ಮನೆ ಅಪರಾಧ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನ: 49.52 ಲಕ್ಷದ ಚಿನ್ನ ಜಪ್ತಿ- ಇಬ್ಬರು ಮಹಿಳೆಯರು ವಶಕ್ಕೆ

ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನ: 49.52 ಲಕ್ಷದ ಚಿನ್ನ ಜಪ್ತಿ- ಇಬ್ಬರು ಮಹಿಳೆಯರು ವಶಕ್ಕೆ

0

ದೇವನಹಳ್ಳಿ: ಒಳ ಉಡುಪಿನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತದ್ದ 49.52 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Join Our Whatsapp Group

ಇಬ್ಬರು ಮಹಿಳೆಯರು ಸೋಮವಾರ (ಏ.29) ರಾತ್ರಿ ದುಬೈನಿಂದ ಇಂಡಿಗೋ 6E1486 ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಮಹಿಳೆಯರ ಒಳ ಉಡುಪಿನಲ್ಲಿ 49.52 ಲಕ್ಷ ರೂ. ಮೌಲ್ಯದ 717 ಗ್ರಾಂ ಚಿನ್ನ ಪತ್ತೆಯಾಗಿದೆ.

ಸದ್ಯ ಅಧಿಕಾರಿಗಳು ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಅಧಿಕಾರಿಗಳು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಹುಬ್ಬಳ್ಳಿಯಲ್ಲಿ ನಾಳೆ ಅಮಿತ್ ಶಾ ತಮ್ಮ ಪರ ಪ್ರಚಾರ: ಪ್ರಲ್ಹಾದ್ ಜೋಶಿ
ಮುಂದಿನ ಲೇಖನನೇಹಾ ಕೊಲೆ ಹಿಂದೆ ಪಿಎಫ್ಐ ಸಂಘಟನೆ ಕೈವಾಡವಿದೆಯೇ? ಎಂಬ ತನಿಖೆಯಾಗಬೇಕು: ಆರ್. ಅಶೋಕ