಾಗ ಒಂದೆರಡು ಬಾರಿ 25ರಿಂದ 30 ದಿನಗಳ ಅಂತರದಲ್ಲಿ ಕೈಯಿಂದ ಕಳೆ ತೆಗೆಯುವುದು ಅಗತ್ಯ.
ಸಚಿ ಸಂರಕ್ಷಣೆ :
ಈ ಬೆಳೆಯನ್ನು ಹೆಚ್ಚು ಭಾದಿಸುವ ಕೀ ಕೀಟಗಳಾವುವೂ ಕಂಡುಬಂದಿಲ್ಲ ರೋಗಗಳಲ್ಲಿ ಬೀಜ ಕೊಳೆಯುವ ರೋಗ ಎಲೆಯ ಸಸಿ ಮತ್ತು ಎಲೆಗಳು ಬಾಡುವುದು ಮುಖ್ಯವಾದವು. ಇದನ್ನು ಸಸಿ ಮಡಿ ತಯಾರಿಕೆಯ ಸಮಯದಲ್ಲಿ ನಿಗಾವಹಿಸಿ. ನೀರನ್ನು ಹೆಚ್ಚು ನಿಲ್ಲದಂತೆ ಮಾಡಿ ಮತ್ತು ಬೇವಿನ ಕಷಾಯ ಸಾರದಿಂದ ತಡೆಗಟ್ಟಬಹುದು.
ಕೂಯ್ಲು:
ಬೆಳೆ ಬಿತ್ತನೆ ಮಾಡಿದ 150 ರಿಂದ 170 ದಿನಗಳ ನಂತರ ಕೂಯ್ಲಿಗೆ ಸಿದ್ಧವಾಗುತ್ತದೆ.ಜನವರಿಯಿಂದ ಪ್ರಭಾವವಾಗಿ ಮಾರ್ಚ್ ತಿಂಗಳವರೆಗೆ ಕೊಯ್ಲು ಮಾಡಬಹುದು.ಎಲೆಗಳು ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳು ಬಲಿತು ಹಣ್ಣಾಗಿ ಕೆಂಪು ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ಕೊಯ್ಲು ಮಾಡುವಾಗ ಗಿಡಗಳನ್ನು ಬೇರು ಸಹಿತ ತೆಗೆದು ನಂತರ ಮೇಲಿನ ಭಾಗವನ್ನು ಬೇರ್ಪಡಿಸಿ, ಕಾಂಡವನ್ನು ಬುಡದಿಂದ 1-2 ಸೆಂಟಿಮೀಟರ್ ಎತ್ತರದಿಂದ ಕತ್ತರಿಸಬೇಕು. ನಂತರ ಅವುಗಳನ್ನು ಅಡ್ಡವಾಗಿ ಕತ್ತರಿಸಿ 7ರಿಂದ 10 ಸೆಂಟಿಮೀಟರ್.ಸಣ್ಣ ಸಣ್ಣ ತುಂಡುಗಳಾಗಿ ಮಾಡಬೇಕು.ನಂತರ ಅವುಗಳನ್ನು ಬಿಸಿಲಲ್ಲಿ ಹರಡಿ ಚೆನ್ನಾಗಿ ಒಣಗಿಸಬೇಕು. ಗಿಡದಿಂದ ಕಾಯಿಗಳನ್ನು ಬಿಡಿಸಿ ತೆಗೆದು ಇಲ್ಲವೇ ಹಾಗೆಯೇ ಒಣಗಿಸಿ ಕಡ್ಡಿಯಿಂದ ಬಡಿದರೆ ಬೀಜಗಳು ಬೇರ್ಪಡಿಸುತ್ತವೆ.
ಇಳುವರಿ :
1 ಮೀ.× 1ಮೀ. ಪ್ರದೇಶದಿಂದ 50 ಗ್ರಾಮಿನಷ್ಟು ಒಣಬೇರು ಮತ್ತು 100 ಗ್ರಾಮಿನಷ್ಟು ಬೀಜಗಳ ಇಳುವರಿ ದೊರೆಯುತ್ತದೆ.
