ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40641 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ರೈತರ ಭೂಮಿ ಕಬಳಿಸಲು ಮುಂದಾದ್ರ ಉಳ್ಳವರು..?: ನೂರಾರು ಎಕರೆ ಗೋಮಾಳದ ಜಾಗ ಒತ್ತುವರಿ ಆರೋಪ

0
ಮಂಡ್ಯ: ರೈತರ ಭೂಮಿ ಕಬಳಿಸಲು ಉಳ್ಳವರು ಮುಂದಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದ್ದು,ಭೂಗಳ್ಳರು, ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆಗೆ ರೈತರು ಕಂಗಾಲಾಗಿದ್ದಾರೆ. ದಶಕಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಗೆ ಕಾಲಿಡದಂತೆ ರೈತರಿಗೆ ಅಡ್ಡಗಾಲು ಹಾಕಿದ್ದಾರೆ. ಭೂ ಕಬಳಿಕೆಗಾಗಿ ನಕಲಿ...

ಹೋಂ ಸ್ಟೇ ಒಂದರಲ್ಲಿ ಯುವತಿ ಸಾವಿನ ಪ್ರಕರಣ; 37,50,120 ರೂ. ಪರಿಹಾರಕ್ಕೆ ಗ್ರಾಹಕರ ವ್ಯಾಜ್ಯಗಳ...

0
ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದ ಮುಂಬಯಿ ಮೂಲದ ಯುವತಿಯೊಬ್ಬಳು ನಗರದ ಅನಧಿಕೃತ ಹೋಂ ಸ್ಟೇ ಒಂದರ ಬಾತ್‌ ರೂಂನಲ್ಲಿ ಕುಸಿದು ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ...

ಸಿದ್ದರಾಮಯ್ಯ ಅವರು ಕೊಳಕು ರಾಜಕಾರಣ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ

0
ಬೆಂಗಳೂರು: ಕೇಂದ್ರದಿಂದ ಅನುದಾನ ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ ಎಂಬ ಕರ್ನಾಟಕದ ಮುಖ್ಯಮಂತ್ರಿಯವರ ಆರೋಪವನ್ನು ಆಧಾರ ರಹಿತ ಎಂದು ಕರೆದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿದ್ದರಾಮಯ್ಯ ಅವರು ಕೊಳಕು ರಾಜಕಾರಣ ಮಾಡುತ್ತಿದ್ದಾರೆ ಮತ್ತು...

ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳು ಹೈ ಅಲರ್ಟ್ ಘೋಷಣೆ

0
ಉಡುಪಿ/ಚಿಕ್ಕಮಗಳೂರು: ಮಲೆನಾಡು ಮತ್ತು ಕರಾವಳಿಯಲ್ಲಿ ಭಾಗದಲ್ಲಿ ನಕ್ಸಲರ ಚುಟುವಟಿಕೆ ಮತ್ತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ನಕ್ಸಲ್ ನಿಗ್ರಹ ಪಡೆ...

ಹಿಂದೂ ಯುವಕನಿಗೆ ಅನ್ಯಕೋಮಿನ ಯುವಕರಿಂದ ಚಾಕು ಇರಿತ

0
ಶಿಕಾರಿಪುರ: ಹಿಂದೂ ಯುವಕನಿಗೆ ಅನ್ಯಕೋಮಿನ ಯುವಕರು ಚಾಕುವಿನಿಂದ ಇರಿದ ಘಟನೆ ಫೆ.6ರ ಮಂಗಳವಾರ ರಾತ್ರಿ ಪಟ್ಟಣದ ದೊಡ್ಡಪೇಟೆಯಲ್ಲಿ ನಡೆದಿದೆ. ದೊಡ್ಡಪೇಟೆಯಲ್ಲಿ ದ್ವಿಚಕ್ರವಾಹನವನ್ನು ಅಜಾಗರೂಕತೆಯಿಂದ ಓಡಿಸುತ್ತಿದ್ದನ್ನು ಪ್ರಶ್ನಿಸಿದ ಕುಮದ್ವತಿ ಕಾಲೇಜಿನಲ್ಲಿ ಕಂಪ್ಯೂಟರ್ ಆಪರೇಟರ್ ಅಗಿ ಕಾರ್ಯ...

