ಮನೆ ರಾಜ್ಯ ಸೇನಾ ತರಬೇತಿ ವೇಳೆ ಬಾಗಲಕೋಟೆ ಯೋಧನಿಗೆ ಹೃದಯಾಘಾತ!

ಸೇನಾ ತರಬೇತಿ ವೇಳೆ ಬಾಗಲಕೋಟೆ ಯೋಧನಿಗೆ ಹೃದಯಾಘಾತ!

0

ಬಾಗಲಕೋಟೆ: ರಾಜ್ಯದಲ್ಲಿ ಯುವಜನರಲ್ಲಿ ಹೃದಯಾಘಾತದಿಂದಾಗುವ ಸಾವುಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಇತ್ತೀಚೆಗೆ ಕಳೆದ ಒಂದು ವಾರದಲ್ಲಿ ಐವರು ಯುವಕರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕ ಹುಟ್ಟಿಸಿದೆ. ಇತ್ತೀಚಿನ ಘಟನೆನಲ್ಲಿ, ಬಾಗಲಕೋಟೆ ಜಿಲ್ಲೆಯ ಚಿಂಚಲಕಟ್ಟಿ ಎಲ್‌ಎಟಿ ಗ್ರಾಮದ 23 ವರ್ಷದ ಯೋಧ ಉಪೇಂದ್ರ ಸೋಮನಾಥ ರಾಠೋಡ ಸೇನಾ ತರಬೇತಿ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಿಂಚಲಕಟ್ಟಿ ಎಲ್‌ಎಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ರಾಠೋಡ (23) ಬುಧವಾರ ಸೇನಾ ತರಬೇತಿ ವೇಳೆ ಹೃದಯಾಘಾತದಿಂದ ಚಂಡೀಗಢದಲ್ಲಿ ಮೃತಪಟ್ಟಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅಸ್ಸಾಂ ರೈಫಲ್ಸ್‌ನಲ್ಲಿ ಸೇನೆಗೆ ಆಯ್ಕೆಯಾಗಿದ್ದ ಉಪೇಂದ್ರ, ಮೂರು ತಿಂಗಳಿನಿಂದ ಚಂಡೀಗಢದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದರು. ಕಳೆದ ಬುಧವಾರ ತರಬೇತಿ ವೇಳೆ ಸೋಮನಾಥ ಅವರಿಗೆ ಹೃದಯಘಾತ ಸಂಭವಿಸಿ ಸಾವನಪ್ಪಿದ್ದಾರೆ.

ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗಿದ್ದು, ಇಂದು ಅಂತ್ಯಕ್ರಿಯೆ ನೆರವೇರಲಿದೆ.