ಮನೆ Uncategorized ಅಸ್ಪೃಶ್ಯತೆ ನಿವಾರಣೆ ಹೋರಾಟದಲ್ಲಿ ಬಾಬೂಜಿ ಪಾತ್ರ ಅವಿಸ್ಮರಣೀಯ; ಸಚಿವ ಕೆ.ಗೋಪಾಲಯ್ಯ

ಅಸ್ಪೃಶ್ಯತೆ ನಿವಾರಣೆ ಹೋರಾಟದಲ್ಲಿ ಬಾಬೂಜಿ ಪಾತ್ರ ಅವಿಸ್ಮರಣೀಯ; ಸಚಿವ ಕೆ.ಗೋಪಾಲಯ್ಯ

0

ಮಂಡ್ಯ(Mandya): ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಡಾ.ಬಾಬೂ ಜಗಜೀವನ ರಾಂ (dr.Babu Jagjeevan ram) ಅವರು ನಡೆಸಿದ ಹೋರಾಟ ಅವಿಸ್ಮರಣೀಯ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ (K.Gopalaiah) ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿಂದು ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ|| ಬಾಬು ಜಗಜೀವನರಾಂ ರವರ 115ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸುದೀರ್ಘ ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ ಅಪರಿಮಿತವಾಗಿ ಸೇವೆ ರಾಷ್ಟ್ರದ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಆಹಾರ ಕೊರತೆ ಎದುರಾದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ “ಹಸಿರು ಕ್ರಾಂತಿಯ ಹರಿಕಾರರೆಂದೇ ಖ್ಯಾತಿಯಾಗಿದ್ದ ಅವರು, ಹಾಗೂ ರಕ್ಷಣಾ ಸಚಿವರಾಗಿ ಗುರುತರ ಸೇವೆ ಸಲ್ಲಿಸಿದ್ದಾರೆ ಎಂದರು.

ರೈತ, ಯೋಧ, ಕಾರ್ಮಿಕರು ಎಂದು ಕಾರ್ಮಿಕರ ನ್ಯಾಯ ಮಂಡಳಿಗಳನ್ನು ಅಸ್ಥಿತ್ವಕ್ಕೆ ತಂದ ಬಾಬೂಜಿ ರವರನ್ನು “ಕಾರ್ಮಿಕ ಕಾಯ್ದೆಗಳ ಶಿಲ್ಪಿ” ಎಂದೇ ದೇಶ ಗೌರವದಿಂದ ಕರೆಯಿತು. ಸಮಾಜದಲ್ಲಿನ ಅಸೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅಂತಹವ್ಯಕ್ತಿಯ ಆದರ್ಶ ಪಾಲನೆ ನಮ್ಮಿಂದ ಆಗಬೇಕು. ಇಂತಹ ಮಹಾನ್ ವ್ಯಕ್ತಿಯ ಸಾಧನೆಯನ್ನು ಅರಿತ ರಾಜ್ಯ ಸರ್ಕಾರವು ಅವರ ಸ್ಮರಣಾರ್ಥ ಡಾ|| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಚಮ್ಮಾರರ ಬದುಕಿಗೆ ಆಶಾದೀಪವಾಗಿದೆ ಎಂದು ಸ್ಮರಿಸಿದರು.

ಶ್ರೀರಂಗಪಟ್ಟಣ ಟೌನ್‌ನಲ್ಲಿ ರೂ.300.00 ಲಕ್ಷಗಳಿಗೆ ಮತ್ತು ಕೆ.ಆರ್.ಪೇಟೆ ಟೌನ್‌ನಲ್ಲಿ ರೂ.273.22 ಲಕ್ಷಗಳ ಅನುದಾನದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಕಾಮಗಾರಿಯು ಮುಕ್ತಾಯ ಹಂತದಲ್ಲಿದೆ ಹಾಗೂ ಮಂಡ್ಯ ಜಿಲ್ಲೆಯ ತಾಲ್ಲೂಕು ವ್ಯಾಪ್ತಿಯ ಒಟ್ಟು 30 ಗ್ರಾಮ ಮಟ್ಟದ ಭವನಗಳನ್ನು ತಲಾ ರೂ.12.00 ಲಕ್ಷಗಳಲ್ಲಿ ನಿರ್ಮಾಣ ಮಾಡಲು ಮಂಜೂರಾಗಿದ್ದು, ಸದರಿ ಭವನಗಳ ಪೈಕಿ 10 ಭವನಗಳು ಪೂರ್ಣಗೊಂಡಿದ್ದು, 20 ಭವನಗಳು ಪ್ರಗತಿ ಹಂತದಲ್ಲಿರುತ್ತದೆ.ಮಂಡ್ಯ ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು 2018-19ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಒಟ್ಟಾರೆ ರೂ.1910.00 ಲಕ್ಷಗಳು ಮಂಜೂರಾಗಿದೆ ಎಂದು ಹೇಳಿದರು.

ಇದೇ ವೇಳೆ ಚರ್ಮ ಕರ್ಮಿಗಳ 11 ಮಕ್ಕಳಿಗೆ ಉಚಿತ (Free) ಲ್ಯಾಪ್‌ಟಾಪ್ (Laptop) ಗಳನ್ನು ಸಚಿವರು ವಿತರಿಸಿದರು.