ಆನ್ ಲೈನ್ ನಲ್ಲಿ ಬ್ಯುಸಿನೆಸ್ ಮಾಡುವ ಆಫರ್ ನೀಡಿ ೪೨.೮೦ ಲಕ್ಷ ವಂಚನೆ

0
ಮೈಸೂರು : ಆನ್ ಲೈನ್ ನಲ್ಲಿ ಬ್ಯುಸಿನೆಸ್ ಮಾಡುವ ಆಫರ್ ನೀಡಿದ ವಂಚಕನೊಬ್ಬ ಮಹಿಳೆಗೆ ೪೨.೮೦ ಲಕ್ಷ ದೋಖಾ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಚಾಮರಾಜಪುರಂ ನಿವಾಸಿ ಸಂಗೀತಾ ಎಂಬುವರೇ ಹಣ ಕಳೆದುಕೊಂಡ...

ಹುಣಸೂರು ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ

0
ಹುಣಸೂರು: ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ ನೀಡಿ ಇಲಾಖೆ ಸಿಬ್ಬಂದಿಗೆ ಚುರುಕು ಮುಟ್ಟಿಸಿದರು. ಸಾರ್ವಜನಿಕರಿಗೆ ಕಂದಾಯ ಇಲಾಖೆ ಮೌಲ್ಯಯುತ ಸೇವೆ ಸಲ್ಲಿಸಿ ವಿಶ್ವಾಸ ಗಳಿಸುವ ಬದಲಿಗೆ ಇಲಾಖೆ ಸಿಬ್ಬಂದಿ...

SSC : 121 ಸಹಾಯಕ, ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

0
ಫೆಬ್ರವರಿ 2024 ರ SSC ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ, ಕ್ಲರ್ಕ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 21-ಫೆಬ್ರವರಿ-2024...