ವರ್ಗೀಕರಣ:
ಬೇರುಗಳನ್ನು ಒಣಗಿಸಿದ ಮೇಲೆ ಬೇರುಗಳಿಗೆ ಅಂಟಿರುವ ಮಣ್ಣು ಮುಂತಾದವುಗಳನ್ನು ಬಿಡಿಸಿ ತೆಗೆದು ಸ್ವಚ್ಛಗೊಳಿಸಿ ಒಂದೇ ಅಳತೆಗೆ ಕತ್ತರಿಸಬೇಕು. ಇಂದಿನ ಬೆಳಕೆಯಲ್ಲಿ ನಾಲ್ಕು ದರ್ಜೆಗಳಿವೆ.
ಎ ದರ್ಜೆ : ಬೇರು ತುಂಡುಗಳನ್ನು ಗಟ್ಟಿಯಾಗಿದ್ದು ಏಳು ಸೆಂಟಿಮೀಟರ್ ಉದ್ದ ಮತ್ತು ಒಂದರಿಂದ ಒಂದು ಪಾಯಿಂಟ್ ಐದು ಸೆಂಟಿಮೀಟರ್ ದಪ್ಪವಿರುತ್ತದೆ.ಅವು ಪೆಡುಸಾಗಿದ್ದು ಒಳಗೆ ಅಚ್ಚ ಬಿಳುಪು ಬಣ್ಣವಿರುತ್ತದೆ.
ಬಿ ದರ್ಜೆ : ಬೇರು ತುಂಡುಗಳನ್ನು ಗಟ್ಟಿಯಾಗಿದ್ದು 5 cm ಉದ್ದ ಮತ್ತು ಒಂದು ಸೆಂಟಿಮೀಟರ್ ಗಿಂತ ಕಡಿಮೆ ದಪ್ಪಗಿರುತ್ತವೆ. ಒಳಭಾಗ ಬೆಳ್ಳಗಿರುತ್ತವೆ.
ಸಿ ದರ್ಜೆ : ಬೇರು ತುಂಡುಗಳು ಮೂರರಿಂದ ನಾಲ್ಕು ಸೆಂಟಿಮೀಟರ್. ಉದ್ದವಿದ್ದು ದೃಢವಾದ ಪಕ್ಕದ ಕಾವಲುಗಳಿಂದ ಕೂಡಿರುತ್ತದೆ.ದಪ್ಪ ಒಂದು ಸೆಂಟಿಮೀಟರ್ ಗಿಂತ ಕಡಿಮೆ ಇರುತ್ತವೆ.
ಕೆಲ ದರ್ಜೆ : ಬೇರು ತುಂಡುಗಳನ್ನು ಸಣ್ಣ ವಿದ್ದು ಬಗಶಃ ಗಟ್ಟಿಯಿರುತ್ತದೆ. ಅವು ತೆಳ್ಳಗಿದ್ದು ಒಳಭಾಗ ಹಳದಿ ಬಣ್ಣದ್ದಾಗಿರುತ್ತವೆ.
ಮನೆ ಮದ್ದಿಗೆ ಈ ಮೇಲ್ಕಂಡ ಯಾವ ದರ್ಜೆಯ ಬೇರುಗಳನ್ನಾ ದರೂ ಬಳಸಬಹುದು ಆದರೆ ವಾಣಿಜ್ಯ ಬೇಸಾಯಕ್ಕಾಗಿ ಆಳ ಪಡಿಸಿದಾಗ ಮಾರಾಟಕ್ಕೆ ಈ ದರ್ಜೆಗಳ ಬಗ್ಗೆ ತಿಳುವಳಿಕೆ ಅಗತ್ಯ.
ಉಪಯುಕ್ತ ಭಾಗಗಳು :
ಬೇರು,ಎಲೆ ಮತ್ತು ಬೀಜ.
ರಾಸಾಯನಿಕ ಘಟಕಗಳು :
ವಿಥಾಫೆರಿನ್, ಎ, ವಿಥಾನನ್, ವಿಥಾನೊಲೈಡ್ ಎ, ಸೊಮ್ನಿರಾಲ್, ನಿಕೊಟಿನ್, ರುಡೊಟ್ರೊಪಿನ್, ಟ್ರೊಪಿನ್, ಸೊಲಾಸೊಡೈನ್, ವಿಥಾಸೊಮ್ನಿಫೆರಾನ್ ಎಂಬ ಅಂಶಗಳಿವೆ.