ಮನೆ ಮನರಂಜನೆ ತಮ್ಮನ ಕೊನೆ ಸಿನಿಮಾದಲ್ಲಿ ಶಿವಣ್ಣ,  ರಾಘವೇಂದ್ರ ರಾಜ್ ಕುಮಾರ್

ತಮ್ಮನ ಕೊನೆ ಸಿನಿಮಾದಲ್ಲಿ ಶಿವಣ್ಣ,  ರಾಘವೇಂದ್ರ ರಾಜ್ ಕುಮಾರ್

0

ನಟ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಸಿನಿಮಾದಲ್ಲಿ ಅಪ್ಪು  ಸೈನಿಕನ ಪಾತ್ರದಲ್ಲಿ ಕಾಣಸಿಕೊಂಡಿರವುದು ಎಲ್ಲರಿಗೂ ಗೊತ್ತಿತ್ತು. ಆದರೆ, ಶಿವಣ್ಣ ಕೂಡ ಈ ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ.

ತಮ್ಮನ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ನಟಿಸಿರುವುದು ಎಲ್ಲರಿಗೂ ಗೊತ್ತೆ ಇತ್ತು. ಆದರೆ, ಈಗ ಶಿವಣ್ಣ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ.

ಇವರನ್ನು ನೋಡಿಯೇ ಸಿನಿಮಾದಲ್ಲಿ ಅಪ್ಪು ಸೈನಿಕನಾಗಬೇಕು ಎಂದು ಅಂದುಕೊಳ್ಳುತ್ತಾರೆ. ಶಿವಣ್ಣ ಪಾತ್ರವನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಅಪ್ಪು ಸೈನಿಕನಾಗುತ್ತಾರೆ.

ಇನ್ನೂ ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ಕೂಡ ನಟಿಸಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ಗೆ ಶಿವಣ್ಣ ಗುರಿ ತೋರಿಸಿಕೊಟ್ಟರೆ, ರಾಘಣ್ಣ ಪುನೀತ್ಗೆ ಗುರುವಾಗಿದ್ದಾರೆ. ಹೌದು, ಶಿವಣ್ಣ ಆಶ್ರಮದ ಗುರುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಶಿವಣ್ಣ -ರಾಘಣ್ಣ ಒಂದೇ ಸೀನ್ನಲ್ಲಿ ಕಾಣಿಸಿಕೊಂಡಿರದಿದ್ದರೂ, ಶಿವಣ್ಣ – ರಾಘಣ್ಣ ಮುಖಾಮುಖಿಯಾಗಿದ್ದಾರೆ.

ಬೆಂಗಳೂರಿನು ವೀರೇಶ್ ಚಿತ್ರಮಂದಿರದಲ್ಲಿ ಹಿರಿಯ ಅಜ್ಜಿಯೊಬ್ಬರು ಜೇಮ್ಸ್ ಸಿನಿಮಾ ನೋಡಿ್ದ್ರು,.  ಮೊದಲ ಷೋ ನೋಡಬೇಕೆಂಬ ಆಸೆಯಿಂದ ಕುಟುಂಬದ ಮಹಿಳಾ ಸದಸ್ಯರ ಜೊತೆ ಆಗಮಿಸಿದ ಹಿರಿಯಜ್ಜಿ, ಸಿನಿಮಾ ನೋಡಿದ್ರು, ಬಳಿಕ ಅಪ್ಪು ನೆನೆದು ಕಣ್ಣೀರು ಹಾಕಿದ್ರು.

ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಅಪ್ಪು ಸಿನಿಮಾ ನೋಡಲು ಐವರು ವಿಶೇಷ ಚೇತನರು . ಮೊದಲ ಷೋ ಟಿಕೆಟ್ ಸಿಕ್ಕಿದೆ. ಹೀಗಾಗಿ ಅದೆಷ್ಟೇ ಲೇಟಾಗಲಿ ಜೇಮ್ಸ್ ಸಿನಿಮಾ ನೋಡಿಯೇ ಹೋಗುತ್ತೇವೆ ಎಂದರು.  ಇನ್ನು 330 ಕಿಲೋ ಮೀಟರ್ ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಸಿನಿಮಾ ನೋಡಲು ಬಂದ ವಿಶೇಷ ಚೇತನ, ಸ್ನೇಹಿತರ ಸಹಾಯದಿಂದ ಮೊದಲ ಶೋ ನೋಡಿದ್ರು.

ಬೆಂಗಳೂರಿನ ಥಿಯೇಟರ್ ಒಂದರಲ್ಲಿ ಲಕ್ಕಿ ವಿಜೇತ ಅಭಿಮಾನಿಗಳಿಗೆ ಗೋಲ್ಡ್ ಕಾಯಿನ್ ವಿತರಿಸಲಾಯ್ತು. 2 ಗ್ರಾಂನ ಗೋಲ್ಡ್ ಕಾಯಿನ್ ಮೇಲೆ ಅಪ್ಪು ಅಮರ ಅಂತ ಬರೆಯಲಾಗಿದೆ.. ತಿಲಕನಗರದ ಅಭಿಮಾನಿಯೊಬ್ಬರು ಈ ಲಕ್ಕಿ ಗೋಲ್ಡ್ ಕಾಯಿನ್ ಪಡೆದಿದ್ದಾರೆ.

ಹಿಂದಿನ ಲೇಖನಕೋವಿಡ್-19: ದೇಶದಲ್ಲಿಂದು 2,539 ಹೊಸ ಪ್ರಕರಣ ಪತ್ತೆ
ಮುಂದಿನ ಲೇಖನಮೈಸೂರಿನಲ್ಲಿ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ: ಪಟಾಕಿ ಸಿಡಿಸಿ ಅಭಿಮಾನಿಗಳಿಂದ ಸಂಭ್ರಮ