ಆರೋಗ್ಯ-ಸ್ವಚ್ಛತೆ-ನೈರ್ಮಲ್ಯಕ್ಕೆ ಅವಿನಾಭಾವ ಸಂಬoಧ: ದಿನೇಶ್ ಗುಂಡೂರಾವ್

0
ಮೈಸೂರು: ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವ ತಮ್ಮೆಲ್ಲರ ಸೇವಾ ಮನೋಭಾವ ಮುಂದಿನ ದಿನಗಳಲ್ಲಿ ಪ್ರಶಸ್ತಿ ಪಡೆಯಬೇಕೆಂಬುವವರಿಗೆ ಪ್ರೇರಣೆಯಾಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.  ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಜೆ.ಕೆ.ಮೈದಾನ ಪ್ಲಾಟಿನಮ್ ಜ್ಯುಬಿಲಿ ಹಾಲ್‌ನಲ್ಲಿ ನಡೆದ ಸರ್ಕಾರಿ ಆಸ್ಪತ್ರೆಗಳ ಸ್ವಚ್ಚತೆ,ಶುಚಿತ್ವ ಮತ್ತು ನೈರ್ಮಲ್ಯಕ್ಕಾಗಿ ನೀಡಲಾಗುವ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು, ನಮ್ಮ ಮನೆ ಕಚೇರಿಗಳನ್ನು ಹೇಗೆ ಸ್ವಚ್ಛ ವಾಗಿಟ್ಟುಕೊಳ್ಳುತ್ತೇವೆಯೋ ಹಾಗೆ ನಾವು ಸೇವೆ ಒದಗಿಸುವ ಆಸ್ಪತ್ರೆಗಳನ್ನು ಜನಸ್ನೇಹಿಯಾಗಿಡುವ ಮೂಲಕ ಇಲಾಖೆಯನ್ನ ರಾಷ್ಟ್ರಮಟ್ಟದಲ್ಲಿ ಮಂಚೂಣಿಗೆ ಬರುವಂತೆ ನೋಡಿಕೊಳ್ಳೋಣ ಎಂದರು.  ವಿವಿಧ ಮಾನದಂಡಗಳಡಿ ಆಸ್ಪತ್ರೆಗಳನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಶೇ,70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವ ಆಸ್ಪತ್ರೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಆರೋಗ್ಯ ಇಲಾಖೆಯಡಿ ಬರುವ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ವಚ್ಚತೆ ಹಾಗೂ ನೈರ್ಮಲ್ಯದ ಕಡೆಗೆ ವಿಶೇಷ ಕಾಳಜಿವಹಿಸಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ ನೀಡುವುದನ್ನೂ ಪರಿಗಣಿಸಲಾಗುತ್ತದೆ ಎಂದರು.  ಮೈಸೂರಿನ ಆಸ್ಪತ್ರೆಗಳ ಗುಣಮಟ್ಟ ತುಂಬಾ ಹಿಂದಿರುವುದು ಕಂಡುಬoದಿದ್ದು ಶೇಕಡಾ 10 ರಷ್ಟು ಆಸ್ಪತ್ರೆಗಳು ಮಾತ್ರ 75 ಶೇಕಡಾ ಅಂಕ ಪಡೆದಿವೆ, ಇದು ಮುಖ್ಯ ಮಂತ್ರಿಗಳ ಜಿಲ್ಲೆ, ರಾಜ್ಯ ಕೇಂದ್ರಕ್ಕೆ ಹತ್ತಿರವಿರುವ ಜಿಲ್ಲೆ, ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ, ಇದು ಆಡಳಿತ ವ್ಯವಸ್ಥೆಯ ವೈಖರಿಯನ್ನು ಸೂಚಿಸುತ್ತದೆ, ಮುಂದಿನ ದಿನಗಳಲ್ಲಿ ಜಿಲ್ಲಾ ಆರೋಗ್ಯ ಕ್ಷೇತ್ರ ಉತ್ತಮ ಸಾಧನೆ ತೋರಬೇಕೆಂದರು.  ರಾಜ್ಯದ 2 ಸಾವಿರ ಆಸ್ಪತ್ರೆಗಳಿಗೆ ವಿವಿಧ ಹಂತಗಳಲ್ಲಿ ಪ್ರಶಸ್ತಿಗಳು ಬಂದಿದ್ದು, ಉಳಿದ ರಾಜ್ಯದ ಎಲ್ಲಾ ಆಸ್ಪತ್ರೆಗಳು ನಿಗದಿತ ಮಾನದಂಡಗಳನ್ನು ಪೂರೈಸಲೇಬೇಕೆಂದರು. ಪ್ರಮುಖವಾಗಿ ನಮ್ಮ ಸೇವೆ ಚನ್ನಾಗಿರಬೇಕು. ನಾವು ಬಡವರ ಹಾಗೂ ಸರ್ಕಾರದ ಕೆಲಸ ಮಾಡುತ್ತಿದ್ದೇವೆಂಬ ದೃಷ್ಟಿಯಿಂದ ಕೆಲಸ ಮಾಡಬೇಕು. ರಾಜ್ಯವನ್ನು ಆರೋಗ್ಯ ಕ್ಷೇತ್ರದಲ್ಲಿ ಮುಂದಿರುವoತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.  ಶಾಸಕರಾದ ಹರೀಶ್ ಗೌಡ ಮಾತನಾಡಿ ಕೆ.ಆರ್.ಆಸ್ಪತ್ರೆ ರಾಜ್ಯದ ಅತ್ಯಂತ ಹಳೇ ಆಸ್ಪತ್ರೆ ಆಗಿದ್ದು, ಲಕ್ಷಾಂತರ ರೋಗಿಗಳಿಗೆ ಸೇವೆ ನೀಡಿದೆ. ಸದ್ಯ ಆಸ್ಪತ್ರೆ ಮತ್ತು ಕಾಲೇಜು ಆವರಣ 89 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳ್ಳುತಿದ್ದು, ಸ್ವಚ್ಚತೆ ಸೇವೆ ನೀಡುವಲ್ಲಿ ಸಿಬ್ಬಂದಿಗಳು ಮುಂದಾಗಲಿ ಎಂದರು.  ಸಮಾರoಭದಲ್ಲಿ ಶಾಸಕರಾದ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಎನ್.ಎಚ್.ಆರ್.ಸಿ ಸಲಹೆಗಾರರಾದ ಶ್ರೀವಾಸ್ತವ, ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್, ಅನಿಲ್ ಕುಮಾರ್,ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ವಿವಿಧ ಜಿಲ್ಲೆಗಳ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆತರಲು ಅಧಿಕಾರಿಗಳು ಕ್ರಮವಹಿಸಬೇಕು: ಎಸ್ ಮಧು ಬಂಗಾರಪ್ಪ

0
ಮೈಸೂರು.: ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ತೊರೆಯುತ್ತಿದ್ದಾರೆ. ಅಧಿಕಾರಿಗಳು ಆ ಕಾರಣಗಳನ್ನು ತಿಳಿದು, ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಸರ್ಕಾರಿ ಶಾಲೆಗಳತ್ತ ಅವರನ್ನು ಕರೆತರಲು ಕ್ರಮವಹಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.  ಇಂದು ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್ ಸಾಭ್ ಸಭಾಂಗಣದಲ್ಲಿ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಕುರಿತು ಜಿಲ್ಲೆ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರೋನಾ ಬಂದ ನಂತರ ನೋಡುವುದಾದರೆ 14000 ಮಕ್ಕಳು ಹಲವಾರು ಕಾರಣಗಳಿಂದ ಶಾಲೆ ಬಿಟ್ಟು ಹೋಗಿರುವುದು ಕಂಡುಬoದಿದೆ. ಅಲ್ಲದೆ ಮೈಸೂರಿನಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಶಿಕ್ಷಣದ ಗುಣಮಟ್ಟದಲ್ಲಿ ಕಡಿಮೆ ಆಗುತ್ತಿರುವುದರಿಂದ 25000 ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗೆ ಓದಲು ಹೋಗುತ್ತಿದ್ದಾರೆ. ಇದಕ್ಕೆ ಶಿಕ್ಷಕರ ಕೊರತೆಯೂ ಕಾರಣವಾಗಿದ್ದು, ಅದರ ಸಲುವಾಗಿಯೇ 1000 ಹೆಚ್ಚುವರಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಹೆಚ್ಚು ಬುದ್ದಿವಂತರು ಮತ್ತು ತಿಳುವಳಿಕೆಯುಳ್ಳವರು ಅವರನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡು ಮುಂಬರುವ ವರ್ಷಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  ರಾಜ್ಯದಲ್ಲಿ ಶಿಕ್ಷಣ ಇಲಾಖೆಯು ದೊಡ್ಡ ಇಲಾಖೆಯಾಗಿದೆ. ಹಾಗೆಯೇ ಇಲ್ಲಿ ಸಮಸ್ಯೆಗಳು ಇವೆ. ಇದನ್ನು ಪರಿಹರಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಬೇಕು. ರಾಜ್ಯದಾದ್ಯಂತ 48000 ಸರ್ಕಾರಿ ಶಾಲೆಗಳಿದ್ದು, ಸರ್ಕಾರದಿಂದ ಬಂದoತಹ ಅನುದಾನದಲ್ಲ್ಲಿ ಮುಂದಿನ ಮೂರು ವರ್ಷದೊಳಗೆ 3000 ಕೆ.ಪಿ.ಎಸ್. ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು  ಶಾಲೆಯ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ಮತ್ತು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಪೋಷಕರಿಗೆ ಹಾಗೂ ಮಕ್ಕಳಿಗೆ ತಿಳಿಯುವಂತೆ ಮಾಡಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕು. ಮಾಹಿತಿಯ ಪ್ರಕಾರ 7 ನೇ ತರಗತಿಯ ನಂತರ ಮಕ್ಕಳು ಶಾಲೆಯನ್ನು ಬಿಡುತ್ತಿದ್ದಾರೆ. ಈ ಬಾರಿಯ ಶೈಕ್ಷಣಿಕ ವರ್ಷ ಪ್ರಾರಂಭವಾಗಲು ಇನ್ನು 3 ರಿಂದ 4 ತಿಂಗಳ ಕಾಲಾವಕಾಶ ಇರುವುದರಿಂದ ಆದಷ್ಟು ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಿ ದಾಖಲಾತಿ ಹೆಚ್ಚಿಸಿ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಬೇಕು ಎಂದರು.  ಸಮವಸ್ತ್ರ, ಶೂ, ಮದ್ಯಾಹ್ನ ಊಟ, ಹಾಲು, ಮೊಟ್ಟೆ ಇವೆಲ್ಲವೂ ಎಲ್ಲಾ ಮಕ್ಕಳಿಗೂ ಸಿಗುವಂತೆ ಮಾಡಬೇಕು. ಮಕ್ಕಳಿಗೆ ಆಸಕ್ತಿ ತರುವ ಯೋಜನೆಗಳನ್ನು ರೂಪಿಸಿ ಅವರಲ್ಲಿ ಓದಿನ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಆತ್ಮ ಸ್ಥೈರ್ಯ ತುಂಬಬೇಕು. ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ತರುವುದು ನಮ್ಮ ಕರ್ತವ್ಯ. ಎಲ್ಲಾ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಿ ಮಕ್ಕಳು ಸರ್ಕಾರಿ ಶಾಲೆಗಳತ್ತ ತಾವಾಗಿಯೇ ಬರುವಂತೆ ಮಾಡಬೇಕು. ಆದರ್ಶ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ ಪಿ ಯು ಕಾಲೇಜುಗಳಾಗಿ ಪರಿವರ್ತಿಸಬೇಕು ಎಂದರು.  ಪ್ರಾಥಮಿಕ ಶಾಲಾ ಮಕ್ಕಳು ನೆಲದಲ್ಲಿ ಕೂತು ಪಾಠ ಕೇಳುವ ಪರಿಸ್ಥಿತಿ ಕಂಡುಬಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚುವರಿ ಡೆಸ್ಕ್ ವ್ಯವಸ್ಥೆ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾನ ವಿದ್ಯಾಭ್ಯಾಸ ಪಡೆಯುವಂತೆ ಮಾಡಲಾಗುತ್ತದೆ. ಫೇಲ್ ಆದ ಯಾವುದೇ ವಿದ್ಯಾರ್ಥಿಗೆ ಮತ್ತೊಂದು ಅವಕಾಶ ಇದೆ ಎಂದು ಉತ್ತೇಜನ ನೀಡಬೇಕೆ ಹೊರತು, ಅವರನ್ನು ಮಾನಸಿಕವಾಗಿ ಕುಂದಿಸುವ ಕೆಲಸ ಆಗಬಾರದು. ಡಿಜಿಟಲ್ ಲೈಬ್ರರಿಗಳನ್ನು ಸ್ಥಾಪಿಸಿ ಅದರಿಂದ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುವಂತೆ ಆಗಬೇಕು ಎಂದು ಹೇಳಿದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ. ಎಂ. ಗಾಯತ್ರಿ ಅವರು ಮಾತನಾಡಿ ಶಾಲೆಯ ಸ್ವಚ್ಛತೆ ಹಾಗೂ ಶೌಚಾಲಯದ ಸ್ವಚ್ಛತೆಗೆ ಸಂಬoಧಿಸಿದoತೆ ಗ್ರಾಮ ಪಂಚಾಯಿತಿಗಳಲ್ಲಿ ಸ್ಕ್ಯಾವೆಂಜರ್ಸ್ಗಳನ್ನು ನೇಮಿಸಿ ಸ್ವಚ್ಛಗೊಳಿಸಲಾಗುವುದು. ವಿದ್ಯಾರ್ಥಿಗಳು ಶುಲ್ಕ ಪಾವತಿಸಲಾಗದೆ ಶಾಲೆ ಬಿಡುತ್ತಿದ್ದಾರೆ. ಇದಕ್ಕೂ ಪರಿಹಾರವಾಗಿ ಅನುದಾನಿಗಳಿಂದ ಹಣ ಪಡೆದು ಶುಲ್ಕ ಪಾವತಿಸಿ ಮಕ್ಕಳ ಓದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ ಅಲ್ಲಿ ಓದಿಗೆ ಸಂಬoಧಿಸಿದ ವಿವಿಧ ತರಬೇತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.  ಮಕ್ಕಳನ್ನು ಮಾನಸಿಕವಾಗಿ ಬದಲಾವಣೆ ಮಾಡಿ ಅವರಲ್ಲಿ ಓದುವ ಮನೋಭಾವವನ್ನು ಬೆಳೆಸುವಂತೆ ಮಾಡಬೇಕು.ಅದಕ್ಕಾಗಿ ವಿಶೇಷ ತರಗತಿಗಳನ್ನು ಮತ್ತು ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.  ಮೈಸೂರು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಹೆಚ್. ಕೆ ಪಾಂಡು ಅವರು ಮಾತನಾಡಿ ಈ ಬಾರಿ ಮೈಸೂರು ಸರಾಸರಿ ಸಾಕ್ಷರತಾ ಪ್ರಮಾಣವು 87.67% ಇದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿಸುವ ಗುರಿ ಇದೆ ಎಂದರು.  ಇದುವರೆಗೂ ಮಕ್ಕಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ಪ್ರೇರಣಾದಾಯಿ ಕಾರ್ಯಕ್ರಮ, ರೇಡಿಯೋ ಕಾರ್ಯಕ್ರಮ, ಸಸ್ಯ ಶ್ಯಾಮಲ ಕಾರ್ಯಕ್ರಮ, ಶಾಲಾ ಬಿಟ್ಟ ಮಕ್ಕಳ ಸಮೀಕ್ಷೆ ಜಾಥಾ, ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಫಲಿತಾಂಶ ಬರುತ್ತಿದೆ. ಈಗಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮುಂದಿನ ವರ್ಷಗಳಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಕೆಲಸ ಮಾಡಲಾಗುತ್ತದೆ ಎಂದರು.  ಚಾಮರಾಜನಗರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 1171 ಸರ್ಕಾರಿ ಶಾಲೆಗಳಿದ್ದು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2023-24 ನೇ ಸಾಲಿನ ದಾಖಲಾತಿಯಲ್ಲಿ 3938 ಕುಸಿತ ಕಂಡಿದ್ದು ಇದಕ್ಕೆ ಪ್ರಾಥಮಿಕ ಶಿಕ್ಷಣದ ನಂತರದ ವಿದ್ಯಾಭ್ಯಾಸ ಕ್ಕೆ ಮಕ್ಕಳಿಗೆ ಇರುವ ಸೌಲಭ್ಯದ ಕೊರತೆ, ಬುಡಕಟ್ಟು ಜನಾಂಗದ ಮಕ್ಕಳು ಶಾಲೆ ಬಿಡುತ್ತಿರುವುದು ಹಾಗೂ ಖಾಸಗಿ ಶಾಲೆ ಮೇಲಿನ ಒಲವಾಗಿದೆ ಎಂದರು.  ಸರಾಸರಿ ಸಾಕ್ಷರತಾ ಪ್ರಮಾಣವು 93% ಇದ್ದು, ಇದನ್ನು ಹೆಚ್ಚಿಸಲು ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಮಕ್ಕಳು ಹೆಚ್ಚಾಗಿರುವುದರಿಂದ ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ನಿರಂತರವಾಗಿ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಉತ್ತೇಜಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಸರ್ಕಾರಿ ಶಿಕ್ಷಕರಿಂದಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವು ಮಾಡಿಕೊಡಲಾಗುತ್ತಿದೆ ಎಂದರು.  ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ, ಚಾಮರಾಜನಗರದ ಮುಖ್ಯ ನಿರ್ವಹಣಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ, ಸಚಿವರ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್, ಮೈಸೂರು ಜಿಲ್ಲೆಯ ಬಿಇಒ ಗಳ ಉಪನಿದೇರ್ಶಕರಾದ ಮಹದೇವಸ್ವಾಮಿ, ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

EDITOR PICKS